logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Oz
ನಾಮವಾಚಕ
(ಆಸ್ಟ್ರೇಲಿಯ) (ಅಶಿಷ್ಟ) ಆಸ್ಟ್ರೇಲಿಯ.

oz.
ಸಂಕ್ಷಿಪ್ತ
ounce(s).

ozocerite
ನಾಮವಾಚಕ
ನೆಲಮೇಣ; ಮೋಂಬತ್ತಿ ಮೊದಲಾದವಕ್ಕೆ ಬಳಸುವ, ನೆಲದಲ್ಲಿ ಸಿಕ್ಕುವ ಹೈಡ್ರೊಕಾರ್ಬನ್‍ಗಳಿಂದಾದ, ಮೇಣದಂಥ ಪದಾರ್ಥ.

ozokerite
ನಾಮವಾಚಕ
= ozocerite.

ozone
ನಾಮವಾಚಕ
  • (ರಸಾಯನವಿಜ್ಞಾನ) ಓಸೊನ್‍; ಅಣುವಿನಲ್ಲಿ ಮೂರು ಆಕ್ಸಿಜನ್‍ ಪರಮಾಣುಗಳುಳ್ಳ, ವಿಶಿಷ್ಟ ವಾಸನೆಯೂ ದಟ್ಟಣೆಯಲ್ಲಿ ನಸುನೀಲಿಬಣ್ಣವೂ ಉಳ್ಳ, ಅನಿಲರೂಪದಲ್ಲಿರುವ ಆಕ್ಸಿಜನ್ನಿನ ಭಿನ್ನರೂಪ.
  • (ರೂಪಕವಾಗಿ) ಉಲ್ಲಾಸಕಾರಕ, ಉಲ್ಲಾಸಯುತ, ಉತ್ಸಾಹಪೂರಕ–ಪ್ರಭಾವ; ಹುರಿದುಂಬಿಸುವ, ಉಲ್ಲಾಸಗೊಳಿಸುವ ಪ್ರಭಾವ.
  • (ಜನಸಾಮಾನ್ಯ ಪ್ರಯೋಗ) ಸಮುದ್ರತೀರ ಮೊದಲಾದ ಜಾಗಗಳಲ್ಲಿ ದೊರೆಯುವ ಉಲ್ಲಾಸಜನಕ ವಾಯು, ಗಾಳಿ.

  • ozone layer
    ನಾಮವಾಚಕ
    ಓಸೊನ್‍ ಸ್ತರ; ಸೂರ್ಯನ ಬಹುತೇಕ ನೇರಳಾತೀತ ವಿಕಿರಣವನ್ನು ಹೀರಿಕೊಳ್ಳುವ, ಸ್ಟ್ರಾಟೋಸಿಯರ್‍ನಲ್ಲಿರುವ, ಓಸೊನಿನ ಪದರ.

    ozone-friendly
    ಗುಣವಾಚಕ
    ಓಸೊನ್‍ಮಿತ್ರ; (ತಯಾರಿಸಿದ ವಸ್ತುಗಳ ವಿಷಯದಲ್ಲಿ) ಓಸೊನ್‍ ಸ್ತರವನ್ನು ನಾಶಗೊಳಿಸುವಂಥ ರಾಸಾಯನಿಕಗಳಿಲ್ಲದ.

    ozonic
    ಗುಣವಾಚಕ
    ಓಸೊನಿಗೆ ಸಂಬಂಧಿಸಿದ; ಓಸೊನಿನಂಥ; ಓಸೊನುಳ್ಳ.

    ozonide
    ನಾಮವಾಚಕ
    ಓಸೊನೈಡ್‍; ಅಪರ್ಯಾಪ್ತ ಕಾರ್ಬನಿಕ ಸಂಯುಕ್ತವು ಓಸೊನ್‍ನೊಂದಿಗೆ ಸಂಯೋಗವಾಗಿ ಉತ್ಪತ್ತಿ ಮಾಡುವ ಸಂಕಲನ ಸಂಯುಕ್ತ.

    ozoniferous
    ಗುಣವಾಚಕ
    ಓಸೊನ್‍ ಭರಿತ.


    logo