logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ECT
ಸಂಕ್ಷಿಪ್ತ
electroconvulsive therapy.

ecto-
ಸಮಾಸ ಪೂರ್ವಪದ
ಹೊರ, ಹೊರಗಿನ, ಬಾಹ್ಯ, ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.

ectoblast
ನಾಮವಾಚಕ
(ಜೀವವಿಜ್ಞಾನ) ಕೋಶದ ಹೊರ — ಪದರ, ಪೊರೆ.

ectoderm
ನಾಮವಾಚಕ
(ಜೀವವಿಜ್ಞಾನ) ಬಾಹ್ಯಕೋಶಸ್ತರ; ಬಹುಕೋಶಜೀವಿಗಳ ಭ್ರೂಣದ ಪ್ರಾರಂಭಾವಸ್ಥೆಯಲ್ಲಿ ಅದರ ಅತ್ಯಂತ ಹೊರಗಿನ ಕೋಶಪದರ.

ectogenesis
ನಾಮವಾಚಕ
(ಜೀವವಿಜ್ಞಾನ) ಬಹಿರ್ವರ್ಧನ; ಬಾಹ್ಯವರ್ಧನ; ಎಕ್ಟೋಜೆನಿಸಿಸ್‍; ಎಕ್ಟೋಜನನ; (ಪರಾವಲಂಬಿಗಳ ವಿಷಯದಲ್ಲಿ) ಜೀವಿಯೊಂದರ ಹೊರಗಡೆ ರಚನೆಗಳು ರೂಪುಗೊಳ್ಳುವುದು.

ectogenetic
ಗುಣವಾಚಕ
(ಜೀವವಿಜ್ಞಾನ) ಬಹಿರ್ವರ್ಧನದ; ಬಾಹ್ಯವರ್ಧನದ; ಎಕ್ಟೋಜಿನೆಟಿಕ್‍; ಎಕ್ಟೋಜನ್ಯ; (ಪರಾವಲಂಬಿಗಳ ವಿಷಯದಲ್ಲಿ) ಜೀವಿಯೊಂದರ ಹೊರಗಡೆ ರೂಪುಗೊಂಡ.

ectogenic
ಗುಣವಾಚಕ
  • (ವ್ಯಾಧಿಯ ವಿಷಯದಲ್ಲಿ) ಬಹಿರ್ಜನ್ಯ; ಬಾಹ್ಯಜನ್ಯ; ಬಾಹ್ಯಕಾರಣಗಳಿಂದ ಉಂಟಾದ.
  • = ectogenous.

  • ectogenous
    ಗುಣವಾಚಕ
    (ಜೀವವಿಜ್ಞಾನ) (ಕೋಶಕಾರಕ ಜೀವಾಣುಗಳ ವಿಷಯದಲ್ಲಿ) ಬಹಿರ್ಭವ; ಬಹಿರ್ವರ್ಧನೆಯ; ಬಾಹ್ಯವರ್ಧನೆಯ; ಆತಿಥೇಯ ದೇಹದ ಹೊರಗಡೆ ಬೆಳೆಯಬಲ್ಲ, ದ್ಧಿಯಾಗಬಲ್ಲ.

    ectomorph
    ನಾಮವಾಚಕ
    ಎಕ್ಟೋಮಾರ್ಹ್‍; (ಭ್ರೂಣದ ಹೊರಪದರದಿಂದ ರೂಪಗೊಂಡ ರಚನೆಗಳು ಪ್ರಧಾನವಾಗಿರುವ) ಸಣಕಲ ಮನುಷ್ಯ.

    ectomorphic
    ಗುಣವಾಚಕ
    ಎಕ್ಟೋಮಾರ್ಹಿಕ್‍; (ಭ್ರೂಣದ ಹೊರಪದರದಿಂದ ರೂಪುಗೊಂಡ ರಚನೆಗಳು ಪ್ರಧಾನವಾಗಿರುವ) ಸಣಕಲ ಮನುಷ್ಯ.


    logo