logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

darkling
ಗುಣವಾಚಕ
  • ಕತ್ತಲಲ್ಲಿನ; ಕತ್ತಲಲ್ಲಿ – ಸಂಭವಿಸುವ, ಮಾಡುವ, ಹೋಗುವ; ಕತ್ತಲಲ್ಲಿರುವ; ನಿಶೆಯಲ್ಲಿಯ.
  • ಅಸ್ಪಷ್ಟ; ಅಸ್ಫುಟ; ಮಸುಕಾಗಿ; ತೋರುವ; ಮಬ್ಬಾಗಿ ಕಾಣಿಸಿಕೊಳ್ಳುವ: by the darkling forest paths ಕಾಡಿನ ಮಬ್ಬು ದಾರಿಯಲ್ಲಿ.

  • darkling
    ಕ್ರಿಯಾವಿಶೇಷಣ
    ಕತ್ತಲಲ್ಲಿ; ಕತ್ತಲುಕವಿದಿರುವಾಗ (ರೂಪಕವಾಗಿ ಸಹ): the wakeful bird sings darkling ಎಚ್ಚೆತ್ತ ಹಕ್ಕಿ ಕತ್ತಲಲ್ಲಿ ಹಾಡುತ್ತದೆ.

    darkly
    ಕ್ರಿಯಾವಿಶೇಷಣ
  • ಅಸ್ಪಷ್ಟವಾಗಿ; ಅಸ್ಫುಟವಾಗಿ.
  • (ದೃಶ್ಯ ಮೊದಲಾದವುಗಳ ವಿಷಯದಲ್ಲಿ) ಮಸುಕಾಗಿ; ಮಬ್ಬಾಗಿ.
  • (ಬಣ್ಣ ಮೊದಲಾದವುಗಳ ವಿಷಯದಲ್ಲಿ) ದಟ್ಟವಾಗಿ; ಗಾಢವಾಗಿ.
  • ಮಂಕಾಗಿ; ಖಿನ್ನನಾಗಿ; ವಿಷಣ್ಣತೆಯಿಂದ.
  • (ಆಲೋಚನೆ ಮೊದಲಾದವುಗಳ ವಿಷಯದಲ್ಲಿ) ಗುಟ್ಟಾಗಿ; ರಹಸ್ಯವಾಗಿ; ಗೋಪ್ಯದಿಂದ.

  • darkness
    ನಾಮವಾಚಕ
  • ಕತ್ತಲು; ಅಂಧಕಾರ.
  • ಅಜ್ಞಾನ; ಅರಿವಿಲ್ಲದಿರುವಿಕೆ.
  • ಅಧರ್ಮ; ಅನ್ಯಾಯ; ಪಾಪ; ದುಷ್ಟ(ತನ): the powers of darkness ದುಷ್ಟಶಕ್ತಿಗಳು.
  • ಕುರುಡು; ಅಂಧತ್ವ; ದೃಷ್ಟಿ ಕಳೆದುಕೊಳ್ಳುವಿಕೆ.
  • (ಬಣ್ಣ, ಛಾಯೆ, ಮೊದಲಾದವುಗಳಲ್ಲಿ) ದಟ್ಟತೆ; ಗಾಢತೆ.
  • ಗುಟ್ಟು; ರಹಸ್ಯ; ಗೋಪ್ಯತೆ.
  • (ದುರದೃಷ್ಟ ಯಾ ವ್ಯಥೆಯಿಂದಾದ) ತೊಂದರೆ; ಕಷ್ಟ; ತ್ರಾಸ; ಕ್ಲೇಶ: my personal life had taken a turn towards darkness ನನ್ನ ಜೀವನ ಕಷ್ಟದೆಡೆಗೆ ತಿರುಗಿತ್ತು.

  • darksome
    ಗುಣವಾಚಕ
  • (ಮುಖ್ಯವಾಗಿ ಕಾವ್ಯಪ್ರಯೋಗ) ಸ್ವಲ್ಪ ಕತ್ತಲೆಯಾದ; ನಸುಗತ್ತಲೆಯ.
  • (ಬಣ್ಣದಲ್ಲೋ ಕಾಂತಿಯಲ್ಲೋ) ನಸುಕಪ್ಪಾದ; ಮಸುಕಾದ.

  • darky
    ನಾಮವಾಚಕ
    (ಆಡುಮಾತು) ನೀಗ್ರೋ.

    darling
    ನಾಮವಾಚಕ
  • ಪ್ರಿಯೆ ಯಾ ಪ್ರಿಯ; ಮನದನ್ನೆ ಯಾ ಮನದನ್ನ; ಪ್ರೀತಿಯ, ಅಚ್ಚುಮೆಚ್ಚಿನ ವ್ಯಕ್ತಿ ಯಾ ಪ್ರಾಣಿ.
  • (ವ್ಯಕ್ತಿ ಯಾ ವಸ್ತುವಿನ ವಿಷಯದಲ್ಲಿ) ಮುದ್ದು; ಕಂದ; ಮರಿ; ಪುಟ್ಟು; ಅರಗಿಣಿ.

  • darling
    ಗುಣವಾಚಕ
    (ಮನುಷ್ಯ ಯಾ ಪ್ರಾಣಿಯ ವಿಷಯದಲ್ಲಿ) ಪ್ರೀತಿಪಾತ್ರ; ಅಚ್ಚುಮೆಚ್ಚಿನ; ಪ್ರಿಯತಮ; ಮುದ್ದಿನ; ಮೋಹದ.

    darn
    ಸಕರ್ಮಕ ಕ್ರಿಯಾಪದ
  • ಎಳೆ ತುಂಬು; ರಹುಮಾಡು; (ಉಣ್ಣೆ ಮೊದಲಾದ ಹೆಣೆದ) ಬಟ್ಟೆಯನ್ನು ಯಾ ಅದರಲ್ಲಿ ಬಿದ್ದಿರುವ ಕಂಡಿಯನ್ನು ಸೂಜಿಯಿಂದ ಬೇರೆ ಎಳೆ ಹಾಕಿ ಮುಚ್ಚು.
  • ತುಂಬುವ ಹೊಲಿಗೆಯಿಂದ ಕಸೂತಿ ಹಾಕು.

  • darn
    ನಾಮವಾಚಕ
    (ಉಡುಪಿನಲ್ಲಿ) ಎಳೆ ತುಂಬಿದ ಜಾಗ; ರಹು.


    logo