ಮಹಾಭಾರತ; ಪಾಂಡವ – ಕೌರವ ಯುದ್ಧವನ್ನು ಕುರಿತ, ಭಗವದ್ಗೀತೆಯನ್ನೊಳಗೊಂಡ, ಇಂಡಿಯ ದೇಶದ ಮಹಾಕಾವ್ಯ.
maharaja
ನಾಮವಾಚಕ
ಮಹಾರಾಜ; ಇಂಡಿಯದ ಕೆಲವು ಸಂಸ್ಥಾನಗಳ ಅರಸರ ಬಿರುದು.
maharajah
ನಾಮವಾಚಕ
= maharaja.
maharanee
ನಾಮವಾಚಕ
ಮಹಾರಾಣಿ; ಮಹಾರಾಜನ ಹೆಂಡತಿ.
maharishi
ನಾಮವಾಚಕ
ಮಹರ್ಷಿ.
mahatma
ನಾಮವಾಚಕ
ಮಹಾತ್ಮ:
(ಭಾರತ ಮೊದಲಾದ ದೇಶಗಳಲ್ಲಿ) ಅತ್ಯಂತ ಭಕ್ತಿಶ್ರದ್ಧೆಗಳಿಂದ ಕಾಣಲಾಗಿರುವ ವ್ಯಕ್ತಿ.
ಜ್ಞಾನಿ; ಋಷಿ.
(ಬೌದ್ಧಧರ್ಮದ ರಹಸ್ಯ ಯಾ ತಾಂತ್ರಿಕ ಪಂಥದಲ್ಲಿ) ಇಂಡಿಯ, ಟಿಬೆಟ್, ಜಪಾನ್‍ಗಳಲ್ಲಿ ಇರುವರೆಂದು ಭಾವಿಸಲಾದ, ಅಪ್ರಾಕೃತ ಶಕ್ತಿಗಳುಳ್ಳ ವ್ಯಕ್ತಿಗಳಲ್ಲೊಬ್ಬ.
ಇಂಡಿಯದಲ್ಲಿ ಶ್ರೇಷ್ಠ ಪುರುಷರ ಹೆಸರುಗಳ ಹಿಂದೆ ಬಳಸುವ ಬಿರುದು, ಮುಖ್ಯವಾಗಿ ಗಾಂಧಿಯ ಬಿರುದು.
Mahayana
ನಾಮವಾಚಕ
ಮಹಾಯಾನ; ಚೀನಾ, ಜಪಾನ್, ಮತ್ತು ಟಿಬೆಟ್‍ಗಳಲ್ಲಿ ಅನುಸರಿಸುವ ಬೌದ್ಧಧರ್ಮದ ಒಂದು ಪಂಥ.
Mahdi
ನಾಮವಾಚಕ
ಮಾದಿ; ಮುಂದೆ ಅವತರಿಸುವನೆಂದು ಮುಸಲ್ಮಾನರು ನಂಬಿರುವ, ಆಧ್ಯಾತ್ಮಿಕ ಹಾಗೂ ಲೌಕಿಕ ಕ್ಷೇತ್ರಗಳಿಗೆ ಸಂಬಂಧಿಸಿದ ನಾಯಕ (ಹಲವೊಮ್ಮೆ ಸೂಡಾನ್ ದೇಶದಲ್ಲಿ ಬಂಡಾಯಗಾರ ನಾಯಕರಿಗೆ ಅನ್ವಯಿಸುವ ಹೆಸರು).
Mahdism
ನಾಮವಾಚಕ
1880-85ರಲ್ಲೂ ಅನಂತರವೂ ಸೂಡಾನ್‍ನಲ್ಲಿ ತಾವು ಮಾದಿಗಳೆಂದು ಹೇಳಿಕೊಳ್ಳುತ್ತಿದ್ದ ನಾಯಕರ ನೇತೃತ್ವದಲ್ಲಿ ನಡೆದ ಚಳುವಳಿ, ಬಂಡಾಯಗಳು.