logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ilium
ನಾಮವಾಚಕ
ರೊಂಡಿ ಮೂಳೆ; ಚಪ್ಪೆ ಎಲುಬು; ಕಟ್ಯಸ್ಥಿ.

ilk
ಗುಣವಾಚಕ ಪದಗುಚ್ಛ
  • (ಸ್ಕಾಟ್ಲಂಡ್‍) ಅದೇ ಆದ.
  • (ಆಡುಮಾತು) ಅದೇ – ವಂಶದ, ಕುಲದ, ಮನೆತನದ, ವರ್ಗದ, ಗುಂಪಿನ ಯಾ ಪರಿವಾರದ: that ilk ಆ ಮನೆತನ.

  • ill
    ಗುಣವಾಚಕ ನುಡಿಗಟ್ಟು
  • (ಸಾಮಾನ್ಯವಾಗಿ ಆಖ್ಯಾತಕ ಪ್ರಯೋಗ) ಬೇನೆ ಬಿದ್ದ; ಅನಾರೋಗ್ಯದ; ಅಸ್ವಸ್ಥ; ಕಾಯಿಲೆಯ; ರೋಗಿಷ್ಠ; ರೋಗವುಳ್ಳ: he was ill ಅವನಿಗೆ ಕಾಯಿಲೆಯಾಯಿತು. he was taken ill with (of) disease ಅವನಿಗೆ ಆ ಬೇನೆಯಿಂದ ಅನಾರೋಗ್ಯವಾಯಿತು. ill with anxiety etc. ಚಿಂತೆ ಮೊದಲಾದವುಗಳಿಂದ ಬೇನೆ ಹಿಡಿದ.
  • (ಆರೋಗ್ಯದ ವಿಷಯದಲ್ಲಿ) ನೆಟ್ಟಗಿಲ್ಲದ; ಸರಿಯಾಗಿಲ್ಲದ; ಕೆಟ್ಟುಹೋದ.
  • ಅನೈತಿಕ; ನೀತಿಗೆಟ್ಟ; ಶೀಲಗೆಟ್ಟ; ಅನೀತಿಯ: ill fame ಕೆಟ್ಟ ಹೆಸರು; ದುರ್ಯಶಸ್ಸು.
  • ದ್ವೇಷದ; ಹಗೆತನದಿಂದ ಕೂಡಿದ: ill blood, ill feeling, ill will ದ್ವೇಷ, ಹಗೆತನ.
  • ಹಾನಿಕರ; ಅಪಾಯಕರ; ಕೆಡುಕು ಮಾಡುವ: ill effects ದುಷ್ಪರಿಣಾಮಗಳು.
  • ಹಾಳಾದ; ಹೀನ; ಅನಿಷ್ಟ; ದರಿದ್ರ; ಅನರ್ಥದ; ಅನಾಹುತದ: ill fortune ಹೀನ ಅದೃಷ್ಟ.
  • (ಪ್ರಾಚೀನ ಪ್ರಯೋಗ) ಕಷ್ಟವಾದ; ಪ್ರಯಾಸದ: ill to please ಮೆಚ್ಚಿಸಲು ಕಷ್ಟವಾದ.
  • ದೋಷದಿಂದ ಕೂಡಿದ; ಲೋಪವುಳ್ಳ.
  • ಜಾಣ್ಮೆಯಿಲ್ಲದ; ಚತುರತೆಯಿಲ್ಲದ; ಅನಿಪುಣ; ಅಕುಶಲ: ill taste ದುಷ್ಟಾಭಿರುಚಿ. ill management ಅಕುಶಲ ನಿರ್ವಹಣೆ.
  • (ಮರ್ಯಾದೆ ಯಾ ನಡವಳಿಕೆಯ ವಿಷಯದಲ್ಲಿ) ತರವಲ್ಲದ; ತಗದ; ಸಲ್ಲದ; ಅಯೋಗ್ಯ; ಅಯುಕ್ತ; ಅನುಚಿತ.

  • ill
    ನಾಮವಾಚಕ ನುಡಿಗಟ್ಟು
    speak ill of (ಯಾವುದೇ ವಿಷಯದಲ್ಲಿ) ಕೆಟ್ಟದ್ದನ್ನು ಆಡು, ನುಡಿ; ದೂಷಣೆಯ ಮಾತನಾಡು.
  • ಕೇಡು; ಕೆಡುಕು; ಅನಿಷ್ಟ; ಅನರ್ಥ: the various ills of life ಬದುಕಿನ ಬಗೆಬಗೆಯ ಅನಿಷ್ಟಗಳು.
  • ಹಾನಿ; ಕೆಡುಕು; ಅಪಾಯ: do ill ಹಾನಿಮಾಡು; ಕೇಡೆಣಿಸು; ಕೇಡು ಬಗೆ.
  • (ಬಹುವಚನದಲ್ಲಿ) ಕೇಡುಗಳು; ಆಪತ್ತುಗಳು; ದುರದೃಷ್ಟಗಳು.
  • (ಬಹುವಚನದಲ್ಲಿ) ರೋಗ; ಪಿಡುಗು (ರೂಪಕವಾಗಿ ಸಹ): social ills ಸಾಮಾಜಿಕ ಪಿಡುಗುಗಳು. ills of childhood ಬಾಲ್ಯದ ರೋಗರುಜಿನಗಳು.

  • ill
    ಕ್ರಿಯಾವಿಶೇಷಣ ನುಡಿಗಟ್ಟು
    ill at ease ಮುಜುಗರಗೊಂಡು; ಸಂಕೋಚದಿಂದ; ಕಸಿವಿಸಿಯಿಂದ; ಮನಸ್ಸಮಾಧಾನವಿಲ್ಲದೆ; ನೆಮ್ಮದಿಯಿಲ್ಲದೆ: they were ill at ease among strangers ಅಪರಿಚಿತರ ನಡುವೆ ಅವರು ಮುಜುಗರಪಟ್ಟುಕೊಂಡರು.
  • ಕೆಟ್ಟದ್ದಾಗಿ; ಅಯೋಗ್ಯವಾಗಿ: behaved ill ಕೆಟ್ಟದಾಗಿ ವರ್ತಿಸಿದ.
  • ಪ್ರತಿಕೂಲವಾಗಿ; ವಿರೋಧವಾಗಿ: it would have gone ill with him ಅವನಿಗೆ ಪ್ರತಿಕೂಲವಾಗುವುದರಲ್ಲಿತ್ತು.
  • ಅತೃಪ್ತಿಕರವಾಗಿ; ಅಸಮರ್ಪಕವಾಗಿ.
  • ಸಾಕಾಗದಂತೆ; ಸಾಲದಂತೆ: ill provided ಸಾಕಾದಷ್ಟು ಒದಗಿಸದ.
  • ಅನುಚಿತವಾಗಿ; ತಕ್ಕದ್ದಲ್ಲದೆ; ಸರಿಯಾಗಿರದೆ; ಯುಕ್ತವಾಗಿರದೆ; ಯೋಗ್ಯವಲ್ಲದ ರೀತಿಯಲ್ಲಿ: it ill becomes him to speak ಅವನು ಮಾತನಾಡುವುದು ಅವನಿಗೆ ತಕ್ಕುದಲ್ಲ.
  • ಸುಲಭಸಾಧ್ಯವಲ್ಲದೆ; ಪ್ರಯಾಸದಿಂದ; ಕಷ್ಟದಿಂದ; ದುಷ್ಕರವಾಗಿ; ದುಶ್ಶಕ್ಯವಾಗಿ: can ill afford to do it ಅದನ್ನು ಮಾಡುವುದು ಸುಲಭ ಸಾಧ್ಯವಿಲ್ಲ, ದುಷ್ಕರ.

  • Ill
    ಸಂಕ್ಷಿಪ್ತ
    Illinois.

    ill breeding
    ನಾಮವಾಚಕ
    ಅಸಭ್ಯ ವರ್ತನೆ; ಅಸಂಸ್ಕೃತ ನಡೆವಳಿಕೆ; ಮರ್ಯಾದೆಯಿಲ್ಲದ ನಡೆವಳಿ.

    ill fame
    ನಾಮವಾಚಕ
    ಕೆಟ್ಟಹೆಸರು; ಕುಖ್ಯಾತಿ; ಅಪಖ್ಯಾತಿ.

    ill humour
    ನಾಮವಾಚಕ
    ಅಪ್ರಸನ್ನತೆ; ಸಿಡುಕು; ಕಿರಿಕಿರಿ; ಅಸಂತೋಷ; ಅಸಮಾಧಾನ (ಸ್ಥಿತಿ).

    ill nature
    ನಾಮವಾಚಕ
  • ಕೇಡಿಗತನ; ದುಷ್ಟ ಸ್ವಭಾವ.
  • ದ್ವೇಷ; ಹಗೆತನ.
  • ಸೇಡು (ಬುದ್ಧಿ).
  • ಸಿಡುಕು ಸ್ವಭಾವ.
  • ಮಾತ್ಸರ್ಯ ಪ್ರಕೃತಿ.


  • logo