logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abrogation
ನಾಮವಾಚಕ
  • ರದ್ದಿಯಾತಿ; ವಜಾ ಮಾಡುವಿಕೆ.
  • ತಳ್ಳಿ ಹಾಕುವಿಕೆ; ನಿರಾಕರಣ.

  • abrupt
    ಗುಣವಾಚಕ
  • ಥಟ್ಟನೆಯ; ಹಠಾತ್ತಾದ; ಏಕಾಏಕಿಯಾದ; ಸಹಸಾ ಆದ.
  • (ಮಾತು, ಬರಹಗಳ ವಿಷಯದಲ್ಲಿ) ಹೊಂದಾವಣೆಯಿಲ್ಲದ; ಅಸಂಬದ್ಧ; ಅಸಂಗತ; ಪರಸ್ಪರ ಸಂಬಂಧವಿಲ್ಲದ: abrupt manner of speaking ಪರಸ್ಪರ ಸಂಬಂಧವಿಲ್ಲದ ಮಾತಿನ ರೀತಿ. abrupt style ಹೊಂದಾವಣೆಯಿಲ್ಲದ, ಅಸಂಗತ–ಶೈಲಿ, ರೀತಿ.
  • (ನಡವಳಿಕೆ, ವ್ಯವಹಾರಗಳ ವಿಷಯದಲ್ಲಿ) ಒರಟಾದ; ನಯವಿಲ್ಲದ; ಮರ್ಯಾದೆಯಿಲ್ಲದ: a man with an abrupt manner ಒರಟು ನಡತೆಯ ಮನುಷ್ಯ.
  • ಕಡಿದಾದ: an abrupt peak rising from the ocean ಸಾಗರದಿಂದ ಎದ್ದ ಕಡಿದಾದ ಶಿಖರ.
  • (ಸಸ್ಯವಿಜ್ಞಾನ) (ಎಲೆ ಮೊದಲಾದವುಗಳ ವಿಷಯದಲ್ಲಿ) ತಲೆ ಕಡಿದ; ಛಿನ್ನಾಗ್ರ; ತುದಿ ಕತ್ತರಿಸಿದಂತಿರುವ. Figure: abrut
  • (ಭೂವಿಜ್ಞಾನ) (ಒಳ ಸ್ತರ ಮೊದಲಾದವುಗಳ ವಿಷಯದಲ್ಲಿ) ಹಠಾತ್ತನೆ ಹೊರಗೆ–ಎದ್ದ, ಕಾಣಿಸಿಕೊಂಡ, ಪ್ರಕಟವಾದ.

  • abruption
    ನಾಮವಾಚಕ
    ಥಟ್ಟನೆಯ ತ್ರುಟಿ; ಚಟ್ಟನೆ ಮುರಿದುಹೋಗುವಿಕೆ; ಯಾವುದೇ ಅಂಗಭಾಗ ಏಕಾಏಕಿ ಮುರಿದು ಬಿದ್ದು ಹೋಗುವಿಕೆ ಯಾ ಒಡೆದು ಬೇರ್ಪಡುವಿಕೆ.

    abruptly
    ಕ್ರಿಯಾವಿಶೇಷಣ
  • ಥಟ್ಟನೆ; ಏಕಾಏಕಿ; ಒಮ್ಮಿಂದೊಮ್ಮೆಗೆ; ಹಠಾತ್ತಾಗಿ; ಇದಕ್ಕಿದ್ದಂತೆ.
  • (ಮಾತು ಮೊದಲಾದವುಗಳ ವಿಷಯದಲ್ಲಿ) ಅಸಂಬದ್ಧವಾಗಿ.
  • (ನಡವಳಿಕೆ ವಿಷಯದಲ್ಲಿ) ಒರಟಾಗಿ; ಮರ್ಯಾದೆಯಿಲ್ಲದೆ.
  • ಕಡಿದಾಗಿ.
  • (ಸಸ್ಯವಿಜ್ಞಾನ) (ಎಲೆ ಮೊದಲಾದವುಗಳ ವಿಷಯದಲ್ಲಿ) ತಲೆ ಕಡಿದಂತೆ; ಛಿನ್ನಾಗ್ರವಾಗಿ.
  • (ಭೂವಿಜ್ಞಾನ) (ಸ್ತರ ಮೊದಲಾದವುಗಳಲ್ಲಿ) ಥಟ್ಟನೆ–ಮೇಲೆದ್ದು, ಹೊರಗೆ ಕಾಣಿಸಿಕೊಂಡು.

  • abruptness
    ನಾಮವಾಚಕ
  • ಥಟ್ಟನೆ–ಆಗುವಿಕೆ, ಆಗುವುದು, ಮಾಡುವುದು.
  • (ಮಾತು ಮೊದಲಾದವುಗಳ ವಿಷಯದಲ್ಲಿ) ಅಸಂಬದ್ಧತೆ.
  • (ನಡವಳಿಕೆಯ ವಿಷಯದಲ್ಲಿ) ಒರಟುತನ.
  • ಕಡಿದು; ಕಡಿದಾಗಿರುವಿಕೆ.
  • (ಸಸ್ಯವಿಜ್ಞಾನ) (ಎಲೆ ಮೊದಲಾದವುಗಳ ವಿಷಯದಲ್ಲಿ) ಛಿನ್ನಾಗ್ರತೆ.
  • (ಭೂವಿಜ್ಞಾನ) (ಸ್ತರ ಮೊದಲಾದವುಗಳ ವಿಷಯದಲ್ಲಿ) ಥಟ್ಟನೆ ಹೊರಗೆ ಕಾಣಿಸಿಕೊಳ್ಳುವಿಕೆ.

  • abs-
    ಪೂರ್ವಪ್ರತ್ಯಯ
    ab-ಎಂಬ ಪೂರ್ವಪ್ರತ್ಯಯದ ಪರ್ಯಾಯ ರೂಪ.

    abscess
    ನಾಮವಾಚಕ
    (ರೋಗಶಾಸ್ತ್ರ) ಕುರು; ಬಾವು; ಕೀವು ತುಂಬಿದ ಗಾಯ.

    abscise
    ಸಕರ್ಮಕ ಕ್ರಿಯಾಪದ
    ಕತ್ತರಿಸಿ ತೆಗೆ: ಛೇದಿಸಿ ತೆಗೆ.

    abscissa
    ನಾಮವಾಚಕ
    (ಗಣಿತ) ಆಬ್ಸಿಸ; ಅಪಚ್ಛೇದ; ಯಾವುದೇ ಬಿಂದುವಿನಿಂದ X ಅಕ್ಷರೇಖೆಗೆ ಸಮಾನಾಂತರವಾಗಿ ಒಂದು ರೇಖೆಯನ್ನೆಳೆದಾಗ ಆ ರೇಖೆಯ ಮೇಲೆ ಆ ಬಿಂದುವಿಗೂ Y ಅಕ್ಷಕ್ಕೂ ಇರುವ ದೂರ (AP ಯಾ OB).

    abscission
    ನಾಮವಾಚಕ
  • (ಶಸ್ತ್ರವೈದ್ಯ) ಛೇದನ; ಕತ್ತರಿಸಿ ತೆಗೆದುಹಾಕುವುದು.
  • (ಸಸ್ಯವಿಜ್ಞಾನ) (ಗಿಡದಿಂದ ಹೂವು, ಹಣ್ಣು, ಎಲೆಗಳ) ಸಹಜ ವಿಯೋಗ; ಸ್ವಾಭಾವಿಕ ವಿಚ್ಛೇದ; ಸಹಜವಾದ ಬೇರ್ಪಡಿಕೆ.


  • logo