logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ecosphere
ನಾಮವಾಚಕ
ಜೀವಮಂಡಲ; ಜೀವವಲಯ; ಪರಿಸರಮಂಡಲ; ಜೀವಂತ ವಸ್ತುಗಳು ಬದುಕಲು ಮತ್ತು ವಾಸಿಸಲು ಯೋಗ್ಯವಾದ ಭೂಮಿಯ, ನೀರಿನ ಯಾ ವಾಯುವಿನ ಪ್ರದೇಶ, ಭಾಗ.

ecossaise
ನಾಮವಾಚಕ
  • ದ್ವಿತಾಳದ ಉತ್ಸಾಹಪೂರ್ಣವಾದ ಗೀತೆ.
  • ಈ ತಾಳಕ್ಕೆ ಹೊಂದಿಸಿದ ತ್ಯ.

  • ecosystem
    ನಾಮವಾಚಕ
    ಪರಿಸರ ವ್ಯವಸ್ಥೆ; ಒಂದು ನಿರ್ದಿಷ್ಟ ಪ್ರದೇಶದಲ್ಲಿ ಪರಸ್ಪರ ಪರಿಣಾಮ ಬೀರುತ್ತಾ ವಾಸಿಸುವ ಜೀವಿಗಳ ವ್ಯವಸ್ಥೆ.

    ecru
    ನಾಮವಾಚಕ
    ಕೋರ ಬಟ್ಟೆಯ ಬಣ್ಣ; ಚಲುವೆ ಮಾಡದಿರುವ ಬಟ್ಟೆಯ ಬಣ್ಣ.

    ecstasise
    ಕ್ರಿಯಾಪದ
    = ecstasize.

    ecstasize
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಆನಂದಪರವಶತೆಯನ್ನುಂಟು ಮಾಡು; ಭಾವಪರವಶಗೊಳಿಸು. ಆನಂದಪರವಶನಾಗು; ಭಾವಪರವಶನಾಗು.

    ecstasy
    ನಾಮವಾಚಕ ಪದಗುಚ್ಛ
    in ecstasies ಅತ್ಯಂತ ಆನಂದದಿಂದ; ಪರಮಾನಂದದಿಂದ.
  • (ಮುಖ್ಯವಾಗಿ ಸಂತೋಷದ) ಮೈಮರೆವು; ಭಾವೋತ್ಕರ್ಷತೆ; ಭಾವಪರವಶತೆ; ಆನಂದಪರವಶತೆ.
  • (ವೈದ್ಯಶಾಸ್ತ್ರ) ಭಾವೋನ್ಮಾದ; ಭಾವೋದ್ರೇಕ ; ಭಾವವಿಕಾರ; ತಲ್ಲೀನತಾ ಜಡತೆ; ಮನಸ್ಸು ಒಂದೇ ಭಾವನೆಯಲ್ಲಿ ಲೀನವಾಗಿರುವಂತೆ ಮಾಡುವ ನರವ್ಯೂಹದ ವಿಕಾರಸ್ಥಿತಿ.
  • ಮೈಮರೆತ; ವಿವಶತೆ; ಭಾವಪರವಶತೆ; ಭಾವಸಮಾಧಿ; ತನ್ಮಯಾವಸ್ಥೆ.
  • ಕವಿತಾವೇಶ; ಕಾವ್ೋನ್ಮಾದ.

  • ecstatic
    ಗುಣವಾಚಕ
  • (ಮುಖ್ಯವಾಗಿ ಸಂತೋಷದ) ಭಾವಪರವಶ; ಆನಂದಪರವಶ.
  • ಭಾವಪರವಶಗೊಳಿಸುವ; ಆನಂದಪರವಶತೆ ಉಂಟುಮಾಡುವ.

  • ecstatic
    ನಾಮವಾಚಕ
    ಧ್ಯಾನಪರವಶ; ಸಮಾಧಿಸ್ಥ.

    ecstatically
    ಕ್ರಿಯಾವಿಶೇಷಣ
    ಮೈಮರೆಸುವಂತೆ; ಭಾವಪರವಶವಾಗಿ; ಆನಂದಪರವಶತೆಯಿಂದ.


    logo