logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

xenogamy
ನಾಮವಾಚಕ
(ಜೀವವಿಜ್ಞಾನ) ಸಂಕರ, ಮಿಶ್ರ ಗರ್ಭಧಾರಣ; ಬೆರಕೆ ಬಸಿರು; ಅಡ್ಡಬಸಿರು; ಒಂದು ಜಾತಿ ಜೀವಿಯ ಹೆಣ್ಣು ಇನ್ನೊಂದು ಜಾತಿ ಜೀವಿಯ ಗಂಡಿನೊಡನೆ ಕಲೆತು ಸಂತಾನೋತ್ಪತ್ತಿಯಲ್ಲಿ ತೊಡಗುವುದು.

xenolith
ನಾಮವಾಚಕ
(ಭೂವಿಜ್ಞಾನ) ಅನ್ಯಶಿಲೆ; ಸಾಮಾನ್ಯವಾಗಿ ಪಕ್ಕದ ಶಿಲಾರಾಶಿಯೊಂದರಿಂದ ಬಂದು ಸೇರಿಕೊಂಡಿರುವ, ಭಿನ್ನ ಬಗೆಯ ಶಿಲೆಯ ತುಂಡು.

xenon
ನಾಮವಾಚಕ
(ರಸಾಯನವಿಜ್ಞಾನ) ಸಿನಾನ್‍; ಭೂಮಿಯ ವಾತಾವರಣದಲ್ಲಿರುವ ಜಡಾನಿಲಗಳಲ್ಲಿ ಅಥವಾ ವಿರಳಾನಿಲಗಳಲ್ಲಿ ಒಂದಾದ, ಹ್ಲೂರಸೆಂಟ್‍ ದೀಪಗಳಲ್ಲಿ ಬಳಸುವ, 54 ಪರಮಾಣು ಸಂಖ್ಯೆಯ, 131 ಪರಮಾಣು ತೂಕದ, ವರ್ಣ, ವಾಸನೆಗಳಿಲ್ಲದ, ಭಾರವಾದ ಅನಿಲಧಾತು.

Xenophobe
ನಾಮವಾಚಕ
ಪರಕೀಯ, ವಿದೇಶೀ – ದ್ವೇಷಿ; ಹೊರಗಿನಿಂದ ಬಂದವರನ್ನು ಕಂಡರೆ ಆಗದ ವ್ಯಕ್ತಿ.

xenophobia
ನಾಮವಾಚಕ
ಅನ್ಯದ್ವೇಷ; ಪರಕೀಯರ, ವಿದೇಶೀಯರ ಬಗ್ಗೆ ದ್ವೇಷ.

xenophobic
ಗುಣವಾಚಕ
ಅನ್ಯದ್ವೇಷದ; ಪರಕೀಯರನ್ನು ದ್ವೇಷಿಸುವ.

xeranthemum
ನಾಮವಾಚಕ
(ಸಸ್ಯವಿಜ್ಞಾನ) ಸಿರಾಂಥಿಮಮ್‍; ಒಣಗಿದ, ಬಹುಕಾಲವಿರುವ ಸಂಯುಕ್ತಪುಷ್ಪಗಳನ್ನು ಬಿಡುವ, ಸಸ್ಯಗಳ ಕುಲ ಅಥವಾ ಆ ಕುಲದ ಗಿಡ.

xeric
ಗುಣವಾಚಕ
(ಪರಿಸರವಿಜ್ಞಾನ) ಶುಷ್ಕ; ತೇವವಿಲ್ಲದ; ನಿರಾರ್ದ್ರ; ಒಣ ಪರಿಸ್ಥಿತಿಯ ಅಥವಾ ಅದಕ್ಕೆ ಸಂಬಂಧಿಸಿದ.

xero-
ಸಮಾಸ ಪೂರ್ವಪದ
ಒಣಗಿದ; ಶುಷ್ಕ; ನಿರಾರ್ದ್ರ, ಉದಾಹರಣೆಗೆ xerography.

xeroderma
ನಾಮವಾಚಕ
ಚರ್ಮ ಅತಿಯಾಗಿ ಒಣಗುವ ಹಲವಾರು ಚರ್ಮರೋಗಗಳಲ್ಲಿ ಒಂದು, ಮುಖ್ಯವಾಗಿ ichthyosis.


logo