logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zariba
ನಾಮವಾಚಕ
  • (ಸೂಡಾನ್‍ ಮೊದಲಾದ ಪ್ರದೇಶಗಳಲ್ಲಿ ಶಿಬಿರ, ಹಳ್ಳಿ, ಮೊದಲಾದವುಗಳ ರಕ್ಷಣೆಗಾಗಿ ಹಾಕುವ) ದಸಿಬೇಲಿ; ಸುತ್ತುಬೇಲಿ.
  • ನಿಯಂತ್ರಣ; ಕಟ್ಟುಪಾಡು; ನಿಯಂತ್ರಣದಲ್ಲಿಡುವ ಪ್ರಭಾವ.

  • zarzuela
    ನಾಮವಾಚಕ
    Spanish ತಾತ್ವೇಲ; ಸ್ಪೇನಿನ ಸಾಂಪ್ರದಾಯಿಕ ಗೀತವೈನೋದಿಕ.

    zax
    ನಾಮವಾಚಕ
    $^2$sax ಎಂಬುದರ ರೂಪಾಂತರ.

    zeal
    ನಾಮವಾಚಕ
  • ಉತ್ಸಾಹ; ಶ್ರದ್ಧೆ; ಹುರುಪು.
  • ಹೃತ್ಪೂರ್ವಕ, ಸತತ – ಸಾಧನೆ, ಪ್ರಯತ್ನ; ಛಲ.

  • zealot
    ನಾಮವಾಚಕ
  • ಹಟೋತ್ಸಾಹಿ; ಛಲವಾದಿ; ಅತ್ಯಭಿಮಾನಿ.
  • (ಮತ, ಶ್ರದ್ಧೆ, ಮೊದಲಾದವುಗಳಲ್ಲಿ) ಕಟ್ಟಾ ಶ್ರದ್ಧಾಳು; ದುರಭಿಮಾನಿ.
  • (Zealot) (ಚರಿತ್ರೆ) ಕ್ರಿಸ್ತಶಕ 70ರವರೆಗೆ ರೋಮನ್ನರನ್ನು ವಿರೋಧಿಸುತ್ತಾ, ಜಾಗತಿಕ ಯೆಹೂದಿ ಧರ್ಮಸ್ಥಾಪನೆಗಾಗಿ ಹೋರಾಡುತ್ತಿದ್ದ ಒಂದು ಯೆಹೂದಿ ಪಂಥ.

  • zealotry
    ನಾಮವಾಚಕ
  • ಹಟೋತ್ಸಾಹ.
  • ಕಡುಶ್ರದ್ಧೆ; ಕಟ್ಟಾಭಿಮಾನ; ದುರಭಿಮಾನ.

  • zealous
    ಗುಣವಾಚಕ
  • ಉತ್ಸಾಹಭರಿತ; ಶ್ರದ್ಧೆಯ; ಹುರುಪಿನ.
  • ಛಲದ; ಸತತ ಪ್ರಯತ್ನದ.

  • zealously
    ಕ್ರಿಯಾವಿಶೇಷಣ
  • ಉತ್ಸಾಹದಿಂದ; ಹುರುಪಿನಿಂದ.
  • ಸತತ ಪ್ರಯತ್ನದಿಂದ.

  • zealousness
    ನಾಮವಾಚಕ
  • ಉತ್ಸಾಹ; ಹುಮ್ಮಸ್ಸು; ಹುರುಪು.
  • ಸತತ ಪ್ರಯತ್ನ.

  • zebec(k)
    ನಾಮವಾಚಕ
    xebec ಎಂಬುದರ ರೂಪಾಂತರ.


    logo