ನೀರು ಜೇಡಿ, ಜೇಡಿ ಕೆನೆ, ದ್ರವರೂಪದ ತೆಳುವಾದ ಮಣ್ಣು ಕುಂಭಾಲಂಕರಣಕ್ಕಾಗಿ ಬಳಸುವರು ಕುಂಭಾಲಕಂರಣದಲ್ಲಿ slip decoration ಕೂಡ ಒಂದು.
Slurry
Thick mixture of clay and water.
ಕೆಸರು ನೀರು, ಕವಳಿ.
Smooth clay
Clay which is smooth and plastic.
ನಯವಾದ, ಮೇಣದಂತ ಮಣ್ಣು.
Soft-glaze
Low fired glaze.
ಕಡಿಮೆ ತಾಪಮಾನದಲ್ಲಿ ಸುಟ್ಟ ಮಣ್ಣಿನ ಗ್ಲೇಸ್ಡ ವಸ್ತುಗಳು.
Soluble
Capable of being dissolved into water.
ಕರಗಬಲ್ಲ ಲೀನವಾಗಬಲ್ಲ.
Spitton
A vessel for spltting in
ತಾಂಬೂಲ ಉಗುಳುವ ಮಣ್ಣಿನ ಪಾತ್ರೆ.
Spraying
Applying glazes with a compressed air spray machine
ಗ್ಲೇಸಿಂಗ್ ಮಾಡುವ ಒಂದು ವಿಧಾನ ಸ್ಪ್ರೇಯಿಂಗ್ ಯಂತ್ರದಿಂದ ದ್ರಾವಣವನ್ನು ಮಡಕೆಗಳಿಗೆ ಸಿಂಪಡಿಸಿ ಗ್ಲೇಸಿಂಗ್ ಮಾಡುವುದು.
Sprigging
Applying clay in plastic state to form decoration.
ಅಲಂಕರಣಕ್ಕಾಗಿ ಕುಂಭವಸ್ತುಗಳಿಗೆ ನಯವಾದ ತೆಳುಮಣ್ಣನ್ನು ಲೇಪಿಸುವುದು. ಇದರಿಂದ ರಂಧ್ರಗಳು ಮುಚ್ಚಿ ಕುಂಭ ಬಲಗೊಳ್ಳುತ್ತದೆ.
Spouted vessel
It is a type of pot usually of rounded body which has projecting tubular spout.
ಸೊಂಡಿಲು ಪಾತ್ರೆ ನಳಿಗೆ ಪಾತ್ರೆ ದ್ರವ ಪದಾರ್ಥಗಳನ್ನು ಬಡಿಸುವ, ಅನುಕೂಲಕ್ಕಾಗಿ ಈ ಪಾತ್ರೆಗಳನ್ನು ಬಳಸುವರು ಚಹ ಕಿತ್ಲೆ, ಇದಕ್ಕೆ ಉತ್ತಮ ಉದಾಹರಣೆ ಮೊದಲಿಗೆ, ಮಣ್ಣಿನ ಸೊಂಡಿಲುಳ್ಳ ಪಾತ್ರೆಗಳು ಹೆಚ್ಚು ಬಳಕೆಯಲ್ಲಿದ್ದವು. ಈಗೀಗ ಲೋಹದ ಹಾಗೂ ಪ್ಲಾಸ್ಟಿಕ್ ಸೊಂಡಿಲಿನ ಪಾತ್ರೆಗಳು ಬಳಕೆಗೆ ಬಂದಿವೆ. ಬೋಗುಣಿ, ಹೂಜಿಗಳಿಗೆ ಅವು ಹಸಿ ಇರುವಾಗಲೆ ಸೊಂಡಿಲನ್ನು ಪ್ರತ್ಯೇಕವಾಗಿ ಮಾಡಿ ಅಂಟಿಸುವರು.