ಶಿರೋಭಾಗ; (ನಾದಲ್ಲಿ ಯಾ ಫಲಕದಲ್ಲಿ ತಲೆ ಯಾ ಪ್ರಧಾನ ಲಾಂಛನ ಇರುವ) ಮೇಲ್ಮುಖ; ಮುಮ್ಮುಖ.
ಈ ಮುಮ್ಮುಖದ ಮೇಲಿನ ಚಿತ್ರ ಯಾ ಲಾಂಛನ.
(ಒಂದು ವಸ್ತುವಿನ) ಮುಂದುಗಡೆಯ ಯಾ ಮೇಲುಗಡೆಯ ಯಾ ಸರಿಯಾದ–ಮುಖ, ಮೇಲ್ಮೈ, ಮೇಲ್ಭಾಗ.
(ಒಂದು ಸಂಗತಿಯ ಯಾ ಸತ್ಯಾಂಶದ) ವಿರುದ್ಧ; ಇನ್ನೊಂದು, ಬೇರೊಂದು, ಮತ್ತೊಂದು–ಮುಖ ಯಾ ಪಕ್ಕ.
(ರೂಪಕವಾಗಿ) (ಪ್ರದರ್ಶಿಸುವ ಸಲುವಾಗಿ ಯೋಜಿತವಾದ) ಮುಂಭಾಗ; ಮುಖಭಾಗ; ಮುಮ್ಮುಖ.
(ತರ್ಕಶಾಸ್ತ್ರ) ಪ್ರತಿವರ್ತಿತ ವಾಕ್ಯ; ಪ್ರತಿರೂಪ ಪ್ರತಿಜ್ಞೆ; ಗೃಹೀತವಾಕ್ಯದ ವಿಧೇಯ ಪದಕ್ಕೆ ಅದರ ವ್ಯಾಘಾತಕ ಪದವನ್ನು ಆದೇಶಿಸಿ ತನ್ಮೂಲಕ ಗೃಹೀತ ವಾಕ್ಯವನ್ನು ಗುಣಾಂತರಗೊಳಿಸಿ ಅನುಮಾನಿಸಿದ ಪ್ರತಿಜ್ಞಾವಾಕ್ಯ.
(ಜೀವವಿಜ್ಞಾನ) ಸಂಕುಚಿತ ಮೂಲವಾಗಿ ತುದಿಗಿಂತ ಬುಡವು ಯಾ ತಗುಲಿಕೊಂಡಿರುವ ಸ್ಥಾನವು ಕಿರಿದಾಗಿರುವಂತೆ.
ಸಂವಾದಿಯಾಗಿ; ಸರಿಸಾಟಿಯಾಗಿ; ಪ್ರತಿರೂಪವಾಗಿ.
obversion
ನಾಮವಾಚಕ
(ತರ್ಕಶಾಸ್ತ್ರ) ಪ್ರತಿವರ್ತನ; ಗೃಹೀತವಾಕ್ಯದ ವಿಧೇಯ ಪದಕ್ಕೆ ಅದರ ವ್ಯಾಘಾತಕ ಪದವನ್ನು ಆದೇಶಿಸಿ, ತನ್ಮೂಲಕ ಗೃಹೀತ ವಾಕ್ಯವನ್ನು ಗುಣಾಂತರಗೊಳಿಸಿ, ಪ್ರತಿವರ್ತಿತ ಪ್ರತಿಜ್ಞಾವಾಕ್ಯವನ್ನು ಅನುಮಾನಿಸುವುದು (ಯಾವ ಮನುಷ್ಯನೂ ಅಮರನಲ್ಲ ಎಂಬ ವಾಕ್ಯದಿಂದ ಎಲ್ಲ ಮನುಷ್ಯರೂ ಮರ್ತ್ಯರು ಎಂದು ಅನುಮಾನಿಸುವುದು).
obvert
ಸಕರ್ಮಕ ಕ್ರಿಯಾಪದ
(ತರ್ಕಶಾಸ್ತ್ರ) (ಗೃಹೀತವಾಕ್ಯದ ವಿಧೇಯ ಪದಕ್ಕೆ ಅದರ ವ್ಯಾಘಾತಕ ಪದವನ್ನು ಆದೇಶಿಸಿ ತನ್ಮೂಲಕ ಗೃಹೀತ ವಾಕ್ಯವನ್ನು ಗುಣಾಂತರಗೊಳಿಸಿ ಅದರ) ಪ್ರತಿವರ್ತಿತ ಪ್ರತಿಜ್ಞಾ ವಾಕ್ಯವನ್ನು ಅನುಮಾನಿಸು.