logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ilang-ilang
ನಾಮವಾಚಕ
ylang – ylang ಪದದ ರೂಪಾಂತರ.

ILEA
ಸಂಕ್ಷಿಪ್ತ
(ಬ್ರಿಟಿಷ್‍ ಪ್ರಯೋಗ) Inner London Education Authority.

ilea
ನಾಮವಾಚಕ
ileum ಪದದ ಬಹುವಚನ.

ileal
ಗುಣವಾಚಕ
(ಅಂಗರಚನಾಶಾಸ್ತ್ರ) ಸಣ್ಣಕರುಳಿನ ತುದಿಯ, ಕೊನೆಯ ಭಾಗದ ಯಾ ಅದಕ್ಕೆ ಸಂಬಂಧಿಸಿದ.

ileitis
ನಾಮವಾಚಕ
ಸಣ್ಣಕರುಳಿನ ತುದಿಯೂತ, ಕೊನೆಯ ಭಾಗದ ಉರಿಯೂತ.

ileum
ನಾಮವಾಚಕ
(ಅಂಗರಚನಾಶಾಸ್ತ್ರ) ಸಣ್ಣ ಕರುಳಿನ ತುದಿ, ಕೊನೆಯ ಭಾಗ.

ileus
ನಾಮವಾಚಕ
(ರೋಗಶಾಸ್ತ್ರ) ಅಂತ್ರಶೂಲೆ; ಕರುಳು ನೋವು; ಕರುಳಿನಲ್ಲಿಯ ಅಡಚಣೆಯಿಂದ ಉಂಟಾಗುವ ನೋವಿನ ರೋಗ.

ilex
ನಾಮವಾಚಕ
  • ನಿತ್ಯಹಸುರು ಓಕ್‍ ಮರ.
  • (ಸಸ್ಯವಿಜ್ಞಾನ) ಹುರುಲು ಗಿಡವನ್ನೊಳಗೊಂಡ ಅಕ್ವಿಹೋಲಿಯೇಸೀ ವಂಶದ ಒಂದು ಸಸ್ಯಕುಲ.

  • iliac
    ಗುಣವಾಚಕ
    ರೊಂಡಿಯ; ಟೊಂಕದ; ಕಟಿಯ; ರೊಂಡಿಯ ಎಲುಬಿನ; ಟೊಂಕದೆಲುಬಿನ: iliac artery ಟೊಂಕದ ಅಪಧಮನಿ; ಮಹಾ ಅಪಧಮನಿಯ ಎರಡು ಶಾಖೆಗಳಲ್ಲೊಂದು.

    Iliad
    ನಾಮವಾಚಕ
  • ಇಲಿಯಡ್‍; ಗ್ರೀಸಿನ ಹೋಮರ್‍ ಕವಿ ಬರೆದನೆಂದು ಹೇಳಲಾದ, ಟ್ರಾಯ್‍ ಮುತ್ತಿಗೆಯನ್ನು ವರ್ಣಿಸುವ ಮಹಾಕಾವ್ಯ.
  • (ಕಷ್ಟ, ದುಃಖ, ಮೊದಲಾದವುಗಳ) ಸಾಲು; ಪರಂಪರೆ: Iliad of woes ದುಃಖಪರಂಪರೆ.
  • ದೀರ್ಘಕಥೆ; ದೊಡ್ಡ ಕಥೆ; ನೀಳ್ಗತೆ; ಯುದ್ಧ ಸಾಹಸಗಳು ಮೊದಲಾದವನ್ನು ವರ್ಣಿಸುವ ದೀರ್ಘವಾದ ಕಥೆ.


  • logo