ನಿರಾರ್ದ್ರಮಾಡು; ಜಲಾಂಶವನ್ನು ಹೋಗಲಾಡಿಸು; ನೀರಿನ ಅಂಶ ಕಳೆ.
ಸುಟ್ಟು ನಿರ್ಮಲೀಕರಿಸು; ಸುಟ್ಟು ಅಶುದ್ಧಾಂಶಗಳನ್ನು ತೆಗೆದುಹಾಕು ಯಾ ತೆಗೆದು ಹಾಕಿ ಚೊಕ್ಕಮಾಡು.
ಸುಟ್ಟು ಬೂದಿಮಾಡು; ಭಸ್ಮೀಕರಿಸು; ಭಸ್ಮ ಮಾಡು.
calciner
ನಾಮವಾಚಕ
ಹುರಿಯುವ, ಸುಡುವ—ಗೂಡು, ಒಲೆ, ಕುಲುಮೆ ಮೊದಲಾದವು.
ಸುಣ್ಣ(ಮೊದಲಾದವನ್ನು) ಸುಡುವವನು.
calcio-
ಸಮಾಸ ಪೂರ್ವಪದ
ಕ್ಯಾಲ್ಸಿಯಂ ಎಂಬರ್ಥದಲ್ಲಿ, ಮುಖ್ಯವಾಗಿ ಖನಿಜಗಳ ಹೆಸರುಗಳಲ್ಲಿ ಬಳಸುವ ಪೂರ್ವಪ್ರತ್ಯಯ.
calcite
ನಾಮವಾಚಕ
ಕ್ಯಾಲ್ಸೈಟು; ಪಾರದರ್ಶಕ ಹರಳಿನ ರೂಪದ ಕ್ಯಾಲ್ಸಿಯಂ ಕಾರ್ಬೊನೇಟ್ ಖನಿಜ.
calcium
ನಾಮವಾಚಕ
(ರಸಾಯನವಿಜ್ಞಾನ) ಕ್ಯಾಲ್ಸಿಯಂ; ಕ್ಷಾರೀಯ ಭಸ್ಮಲೋಹಗಳ ಗುಂಪಿಗೆ ಸೇರಿದ, ಪರಮಾಣ್ವಂಕ 20 ಮತ್ತು ಪರಮಾಣು ತೂಕ $40.08$ ಉಳ್ಳ, ಬಹುವಾಗಿ ಕ್ಯಾಲ್ಸಿಯಂ ಕಾರ್ಬೊನೇಟ್ ರೂಪದಲ್ಲಿ ಸಿಗುವ ರಾಸಾಯನಿಕವಾಗಿ ಚುರುಕಾದ, ಪಟುವಾದ ದ್ವಿವೇಲನ್ಸೀಯ ಬೂದು ಬಿಳಿಯ ಲೋಹಧಾತು.
calcspar
ನಾಮವಾಚಕ
=calcite.
calculability
ನಾಮವಾಚಕ
ಎಣಿಕೆಗೆ ಬರುವಿಕೆ; ಲೆಕ್ಕಕ್ಕೆ ಸಿಗುವಿಕೆ.
ನಂಬಬಲ್ಲಿಕೆ; ವಿಶ್ವಾಸಾರ್ಹತೆ.
calculable
ಗುಣವಾಚಕ
ಎಣಿಸಬಹುದಾದ; ಗುಣಿಸಬಹುದಾದ; ಲೆಕ್ಕಾಚಾರಕ್ಕೆ ಸಿಕ್ಕುವ.
ನಂಬಬಲ್ಲ; ನೆಚ್ಚಬಹುದಾದ; ವಿಶ್ವಾಸಾರ್ಹ; ವಿಶ್ವಸನೀಯ.
calculate
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ಗಣಿತಶಾಸ್ತ್ರ ರೀತಿಯಲ್ಲಿ) ಲೆಕ್ಕಮಾಡು; ಗಣಿಸು.
(ಒಂದು ಘಟನೆಯ ಸ್ವರೂಪ, ದಿನ ಮೊದಲಾದವನ್ನು ಸಾಮಾನ್ಯ ಪ್ರಜ್ಞೆ, ತಕ್ಕ ವಿವೇಕ, ಅನುಭವ ಮೊದಲಾದವುಗಳಿಂದ, ಮುಂಚಿತವಾಗಿಯೇ) ಲೆಕ್ಕಾಚಾರ-ಮಾಡು, ಹಾಕು; ನಿಷ್ಕರ್ಷಿಸು; ನಿರ್ದಿಷ್ಟವಾಗಿ-ಕಂಡುಹಿಡಿ, ಗೊತ್ತುಮಾಡು.
(ಉದ್ದೇಶಪೂರ್ವಕವಾಗಿ) ಯೋಜಿಸು; ಯೋಜನೆ ಹಾಕು.
(ಆಡುಮಾತು) ನಂಬು; ನೆಚ್ಚು.
calculated
ಗುಣವಾಚಕ
ಗಣಿಸಿದ; (ಗಣಿತಶಾಸ್ತ್ರದ ಪ್ರಕಾರ) ಎಣಿಸಿದ; ಲೆಕ್ಕ ಹಾಕಿದ.
ಎಣಿಕೆ ಹಾಕಿದ; ಸೂಕ್ಷ್ಮ ಪರಿಜ್ಞಾನದ; ಚೆನ್ನಾಗಿ ಆಲೋಚಿಸಿದ; ಎಚ್ಚರದಿಂದ ಯೋಜಿಸಿದ; ಪರ್ಯಾಲೋಚಿಸಿದ; ಬುದ್ಧಿವಂತಿಕೆಯ.