Latin (ನ್ಯಾಯಶಾಸ್ತ್ರ) (ದಂಪತಿಗಳ ನಡುವೆ) ಸಹಭೋಜನ ಮತ್ತು ಸಹಶಯ್ಯೆ ಇಲ್ಲದ; ವಿವಾಹ ವಿಚ್ಛೇದನ ಆಗದಿದ್ದರೂ ಗಂಡಹೆಂಡತಿ ಒಟ್ಟಿಗೆ ವಾಸಮಾಡದಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ.
a merveille
ಕ್ರಿಯಾವಿಶೇಷಣ
ಅದ್ಭುತವಾಗಿ; ಆಶ್ಚರ್ಯಕರವಾಗಿ.
a outrance
ಕ್ರಿಯಾವಿಶೇಷಣ
ಕಡೆತನಕ; ಕಟ್ಟಕಡೆಯವರೆಗೆ.
ಕೊನೆಯುಸಿರಿನತನಕ; ಸಾಯುವವರೆಗೆ; ಆಮರಣಾಂತ.
a posteriori
ಗುಣವಾಚಕ
Latin
ಕಾರ್ಯಪೂರ್ವಕ; ಕಾರ್ಯದಿಂದ ಕಾರಣವನ್ನು ತರ್ಕಿಸುವ.
ಅನುಗಮ್ಯ; ಅನುಭವಗಮ್ಯ; ಪ್ರಯೋಗ ಮತ್ತು ವೀಕ್ಷಣೆಗಳ ಆಧಾರದ ಮೇಲೆ ಸಾಮಾನ್ಯ ಸೂತ್ರಗಳನ್ನು ಕಲ್ಪಿಸುವ.
a posteriori
ಕ್ರಿಯಾವಿಶೇಷಣ
Latin ಕಾರ್ಯಪೂರ್ವಕವಾಗಿ; ಕಾರ್ಯಾನುಮೇಯವಾಗಿ.
a tempo
ಕ್ರಿಯಾವಿಶೇಷಣ
(ಸಂಗೀತ) ಹಿಂದಿನ – ಗತಿಯಲ್ಲೇ, ನಡೆಯಲ್ಲೇ ಯಾ ತಾಳದಲ್ಲೇ.
A'asia
ಸಂಕ್ಷಿಪ್ತ
Australasia.
A, a
ಪದಗುಚ್ಛ
ನುಡಿಗಟ್ಟು
(ಬಹುವಚನ As, A’s, Aes).
ಇಂಗ್ಲಿಷ್ ವರ್ಣಮಾಲೆಯ ಅಕ್ಷರ.
(ಸಂಗೀತ)ದ-ಧೈವತ; ಪಾಶ್ಚಾತ್ಯ ಸಂಗೀತದ ಸ್ವರಸಪ್ತಕದಲ್ಲಿ ಆರನೆಯ ಸ್ವರ.
ಮೊದಲನೆಯ ಕಲ್ಪಿತ ವ್ಯಕ್ತಿ ಯಾ ಉದಾಹರಣೆ.
(ರಸ್ತೆ, ಪರೀಕ್ಷೆಯ ಅಂಕಗಳು, ಐಶ್ವರ್ಯ, ಮೊದಲಾದವುಗಳ ದೃಷ್ಟಿಯಿಂದ ಜನ ಮೊದಲಾದವುಗಳ ವಿಷಯದಲ್ಲಿ) ಮೊದಲ ದರ್ಜೆ; ಪ್ರಥಮ ದರ್ಜೆ.
(ಬೀಜಗಣಿತ, ಸಾಮಾನ್ಯವಾಗಿ a) ಗೊತ್ತಾದ ಪರಿಮಾಣವನ್ನು ಸೂಚಿಸುವ ಸಂಕೇತ.
a, an
ಗುಣವಾಚಕ
(ಅನಿರ್ದೇಶವಾಚಕ)
ಒಂದು; ಒಬ್ಬ; ಯಾವುದಾದರೂ.
ಒಂದಾನೊಂದು; ಒಬ್ಬಾನೊಬ್ಬ: once upon a time there lived a king ಒಂದಾನೊಂದು ಕಾಲದಲ್ಲಿ ಒಬ್ಬಾನೊಬ್ಬ ದೊರೆ ಇದ್ದ.
ಅಂಥ; ಅವನಂಥ; ಅದರಂಥ; ಆ ತರಹದ: a Daniel ಒಬ್ಬ ಡೇನಿಯಲ್; ಡೇನಿಯಲ್‍ನಂಥವನು.
ಒಂದೇ ಒಂದು; ಒಂದು ಸಹ: could not see a thing ಒಂದೇ ಒಂದು ವಸ್ತುವನ್ನೂ ನೋಡಲಾಗಲಿಲ್ಲ. to reduce unemployment at a stroke ಒಂದೇ ಏಟಿನಲ್ಲಿ ನಿರುದ್ಯೋಗವನ್ನು ತಗ್ಗಿಸಲು.
ಜಾತ್ಯೇಕವಚನವನ್ನು ಸೂಚಿಸುವಾಗ: a cow is an animal (= cows are animals) ಹಸು ಒಂದು ಪ್ರಾಣಿ.
ಯಾವುದಾದರೂ ಒಂದರ ಅಂಶವನ್ನು ಸೂಚಿಸುವಾಗ: half a rupee ಅರ್ಧ ರೂಪಾಯಿ. half an hour ಅರ್ಧ ಘಂಟೆ.
how, so, as, too ಇವುಗಳಲ್ಲಿ ಒಂದರ ಬಳಿಕ ಗುಣವಾಚಕ ಬಂದಾಗ: how good a man ಎಂಥ ಒಳ್ಳೆಯ ಮನುಷ್ಯ. so pretty a girl ಎಂಥ ಚಂದದ ಹುಡುಗಿ. as efficient a secretary as you desire ನೀವು ಬಯಸುವಷ್ಟು ದಕ್ಷನಾದ ಕಾರ್ಯದರ್ಶಿ. it is too difficult a task ಅದು ಅತಿ ಕಷ್ಟದ ಕೆಲಸ.
ಒಂದೇ ತರಹದ, ಮಟ್ಟದ: all of a size ಎಲ್ಲ ಒಂದೇ ಗಾತ್ರದ.
ಪ್ರತಿಯೊಂದಕ್ಕೂ; ಪ್ರತಿಯೊಂದರಲ್ಲಿಯೂ: at three miles an hour ಗಂಟೆಗೆ ಮೂರು ಮೈಲಿಗಳಂತೆ. Rs.40 a year ವರ್ಷಕ್ಕೆ ೪೦ ರೂ.ಗಳು twice a day ದಿನಕ್ಕೆ ಯಾ ದಿನದಲ್ಲಿ ಎರಡು ಬಾರಿ.