logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

talking-shop
ನಾಮವಾಚಕ
(ಹೀನಾರ್ಥಕ ಪ್ರಯೋಗ) ಮಾತಿನ ಚಾವಡಿ; ಹರಟೆ ಕಟ್ಟೆ; (ಕೆಲಸಕ್ಕೆ ಬಾರದ ಮಾತನಾಡಿ ಹೊತ್ತು ಕಳೆಯುವ ಸ್ಥಳಗಳೆಂದು ನಂಬಲಾಗಿರುವ) ವಿಧಾನಸಭೆ, ಪಾರ್ಲಿಮೆಂಟ್‍, ಮೊದಲಾದ ಸ್ಥಳ.

talking-to
ನಾಮವಾಚಕ
(ಆಡುಮಾತು) ವಾಗ್ದಂಡನೆ; ತರಾಟೆ; ಆಕ್ಷೇಪಣೆ: gave them a good talking-to ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡ.

tall
ಗುಣವಾಚಕ
  • (ವ್ಯಕ್ತಿಯ ವಿಷಯದಲ್ಲಿ) ಎತ್ತರವಾದ; ಉದ್ದನೆಯ: he is six feet tall ಅವನು ಆರು ಅಡಿ ಎತ್ತರವಿದ್ದಾನೆ.
  • (ಮರ, ಗೋಪುರ, ಕಟ್ಟಡ, ಹಡಗು, ಮೊದಲಾದವುಗಳ ವಿಷಯದಲ್ಲಿ) (ಸುತ್ತಮುತ್ತಲ ವಸ್ತುಗಳಿಗಿಂತ) ಉನ್ನತವಾದ; ಎತ್ತರವಾದ: that yacht has a very tall mast ಆ ಕ್ರೀಡಾನೌಕೆಯ ಕೂವೆ ಬಹಳ ಎತ್ತರವಾಗಿದೆ.
  • (ಆಡುಮಾತು) ಅತಿಶಯೋಕ್ತಿಯಿಂದ ಕೂಡಿದ; ಉತ್ಪ್ರೇಕ್ಷೆಯ; ಅಳತೆಗೆಟ್ಟ; ಜಂಬದ; ಬಡಾಯಿಯ: a tall story ಉತ್ಪ್ರೇಕ್ಷಿತ ಕಥೆ. tall talk ಬಡಾಯಿ; ಉತ್ಪ್ರೇಕ್ಷೆ.

  • tall
    ಕ್ರಿಯಾವಿಶೇಷಣ
  • ಎತ್ತರವಾಗಿ; ಉನ್ನತವಾಗಿ.
  • ಉತ್ಪ್ರೇಕ್ಷೆಯಿಂದ ಕೂಡಿ; ಬಡಾಯಿಯಿಂದ ತುಂಬಿ: talk tall ಜಂಬ ಕೊಚ್ಚು; ಬಡಾಯಿ ಮಾತನಾಡು. walk tall ಜಂಬದಿಂದ ತುಂಬಿರು.

  • tall drink
    ನಾಮವಾಚಕ
    ಉದ್ದನೆಯ ಲೋಟಗಳಲ್ಲಿ ಬಡಿಸಿದ ಮದ್ಯ.

    tall hat
    ನಾಮವಾಚಕ
    = top hat.

    tall order
    ನಾಮವಾಚಕ
  • ನ್ಯಾಯವಲ್ಲದ, ಮಿತಿಮೀರಿದ–ಕೋರಿಕೆ, ಬೇಡಿಕೆ.
  • ಕಷ್ಟಸಾಧ್ಯವಾದ, ಆಗದ–ಕೆಲಸ.

  • tall ship
    ನಾಮವಾಚಕ
    ಎತ್ತರವಾದ ಕೂವೆ(ಕಂಬ) ಇರುವ ಹಾಯಿ ಹಡಗು.

    tallage
    ನಾಮವಾಚಕ
  • ನಗರತೆರಿಗೆ; ಊಳಿಗಮಾನ್ಯ ಪದ್ಧತಿಯ ಕಾಲದಲ್ಲಿ ಪಟ್ಟಣ ಮೊದಲಾದವುಗಳ ಮೇಲೆ ವಿಧಿಸಿದ್ದ (14ನೆಯ ಶತಮಾನದಲ್ಲಿ ತೆಗೆದುಹಾಕಲಾದ) ತೆರಿಗೆ.
  • ಗೇಣಿದಾರ ಕಡ್ಡಾಯವಾಗಿ ಮೀನು ಮಾಲೀಕನಿಗೆ ತೆರಬೇಕಾಗಿದ್ದ ತೆರಿಗೆ.

  • tallboy
    ನಾಮವಾಚಕ
  • ಸೆಳೆಖಾನೆ ಪೆಟ್ಟಿಗೆ, ಪೆಟಾರಿ; ಸುಮಾರು 5–6 ಅಡಿ ಎತ್ತರದ ಕಾಲುಗಳುಳ್ಳ, ದಿವಾನಖಾನೆಯಲ್ಲಿಡುವ ಇಳಿಜಾರಾದ ಸೆಳೆಖಾನೆ ಪೆಟ್ಟಿಗೆ.
  • (ಎತ್ತರವಾದ ಹೊಗೆಗೂಡಿನ) ಹೊಗೆ ಕೊಳವಿ; ಮೇಲ್ಕೊಳವಿ; ತಲೆಕೊಳವೆ.


  • logo