logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tabaret
ನಾಮವಾಚಕ
ಸ್ಯಾಟಿನ್‍ ಪಟ್ಟೆಬಟ್ಟೆ; ಪೀಠೋಪಕರಣಗಳಿಗೆ ಬಳಸುವ, ಪರ್ಯಾಯವಾಗಿ ಸಾದಾ ಹಾಗೂ ಸ್ಯಾಟಿನ್‍ ಪಟ್ಟೆಗಳಿರುವ ಬಟ್ಟೆ.

tabasco
ನಾಮವಾಚಕ
  • ಘಾಟುಮೆಣಸು; ಕ್ಯಾಪ್ಸಿಕಮ್‍ ಫೂಟ್‍ಸನ್ಸ್‍ ಹಣ್ಣಿನಿಂದ ಮಾಡುವ, ಘಾಟಿರುವ ಒಂದು ರೀತಿಯ ಮೆಣಸು.
  • (Tabasco) (ವಾಣಿಜ್ಯನಾಮ) ಬ್ಯಾಸ್ಕೋ; ಇದರಿಂದ ತಯಾರಿಸಿದ ಒಂದು ವ್ಯಂಜನ.

  • tabbouleh
    ನಾಮವಾಚಕ
    (ಗೋಧಿ ತರಿಯಿಂದ ಮಾಡಿದ, ಅರೇಬಿಯನ್ನರ) ತರಕಾರಿ ಪಚ್ಚಡಿ; ಕೋಸುಂಬರಿ.

    tabby
    ನಾಮವಾಚಕ
  • ನೆಯ್ದ ಸಾದಾ ಹೆಣಿಗೆ.
  • ಕ್ರಮವಾಗಿಲ್ಲದ ಅಲೆಗಳ ಗುರುತುಗಳುಳ್ಳ (ಮುಖ್ಯವಾಗಿ ರೇಷ್ಮೆಯ) ತೆರೆಯಿಡಿದ ಬಟ್ಟೆ.
  • ಕಪ್ಪು ಪಟ್ಟೆ ಯಾ ಚುಕ್ಕಿ ಇರುವ ಬಊದು ಯಾ ಕಂದುಬಣ್ಣದ ಬೆಕ್ಕು.
  • ಯಾವುದೇ ನಾಡುಬೆಕ್ಕು, ಮುಖ್ಯವಾಗಿ ಹೆಣ್ಣು ಬೆಕ್ಕು.
  • (ಹೀನಾರ್ಥಕ ಪ್ರಯೋಗ) ಹರಟೆಮಲ್ಲಿ; ಗೊಡ್ಡುಹರಟೆಯ ಹೆಂಗಸು; (ಬ್ರಿಟಿಷ್‍ ಪ್ರಯೋಗ) ಮುಖ್ಯವಾಗಿ ಕಾಡುಹರಟೆಯ ವೃದ್ಧಕನ್ಯೆ.

  • tabby cat
    ನಾಮವಾಚಕ
    = tabby\((3)\).

    tabernacle
    ನಾಮವಾಚಕ ಪದಗುಚ್ಛ
    Feast of Tabernacles = Succoth.
  • (ಬೈಬ್‍ಲ್‍) (ಹಗುರ) ವಸತಿ; ಡೇರೆ; ಗುಡಾರ; ಚಪ್ಪರ; ಗುಡಿಸಲು; ಪರ್ಣಶಾಲೆ; ಹಗುರವಾದ ರಚನೆಯ ಸ್ಥಿರ ಯಾ ಚರ ನಿವಾಸ.
  • (ಯೆಹೂದ್ಯ ಚರಿತ್ರೆ) ಆರಾಧನಾ ಗುಡಾರ; ಕಟ್ಟಕಡೆಯಲ್ಲಿ, ಯೆಹೂದ್ಯರು ಪ್ಯಾಲೆಸ್ಟೈನಿನಲ್ಲಿ ನೆಲಸುವ ಮುನ್ನ, ಆರಾಧನಾ ಮಂದಿರವಾಗಿದ್ದ ಗುಡಾರ.
  • (ಸಂಪ್ರದಾಯೇತರ ಕ್ರೈಸ್ತಪಂಥಗಳ) ಸಾರ್ವಜನಿಕ ಪೂಜಾಮಂದಿರ.
  • (ಕ್ರೈಸ್ತಧರ್ಮ) ಪವಿತ್ರ ಸಂಪುಟ; ಪವಿತ್ರಗೊಳಿಸಿದ ರೊಟ್ಟಿಯ ಯಾ ಬ್ರೆಡ್ಡಿನ ಪಾತ್ರೆ ಯಾ ಪವಿತ್ರಗೊಳಿಸಿದ ವಸ್ತುಗಳನ್ನಿಡುವ ಅಲಂಕಾರದ ಸಂಪುಟ.
  • (ವಾಸ್ತುಶಿಲ್ಪ) (ಅಲಂಕಾರದ, ಚಿತ್ರಕೆಲಸದ ವಿತಾನವುಳ್ಳ, ಚಾಚುಚಾವಣಿ ಇರುವ) ಗೂಡು; ಕೋಷ್ಠ.
  • (ನೌಕಾಯಾನ) ಕೂವೆಯ ಕೀಲುಪೀಠ; ದೋಣಿಯು ಸೇತುವೆಯ ಕೆಳಗೆ ಹೋಗುವಾಗ ದೋಣಿಯ ಕೂವೆಯನ್ನು ತಗ್ಗಿಸಲು ಅನುಕೂಲಿಸುವ ಕುಳಿ ಯಾ ಕೀಲು ಹಲಗೆ ಜೋಡಿ.
  • (ರೂಪಕವಾಗಿ) ಮನುಷ್ಯ ದೇಹ.

  • tabernacle
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ತಾತ್ಕಾಲಿಕವಾಗಿ ವಾಸಮಾಡು, ಬಿಡಾರ ಹೂಡು.
  • ಹಗುರ ವಸತಿ ಯಾ ಗುಡಾರದಲ್ಲಿ ವಾಸಿಸು.
  • ಪವಿತ್ರ ಸಂಪುಟದಲ್ಲಿಡು.

  • tabernacle-work
    ನಾಮವಾಚಕ
  • (ವಾಸ್ತುಶಿಲ್ಪ) ಗೂಡಲಂಕಾರ; ಚಾವಣಿಯಲಂಕಾರ.
  • ಅಲಂಕೃತ ಚಾಚುಚಾವಣಿ ಗೂಡುಗಳ ಸಾಲು.

  • tabernacled
    ಗುಣವಾಚಕ
    (ವಾಸ್ತುಶಿಲ್ಪ) ಅಲಂಕಾರದ ಗೂಡುಗಳಿರುವ; ಗೂಡಲಂಕಾರದ ಕೆಲಸ ಮಾಡಿದ.

    tabes
    ನಾಮವಾಚಕ ಪದಗುಚ್ಛ
    tabes dorsalis ಮಿದುಳುಬಳ್ಳಿಯ ಕ್ಷಯ ರೋಗ.
  • ಕ್ಷಯ (ರೋಗ).
  • ಚಲನವಿಭ್ರಮ; ಸ್ನಾಯುಗಳ ಮೇಲೆ ಹತೋಟಿ ತಪ್ಪಿ, ಓಡಾಟಕ್ಕೆ ತೊಂದರೆಯಾಗುವ ಮಿದುಳು ಬಳ್ಳಿಯ ಒಂದು ರೋಗ.


  • logo