ಬೋಗಣಿ (Bowl) ಅಗಲ ಬಾಯಿಯ ಪಾತ್ರೆ, ಅಡಿಗೆ ಪದಾರ್ಥಗಳನ್ನು ಹಾಕಿಡಲು ಬಳಸುವ ಮಣ್ಣಿನ ಪಾತ್ರೆ, ಬೋಗುಣಿಗಳಲ್ಲಿ ಊಟದ ಪದಾರ್ಥಗಳನ್ನು ಹಾಕಿ, ಊಟದ ಟೇಬಲ್ ಮೇಲೆ ಇಡುವರು.
ಬೋನ್ಸಾಯಿ ಪಾಟ್
(ನಾ)
ಕುಂಡ, ಕುಬ್ಜ ಗಿಡಗಳನ್ನು ಬೆಳಸಲು ತಯಾರಿಸಿದ ಕುಂಡ, ಮನೆ ಮತ್ತು ಆಫೀಸುಗಳ ಮುಂದೆ ಅಂದಕ್ಕಾಗಿ ಈ ಕುಂಡಗಳನ್ನು ಇಡುವರು.
ಬೋಸಿ
(ನಾ)
ಕಂಠವಿಲ್ಲದ ಮಣ್ಣಿನ ಬೋಳು ಆಕೃತಿ ಕುಂಬಾರಗಿತ್ತಿಯರು ಚಟಿಗೆ, ಮಡಕೆ ಮೊದಲಾದವುಗಳನ್ನು ಕೈಯಿಂದ ಮಾಡುವಾಗ ಮೊದಲು ಬೋಸಿ ಮಾಡಿ ಅದು ಸ್ವಲ್ಪ ಒಣಗಿದ ನಂತರ ಕಂಠ ಹಚ್ಚುವರು.
ಭರಣಿ
(ನಾ)
ಬರಣಿ, ಕರಡಿಗೆ, ಇದನ್ನು ಉಪ್ಪಿನಕಾಯಿ ಹಾಕಿಡಲು ಬಳಸುವರು. ಪಿಂಗಾಣಿ ಭರಣಿಗಳು ಹೆಚ್ಚು ಜನಪ್ರಿಯವಾಗಿವೆ 'ಭರಣಿ' ಎಂಬುದು, ಜಾರಹ್ ಎಂಬ ಅರಬ್ಬಿ ಪದದಿಂದ ಬಂದಿದೆ ಇಂಗ್ಲಿಷ್-ನಲ್ಲಿ 'ಜಾರ್' ಎನ್ನುವರು. ತೆಲಗು ಭಾಷೆಯಲ್ಲಿ ಜಾಡಿ ಎನ್ನುವರು. ನೆಲದಲ್ಲಿ ಹೂತಿಡಲು ಅನುಕೂಲವಾಗುವಂತೆ ತಳ ಚೂಪಾದ ಭರಣಿಯನ್ನು ಕೆಲವೆಡೆ ಮಾಡುವರು.
ಭಾಂಡಾರೋ
(ನಾ)
ಕುಂಭಕ್ಕೆ ಭಾಂಡವೆಂದು ಹೆಸರು. ಇದರಿಂದ ಭಾಂಡಾರೋ (ಭಂಡಕಾರ) ಭಾಂಡಿಯೋ, ಭಾಂಡೇ ಎನ್ನುವ ಹೆಸರುಗಳು ಬಂದಿವೆ.
ಕುಂಬಾರರನ್ನು ಕೆಲವು ಪ್ರದೇಶಗಳಲ್ಲಿ ಭಾಂಡರೋ ಎಂದು ಕರೆಯುವರು.
ಭಾಂಡೆ
(ನಾ)
ಪಾತ್ರೆ, ಭಾಂಡೆ, ಲೋಹದ ಪಾತ್ರೆಗಳಿಗೆ ಭಾಂಡ, ಭಾಂಡೆ ಎಂದು ಕರೆಯುವರಾದರೂ ಮಣ್ಣಿನ ಪಾತ್ರೆಗಳಿಗೂ ಕೂಡ ಭಾಂಡೆ ಎಂದು ಕರೆಯುವ ರೂಢಿ ಇದೆ.
"ಮೃತ್ತಿಕೆಯೊಂದರಲಾದ ಭಾಂಡದಂತೆ" (ಸಕಲೇಶಮಾದರಸ)
"ಭಾಂಡ ತತಿಗೊಂದು ಗದುಗೆಯ ಪೆಟ್ಟು ಸಾಲದೆ" (ವಿರೂಪಾಕ್ಷ ಪಂಡಿತ)
">
ಭೂತಿಮರಿಗೆ
(ನಾ)
ಮಣ್ಣಿನಿಂದ ಮಾಡಿದ ವಿಭೂತಿ ಇಡುವ ಸಾಧನ, ಬಿದಿರು ಮತ್ತು ಕಟ್ಟಿಗೆಯಲ್ಲಿ ಮಾಡಿದ ಕೈಬುಟ್ಟಿಯಂತೆ ಇದು ಇರುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ.
ಮಂಕರಿ
(ನಾ)
ಬಂಕ್ರಿ, ದೋಸೆಬೇಯಿಸುವ ಹಂಚಿಗೆ ಮುಚ್ಚುವ ಮುಚ್ಚಳ
ಮಂಡೆ
(ನಾ)
ವತ್ತಲ, ನೀರು ಕಾಯಿಸಲು ಬಳಸುವ ಗಡಗಿ, ಪಚೇಲಿ, ಈ ಪದ ದಕ್ಷಿಣ ಕನ್ನಡದಲ್ಲಿ ಪ್ರಯೋಗದಲ್ಲಿದೆ.