logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

badger
ಸಕರ್ಮಕ ಕ್ರಿಯಾಪದ
  • (ನಾಯಿಗಳು ನೆಲಗರಡಿಯನ್ನು ಹಿಂಸಿಸುವಂತೆ) ಹಿಂಸಿಸು; ಪೀಡಿಸು; ಕಾಡು.
  • ಹಿಂಸಿಸು; ಪೀಡಿಸು; ಕಾಡಿಸು; ಕಿರುಕುಳ ಕೊಡು; ಉಪದ್ರವ ಕೊಡು; ಗೋಳು ಹುಯ್ದುಕೊ.

  • Badger State
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ವಿಸ್ಕಾನ್ಸಿನ್‍ ರಾಜ್ಯದ (ಅಡ್ಡ ಹೆಸರು).

    badger-baiting
    ನಾಮವಾಚಕ
    ಬ್ಯಾಡ್ಜರ್‍ ಬೇಟೆ; ಬ್ಯಾಡ್ಜರನ್ನು ಬಿಲದಿಂದ ಹೊರ ಹೊರಡಿಸಲು ನಾಯಿಗಳನ್ನು ಅಟ್ಟುವುದು.

    badger-drawing
    ನಾಮವಾಚಕ
    badger-baiting.

    badger-legged
    ಗುಣವಾಚಕ
    ಇಜ್ಜೋಡು ಕಾಲುಗಳುಳ್ಳ; ಅಸಮಕಾಲಿನ; ಒಂದು ಕಾಲು ಚಿಕ್ಕದಾಗಿಯೂ ಇನ್ನೊಂದು ಉದ್ದವಾಗಿಯೂ ಇರುವ.

    badgeringly
    ಕ್ರಿಯಾವಿಶೇಷಣ
    ಪೀಡಿಸುತ್ತ; ಕಾಡುತ್ತ.

    badgerly
    ಗುಣವಾಚಕ
  • ಬ್ಯಾಡ್ಜರ್‍ನಂಥ; ಬಿಲಕರಡಿಯಂಥ.
  • (ನೆಲಕರಡಿಯಂತೆ) ಪೀಡಿಸುವ; ಕಾಟ ಕೊಡುವ; ಕಾಡುವ; ಹಿಂಸಿಸುವ.

  • badigeon
    ನಾಮವಾಚಕ
    ಲೆಪ್ಪ; ಮರಗೆಲಸ, ಕಲ್ಲುಗೆಲಸಗಳಲ್ಲಿ ಬಿರುಕು ಮುಚ್ಚುವ ಲೆಪ್ಪ.

    badinage
    ನಾಮವಾಚಕ
    ಗೇಲಿ; ಪರಿಹಾಸ; ತಮಾಷೆ.

    badly
    ಕ್ರಿಯಾವಿಶೇಷಣ ನುಡಿಗಟ್ಟು
    badly off ದುಃಸ್ಥಿತಿಯಲ್ಲಿ; ಕಡು – ಬಡತನದಲ್ಲಿ, ಕಷ್ಟದಲ್ಲಿ.
  • ತಪ್ಪಾಗಿ; ದೋಷದಿಂದ; ದೋಷಪೂರ್ಣವಾಗಿ; ದೋಷಯುತವಾಗಿ.
  • ತಪ್ಪುತಪ್ಪಾಗಿ; ಅತೃಪ್ತಿಕರವಾಗಿ; ನೈಪುಣ್ಯವಿಲ್ಲದೆ.
  • ಕೆಟ್ಟದಾಗಿ; ದುಷ್ಟವಾಗಿ; ದುಷ್ಟತನದಿಂದ; ಧೂರ್ತರೀತಿಯಲ್ಲಿ; ಕ್ರೂರವಾಗಿ.
  • ಅಹಿತಕರವಾಗಿ.
  • ತುಂಬ; ಬಹಳ; ಹೆಚ್ಚಾಗಿ: he was badly beaten ಅವನಿಗೆ ಬಹಳ ಪೆಟ್ಟು ಬಿದ್ದಿತು.
  • ಬಹಳವಾಗಿ; ಅತ್ಯಗತ್ಯವಾಗಿ; ಅತ್ಯವಶ್ಯಕವಾಗಿ: I want that thing badly ಆ ವಸ್ತು ನನಗೆ ಅತ್ಯಗತ್ಯವಾಗಿ ಬೇಕು.
  • (ಆಡುಮಾತು) ವಿಷಾದಕರವಾಗಿ; ವಿಷಾದನೀಯವಾಗಿ: I feel badly about it ಅದರ ಬಗ್ಗೆ ನನಗೆ ವಿಷಾದವಾಯಿತು.


  • logo