logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dab
ಗುಣವಾಚಕ ಪದಗುಚ್ಛ
(ಆಡುಮಾತು) ಜಾಣ(ನಾದ); ನಿಪುಣ; ದಕ್ಷ(ನಾದ). dab hand ಕುಶಲ; ತಜ್ಞ; ಪರಿಣತ.

dabber
ನಾಮವಾಚಕ
  • ಲಘುವಾಗಿ – ತಟ್ಟುವವ, ಹೊಡೆಯುವವ.
  • ಒತ್ತುವವ.
  • ಲೇಪಕ; ಬಳಿಯುವವ.
  • (ಮೇಲ್ಮೈಗೆ ಶಾಯಿಯನ್ನೋ ಬಣ್ಣವನ್ನೋ ಒಂದೇ ಸಮನಾಗಿ ಹಚ್ಚಲು ಮುದ್ರಣಕಾರರು ಮೊದಲಾದವರು ಉಪಯೋಗಿಸುವ) ದುಂಡೊತ್ತಿಗೆ; ತಟ್ಟೊತ್ತಿಗೆ; ಲಟ್ಟಣಿಗೆ; ಮೆತುಪದಾರ್ಥದ ದುಂಡನೆಯ ಒತ್ತಿಗೆ.
  • ಅಚ್ಚೊತ್ತಿಗೆ; ಕೂಡಕ್ಷರ ಫಲಕದಿಂದ ಮುದ್ರಣ ಮಾಡುವಲ್ಲಿ ಅದರ ಮೇಲಿಟ್ಟ ಕಾಗದವು ಅಕ್ಷರಗಳ ಸಂದುಗಳಲ್ಲೆಲ್ಲ ಸೇರುವಂತೆ ತಟ್ಟುವುದಕ್ಕಾಗಿ ಉಪಯೋಗಿಸುವ ಒತ್ತಿಗೆ.

  • dabble
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಕೆಸರು, ನೀರಿನಲ್ಲಿ ಹಾಯುವವರ ಯಾ ಓಡುವ ವಾಹನದ ವಿಷಯದಲ್ಲಿ) (ವ್ಯಕ್ತಿ, ಪದಾರ್ಥ, ಮೊದಲಾದವುಗಳ ಮೇಲೆ ಕೆಸರು, ನೀರು, ಮೊದಲಾದವನ್ನು) ಸಿಡಿಸು; ಹಾರಿಸು; ಎರಚು.
  • (ಅಲ್ಲಲ್ಲಿ ಯಾ ಸ್ವಲ್ಪಸ್ವಲ್ಪ) ಒದ್ದೆಮಾಡಿಕೊ; ನೆನಸಿಕೊ.

  • dabbler
    ನಾಮವಾಚಕ
    ಯಾವುದೇ ಕೆಲಸದಲ್ಲಿ ವಿಶೇಷ ಆಸಕ್ತಿ ಇಲ್ಲದೆ ತೊಡಗುವವನು, ಕೈ ಹಚ್ಚುವವನು, ಕೈಆಡಿಸುವವನು.

    dabchick
    ನಾಮವಾಚಕ
    ಗ್ರೀಬ್‍ ವಂಶಕ್ಕೆ ಸೇರಿದ ನೀರುಹಕ್ಕಿ, ಮುಖ್ಯವಾಗಿ ಚಿಕ್ಕ ಹಕ್ಕಿ.

    dabster
    ನಾಮವಾಚಕ
  • = 4dab.
  • (ಅಮೆರಿಕನ್‍ ಪ್ರಯೋಗ) = dabbler.
  • = daubster.

  • dace
    ನಾಮವಾಚಕ
    (ಬಹುವಚನ ಅದೇ) ಮುಖ್ಯವಾಗಿ ಲ್ಯೂಸಿಸ್‍ಕಸ್‍ ಕುಲಕ್ಕೆ ಸೇರಿದ, ಕಾರ್ಪ್‍ ಮೀನನ್ನು ಹೋಲುವ, ಸಿಹಿನೀರಿನಲ್ಲಿ ವಾಸಿಸುವ ಸಣ್ಣ ಮೀನು.

    dacha
    ನಾಮವಾಚಕ
    ಹಳ್ಳಿಮನೆ; ಗ್ರಾಮೀಣಗೃಹ; ರಷ್ಯಾದ ಹಳ್ಳಿಗಾಡಿನಲ್ಲಿರುವ ಚಿಕ್ಕಮನೆ ಯಾ ತೋಟದ ಮನೆ.

    dachshund
    ನಾಮವಾಚಕ
    ಡ್ಯಾಕ್ಸ್‍ಹುಂಡ್‍; ಗಿಡ್ಡಕಾಲಿನ, ಉದ್ದವಾದ ಶರೀರ ಉಳ್ಳ, ಸಾಮಾನ್ಯವಾಗಿ ಕಂದು ಯಾ ಕಪ್ಪು ಬಣ್ಣದ, ಜರ್ಮನಿಯ ನಾಯಿತಳಿ.

    dacoit
    ನಾಮವಾಚಕ
    (ಭಾರತ ಯಾ ಬರ್ಮಾದ) ಡಕಾಯಿತ; ದರೋಡೆಕೋರ; ಡಾಕು.


    logo