logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bad lot
ನಾಮವಾಚಕ
ದುಷ್ಟ; ಕೆಟ್ಟ ಮನುಷ್ಯ ಯಾ ಅಯೋಗ್ಯ ವ್ಯಕ್ತಿ.

bad mouth
ನಾಮವಾಚಕ
(ಅಮೆರಿಕನ್‍ ಪ್ರಯೋಗ) ಕೆಟ್ಟಬಾಯಿ; ದುರುದ್ದೇಶದ ಯಾ ದ್ವೇಷಾಸೂಯೆಗಳಿಂದ ಕೂಡಿದ ಮಾತು ಯಾ ಟೀಕೆ.

bad news
ನಾಮವಾಚಕ
ಕೆಟ್ಟಸುದ್ದಿ; ಅಹಿತಕರ ಸಮಾಚಾರ; ಅಪ್ರಿಯವಾರ್ತೆ.

bad temper
ನಾಮವಾಚಕ
ಕೆರಳಿಕೆ; ರೇಗು; ಸಿಡುಕು; ಸಿಡಿಮಿಡಿಗುಟ್ಟುವ, ಸಿಟ್ಟಿನ – ಸ್ವಭಾವ.

bad-mouth
ಸಕರ್ಮಕ ಕ್ರಿಯಾಪದ
(ಅಮೆರಿಕನ್‍ ಪ್ರಯೋಗ) ಕೆಟ್ಟಬಾಯಿಗೆ ಬೀಳು; ದುರುದ್ದೇಶದ ಟೀಕೆಗೆ ಒಳಗಾಗು.

baddish
ಗುಣವಾಚಕ
ತುಸು ಕೆಟ್ಟ; ಅಷ್ಟೇನೂ ಚೆನ್ನಾಗಿರದ; ಸುಮಾರಾಗಿರುವ; ಕಳಪೆಯಾಗಿರುವ.

baddy
ನಾಮವಾಚಕ
(ಆಡುಮಾತು) ದುಷ್ಟ; ಧೂರ್ತ; ನೀಚ; ಪಾತಕಿ; ದುರುಳ ಯಾ ಅಪರಾಧಿ; ಮುಖ್ಯವಾಗಿ ಸಿನಿಮಾ, ದೂರದರ್ಶನ ಯಾ ರೇಡಿಯೋಗಳಲ್ಲಿನ ಖಳನಾಯಕ.

bade
ಕ್ರಿಯಾಪದ
bid ಧಾತುವಿನ ಭೂತರೂಪ.

badge
ನಾಮವಾಚಕ
  • (ಹಿಂದೆ) ನೈಟ್‍ ಬಿರುದು ಹೊಂದಿದ್ದವನ ವಿಶಿಷ್ಟ ಚಿಹ್ನೆ.
  • (ಈಗ) ಬಿಲ್ಲೆ; ಲಾಂಛನ; ನಿರ್ದಿಷ್ಟ ಹುದ್ದೆಯ ಯಾ ಲೈಸನ್ಸ್‍ ಪಡೆದ ನೌಕರಿಯ ಯಾ ಒಂದು ಸಂಘದ ಸದಸ್ಯತ್ವದ ಗುರುತಾಗಿ ಧರಿಸುವ ಚಿಹ್ನೆ.
  • (ರೂಪಕವಾಗಿ ಸಹ) ಗುರುತು; ಹೆಗ್ಗುರುತು; ಲಾಂಛನ; ಚಿಹ್ನೆ; ಸಂಕೇತ; ಲಕ್ಷಣ; ಮುದ್ರೆ: sufferance is the bad of all our tribe ಸಂಕಟ ಅನುಭವಿಸುವುದೇ ನಮ್ಮ ಇಡೀ ಜನಾಂಗದ ಹೆಗ್ಗುರುತು.
  • ಸೂಚಕ; ಯಾವುದೇ ಗುಣ ಯಾ ಸ್ಥಿತಿಯನ್ನು ತೋರಿಸುವ ವಸ್ತು.

  • badger
    ನಾಮವಾಚಕ
  • ಬ್ಯಾಡ್ಜರ್‍; ಬಿಲಕರಡಿ; ನೆಲಕರಡಿ; ವೀಸಲ್‍ ವಂಶಕ್ಕೆ ಸೇರಿದ, ಕಂದುಬಣ್ಣದ ಮೈಯಿನ, ಬಲವಾದ ದವಡೆಗಳುಳ್ಳ, ಆತ್ಮರಕ್ಷಣೆಗಾಗಿ ಉಗ್ರವಾಗಿ ಹೋರಾಡುವ, ರಾತ್ರಿಸಂಚಾರಿಯಾದ, ಬಿಲ ತೋಡುವ, ಚಳಿಗಾಲದಲ್ಲಿ ನಿಶ್ಚೇಷ್ಟ ಸ್ಥಿತಿಯಲ್ಲಿರುವ, ಅಂಗಾಲ ಮೇಲೆ ನಡೆಯುವ ಸಸ್ತನಿ (ಪ್ರಾಣಿ). Figure: badger
  • (ಬ್ಯಾಡ್ಜರ್‍ ರೋಮದ) ಮಚ್ಚು; ಗಾಳದ ಹುಳು.
  • ಬ್ಯಾಡ್ಜರ್‍ – ಕುಂಚ, ಕೂರ್ಚ, ಬ್ರಷ್‍; ಬ್ಯಾಡ್ಜರ್‍ ಕೂದಲಿನಿಂದ ಮಾಡಿದ, ವರ್ಣಚಿತ್ರಣದಲ್ಲಿ ಯಾ ಬೇರೆಡೆ ಬಳಸುವ ಕುಂಚ.
  • ಬೀದಿ, ತಿರುಗು – ವ್ಯಾಪಾರಿ; ಸಾಮಾನುಗಳನ್ನು ತಂದು ಬೀದಿಯಲ್ಲಿ ಮಾರುವವನು; ಮುಖ್ಯವಾಗಿ ದಿನಸಿ ಸರಕುಗಳನ್ನು ಹೊತ್ತು ಮಾರುವವನು.
  • ಬ್ಯಾಡ್ಜರ್‍ನ – ತುಪ್ಪುಳು ಚರ್ಮ, ತುಪ್ಪುಳುದೊಗಲು.


  • logo