logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laicization
ನಾಮವಾಚಕ
ಲೌಕಿಕೀಕರಣ:
  • ಲೌಕಿಕವನ್ನಾಗಿಸುವುದು.
  • ಲೌಕಿಕರ ವಶಕ್ಕೆ ಒಪ್ಪಿಸುವುದು.
  • ಉದ್ಯೋಗದಲ್ಲಿ ಲೌಕಿಕರಿಗೂ ಜನಸಾಮಾನ್ಯರಿಗೂ ಅವಕಾಶ ನೀಡುವುದು, ಪಾದ್ರಿಗಳಲ್ಲದವರನ್ನು ಸೇರಿಸಿಕೊಳ್ಳುವುದು.

  • laicize
    ಸಕರ್ಮಕ ಕ್ರಿಯಾಪದ
    ಲೌಕಿಕೀಕರಿಸು; ಲೌಕಿಕವನ್ನಾಗಿ ಮಾಡು:
  • ಪಾದ್ರಿಗಳ ಯಾ ಚರ್ಚಿನ ಅಧಿಕಾರ, ಪ್ರಭಾವಗಳಿಂದ ವಿಮೋಚಿಸು, ಹೊರತುಪಡಿಸು.
  • (ಪಾಠಶಾಲೆ ಮೊದಲಾದವನ್ನು) (ಪಾದ್ರಿಗಳಲ್ಲದ) ಲೌಕಿಕರ ಅಧೀನಪಡಿಸು.
  • (ಉದ್ಯೋಗದಲ್ಲಿ) ಲೌಕಿಕರಿಗೂ ಜನಸಾಮಾನ್ಯರಿಗೂ ಅವಕಾಶ ಕೊಡು; ಪಾದ್ರಿಗಳಲ್ಲದವರನ್ನೂ ಸೇರಿಸಿಕೊ.

  • laid
    ಕ್ರಿಯಾಪದ
    1lay ಪದದ ಭೂತರೂಪ ಮತ್ತು ಭೂತಕೃದಂತ.

    laid paper
    ನಾಮವಾಚಕ
    ತಂತಿಕಾಗದ; ತಯಾರಿಸುವ ಕಾಲದಲ್ಲಿ ಬಳಸಿದ ತಂತಿಗಳ ಪರಿಣಾಮದಿಂದ ತಂತಿ ಗುರುತುಗಳು ಎದ್ದು ಕಾಣುವ ಕಾಗದ.

    laid work
    ನಾಮವಾಚಕ
    ಹೊಲಿದ ಕಸೂತಿ; ಸಾಲುಗಳನ್ನು ಅನುಸರಿಸಿ ದಾರದ ಹೊಲಿಗೆ ಹಾಕಿರುವ ಕಸೂತಿ.

    laid-back
    ಗುಣವಾಚಕ
    (ಆಡುಮಾತು) ಆರಾಮವಾಗಿ ಒರಗಿರುವ; ವಿಶ್ರಮಿಸಿಕೊಳ್ಳುತ್ತಿರುವ.

    lain
    ಕ್ರಿಯಾಪದ
    1lie ಪದದ ಭೂತಕೃದಂತ.

    lair
    ನಾಮವಾಚಕ
  • ಕಾಡುಮೃಗಗಳ – ಹಕ್ಕೆ, ಇಕ್ಕೆ, ವಿಶ್ರಾಂತಿ ಸ್ಥಾನ.
  • ವ್ಯಕ್ತಿಯ ಅಡಗುದಾಣ; tracked him to his lair ಜಾಡು ಹಿಡಿದು ಅವನ ಅಡಗುದಾಣ ಪತ್ತೆ ಹಚ್ಚಿದ.
  • (ಸಾಕು ಪ್ರಾಣಿಗಳ) ಇಕ್ಕೆ; ಹಕ್ಕೆ; ಕೊಟ್ಟಿಗೆ; ಮಲಗುದಾಣ.
  • (ಬ್ರಿಟಿಷ್‍ ಪ್ರಯೋಗ) ತಂಗು – ದೊಡ್ಡಿ, ಕೊಟ್ಟಿಗೆ; ವ್ಯಾಪಾರಕ್ಕಾಗಿ ಹೊಡೆದುಕೊಂಡು ಹೋಗುವ ದನಗಳು ತಂಗಲು ಏರ್ಪಡಿಸಿದ ಹಂಗಾಮಿ ಕೊಟ್ಟಿಗೆ, ಆವರಣ.

  • lair
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ಕೊಟ್ಟಿಗೆಯಲ್ಲಿ ಕೂಡು; ದೊಡ್ಡಿಗೆ ಸೇರಿಸು.
  • (ಸ್ಕಾಟ್ಲೆಂಡಿನಲ್ಲಿ) (ನೀರು, ಕೊಚ್ಚೆ, ಮೊದಲಾದವುಗಳಲ್ಲಿ) ಮುಳುಗಿಸು, ಅದ್ದು.

  • lair
    ನಾಮವಾಚಕ
    (ಆಸ್ಟ್ರೇಲಿಯ, ಅಶಿಷ್ಟ) ಸೊಗಸುಗಾರ ಪುಟ್ಟಶಾಮಿ; ಷೋಕಿಲಾಲ; ಢಾಳಾಗಿ ವೇಷಭೂಷಣ ಧರಿಸಿ ಮೆರೆಯುವ ತರುಣ ಯಾ ಗಂಡಸು.


    logo