(ರೋಮನ್ ಸೈನಿಕ ಲಾಂಛನಗಳೊಂದಿಗೆ ಕ್ರಿಶ್ಚಿಯನ್ ಲಾಂಛನಗಳನ್ನು ಸೇರಿಸಿದ, ಕಾನ್‍ಸ್ಟಂಟೈನ್ ದಿ ಗ್ರೇಟ್ ಎಂಬ ರೋಮನ್ ಚಕ್ರವರ್ತಿಯ) ಸಾಮ್ರಾಜ್ಯ – ಧ್ವಜ, ಬಾವುಟ, ನಿಶಾನೆ.
labdanum
ನಾಮವಾಚಕ
= ladanum.
labefaction
ನಾಮವಾಚಕ
(ಸಾಹಿತ್ಯಕ)
ನಡುಕ; ಅಲುಗಾಟ; ಅಳ್ಳಾಟ.
ಶಕ್ತಿಗುಂದು(ವಿಕೆ); ಶಕ್ತಿಹ್ರಾಸ; ಬಲಗುಂದುವಿಕೆ.
ಅಧಃಪತನ.
label
ನಾಮವಾಚಕ
ಲೇಬಲ್ಲು; ಹೆಸರು ಪಟ್ಟಿ; ಗುರುತು – ಪಟ್ಟಿ, ಚೀಟಿ; ಒಂದು ವಸ್ತುವಿನ ಸ್ವರೂಪ, ಗುಣ, ಮಾಲಿಕ, ಹೆಸರು, ವಿಳಾಸ, ರವಾನೆ ಸ್ಥಳ, ಮೊದಲಾದವನ್ನು ಬರೆದು ಆ ವಸ್ತುವಿಗೆ ಕಟ್ಟುವ, ಅಂಟಿಸುವ ಕಾಗದ, ಲೋಹ, ಮೊದಲಾದವುಗಳ – ಬಿಲ್ಲೆ, ಪಟ್ಟಿ.
(ಮುಖ್ಯವಾಗಿ ಹೀನಾರ್ಥಕ ಪ್ರಯೋಗ) ತಲೆಬರಹ; ತಲೆಚೀಟಿ; ವ್ಯಕ್ತಿ, ಕಲಾಕೃತಿ, ಮೊದಲಾದವನ್ನು ವರ್ಗೀಕರಿಸುವ ಸಣ್ಣ ವಿಶೇಷಣ, ಯಾ ಪದಗುಚ್ಛ.
ಚೀಟಿ; ಲೇಬಲ್ಲು:
ಉಡುಪಿಗೆ ಹೊಲಿದ, ತಯಾರಕರ ಹೆಸರನ್ನುಳ್ಳ ಸಣ್ಣ ಬಟ್ಟೆ.
ಹ್ಯಾಷನ್ ಯಾ ರೆಕಾರ್ಡಿಂಗ್ ಕಂಪೆನಿಯ ಹೆಸರು, ಲೋಗೋ ಯಾ ಟ್ರೇಡ್ ಮಾರ್ಕು: brought it out under his own label ಅವನದೇ ಹೆಸರಿನಲ್ಲಿ (ಟ್ರೇಡ್‍ಮಾರ್ಕಿನಲ್ಲಿ) ಅದನ್ನು ಹೊರತಂದ.
ಗ್ರಾಮಹೋನ್ ತಟ್ಟೆಯ ಮಧ್ಯದಲ್ಲಿ ಅದರ ವಿವರಗಳನ್ನು ಅಂಟಿಸಿದ ಕಾಗದದ ಚೂರು.
ಸ್ಟಾಂಪು; ಪಾರ್ಸಲ್ ಮೊದಲಾದವುಗಳ ಮೇಲೆ ಇರುವ ತಲೆಚೀಟಿ, ಅಂಟು ಚೀಟಿ.
ಲೇಬಲ್ಲು; ನಿಘಂಟಿನಲ್ಲಿ ಪದದ ಅರ್ಥ ವಿವರಿಸುವಾಗ, ಅದರ ವಿಷಯ, ದಾಖಲೆ, ರಾಷ್ಟ್ರೀಯತೆ, ಮೊದಲಾದವನ್ನು ತಿಳಿಸುವ ಪದ.
(ವಾಸ್ತುಶಿಲ್ಪ) (ಮಳೆಯ ನೀರು ಕೆಳಗಿನ ಭಾಗಕ್ಕೆ ಬೀಳದಂತೆ ತಡೆಯುವ) ಚೆಜ್ಜ; ಸಜ್ಜ; ಮುಂಸೂರು; ಮುಂಚಾಚು.
(ವಂಶಲಾಂಛನ ವಿದ್ಯೆ) ಸಾಮಾನ್ಯವಾಗಿ ಮೂರು ಕೆಳ ಮುಖವಾದ ಚಾಚಿಕೆಗಳಿರುವ ಅಡ್ಡಲಾದ ಪಟ್ಟಿ, ಗೆರೆ ಯಾ ಕಂಬಿಗಳಿರುವ, ಜ್ಯೇಷ್ಠಪುತ್ರನ ಲಾಂಛನ.
label
ಸಕರ್ಮಕ ಕ್ರಿಯಾಪದ
ಲೇಬಲ್ ಹಚ್ಚು; ಗುರುತು ಪಟ್ಟಿ, ತಲೆಚೀಟಿ ಮೊದಲಾದವನ್ನು – ಅಂಟಿಸು, ಹಚ್ಚು, ಕಟ್ಟು.
( ಅಕರ್ಮಕ ಕ್ರಿಯಾಪದ ಸಹ) ವರ್ಗೀಕರಿಸು; ತಲೆಚೀಟಿ ಹಚ್ಚು; ಪಟ್ಟಿಮಾಡು; ಒಂದು ವರ್ಗಕ್ಕೆ ಸೇರಿಸು: the bottle was labelled poison ಆ ಸೀಸೆಯನ್ನು ವಿಷವೆಂದು ವರ್ಗೀಕರಿಸಲಾಯಿತು. labelled them as irresponsible ಅವರನ್ನು ಬೇಜವಾಬ್ದಾರಿ ಎಂದು ಪಟ್ಟಿ ಮಾಡಲಾಯಿತು.
ಲೇಬಲಿಸು; ಪದಾರ್ಥದಲ್ಲಿನ ಅಣುಗಳನ್ನು ಗುರುತಿಸುವುದಕ್ಕಾಗಿ ಅಣುವಿನಲ್ಲಿರುವ ಪರಮಾಣು ಅಥವಾ ಪರಮಾಣುಗಳನ್ನು ಗುರುತಿಸಬಹುದಾದ (ಸಾಮಾನ್ಯವಾಗಿ ವಿಕಿರಣಪಟು) ಪರಮಾಣುವಿನಿಂದ ಪಲ್ಲಟಿಸು.
labelled
ಗುಣವಾಚಕ
ಲೇಬಲ್ ಮಾಡಿದ; ಪಟ್ಟಿ ಮಾಡಿದ; ತಲೆಚೀಟಿ ಹಚ್ಚಿದ; ಲೇಬಲ್ ಹಚ್ಚಿ ಗುರುತಿಸಿದ.
ಲೇಬಲಿತ; ಲೇಬಲಿಸಿದ; ಅಣುಗಳನ್ನು ಗುರುತಿಸಲಿಕ್ಕಾಗಿ ಅದರಲ್ಲಿನ ಪರಮಾಣು ಅಥವಾ ಪರಮಾಣುಗಳನ್ನು ಗುರುತಿಸಬಹುದಾದ (ಸಾಮಾನ್ಯವಾಗಿ ವಿಕಿರಣಶೀಲ) ಪರಮಾಣುವಿನಿಂದ ಪಲ್ಲಟಿಸಿದ.
labeller
ನಾಮವಾಚಕ
ಲೇಬಲರ್; ಲೇಬಲ್ ಹಚ್ಚುಗ; ಯಂತ್ರದ ಸಹಾಯದಿಂದ ಯಾ ಕೈಯಿಂದ ಲೇಬಲ್ಲನ್ನು, ಚೀಟಿಯನ್ನು ಅಂಟಿಸುವವ.