logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

magnum opus
ನಾಮವಾಚಕ
  • ಮಹತ್ವದ ಕೃತಿ; ಮೇರುಕೃತಿ (ಮುಖ್ಯವಾಗಿ ವಿಶೇಷವಾದ ಸಾಹಿತ್ಯ ಯಾ ಕಲಾಕೃತಿ).
  • ಪ್ರಧಾನ ಕೃತಿ; ಒಬ್ಬನು ಮಾಡಿದ, ಸಾಧಿಸಿದ ಮಹಾಕಾರ್ಯ.

  • magpie
    ನಾಮವಾಚಕ
  • ಮ್ಯಾಗ್‍ಪೈ; ಮಡಿವಾಳ ಹಕ್ಕಿ; ಕಪ್ಪು ಬಿಳಿ ಪುಕ್ಕವೂ ಉದ್ದವಾದ ಬಾಲವೂ ಉಳ್ಳ , ಯೂರೋಪು, ಏಷ್ಯಾ ಹಾಗೂ ಉತ್ತರ ಅಮೆರಿಕದ ಒಂದು ಹಕ್ಕಿ. Figure: magpie-1
  • ಒಣಹರಟೆ ಮಲ್ಲ; ಮಾತಿನ ಮಲ್ಲ; ಮಾತಾಳಿ.
  • ಒಂದು ಬಗೆಯ ಪಾರಿವಾಳ.
  • (ಬಂದೂಕಿನ) ಗುರಿ ಹಲಗೆಯ ಅತ್ಯಂತ ಹೊರಭಾಗ ಬಿಟ್ಟು ಅದರ ಒತ್ತಿನ ಒಳಸುತ್ತು ಯಾ ಈ ಭಾಗಕ್ಕೆ ತಗಲುವ ಗುಂಡಿನೇಟು.
  • ಗೊತ್ತುಗುರಿಯಿಲ್ಲದೆ ಎಲ್ಲ ಬಗೆಯ ವಸ್ತುಗಳನ್ನು ಸಂಗ್ರಹಿಸುವ ವ್ಯಕ್ತಿ.

  • magpie
    ಗುಣವಾಚಕ
  • (ಮ್ಯಾಗ್‍ಪೈ ಹಕ್ಕಿಯಂತೆ) ನಾನಾ ಬಣ್ಣವುಳ್ಳ; ಬಣ್ಣ ಬಣ್ಣದ.
  • (ಮ್ಯಾಗ್‍ಪೈ ಹಕ್ಕಿಯಂತೆ) ಸಿಕ್ಕಿದ್ದೆಲ್ಲವನ್ನೂ ಸಂಗ್ರಹಿಸುವ, ತಂದು ಶೇಖರಿಸುವ, ಒಟ್ಟುವ.
  • ಕಲಬೆರಕೆಯ; ಕಲಸುಮೇಲೋಗರದ: a magpie collection ಕಲಬೆರಕೆಯ ಸಂಗ್ರಹ.

  • magpie
    ಸಕರ್ಮಕ ಕ್ರಿಯಾಪದ
    (ಮ್ಯಾಗ್‍ಪೈ ಹಕ್ಕಿಯಂತೆ) ಶೇಖರಿಸು; ಸಂಗ್ರಹಿಸು; (ಕದ್ದು) ತಂದು ಒಟ್ಟು: he magpies ideas from others and uses them later as his own ಅವನು ಇನ್ನೊಬ್ಬರ ಅಭಿಪ್ರಾಯಗಳನ್ನು ಕದ್ದುತಂದು ಆಮೇಲೆ ಅವು ತನ್ನವೇ ಎನ್ನುವಂತೆ ಬಳಸುತ್ತಾನೆ.

    maguey
    ನಾಮವಾಚಕ
    ಮ್ಯಾಗ್‍ವೇ; ಒಂದು ಬಗೆಯ ಕತ್ತಾಳೆ ಗಿಡ.

    magus
    ನಾಮವಾಚಕ ಪದಗುಚ್ಛ
    the (three) Magi ಶಿಶು ಯೇಸುವಿಗೆ ಉಡುಗೊರೆಗಳನ್ನು ತಂದ ಪೂರ್ವದೇಶದ ಜ್ಞಾನಿತ್ರಯರು.
  • ಪುರಾತನ ಪರ್ಷಿಯನ್‍ ಪುರೋಹಿತ ವರ್ಗದವನು.
  • ಮಂತ್ರವಾದಿ; ಮಾಟಗಾರ.

  • Magyar
    ನಾಮವಾಚಕ ಪದಗುಚ್ಛ
    Magyar blouse = 1Magyar\((3)\).
  • ಮ್ಯಾಗ್ಯಾರ್‍; (ಈಗ ಹಂಗರಿಯಲ್ಲಿ ಹೆಚ್ಚಾಗಿರುವ) ಮಾಂಗೊ ಲಾಯ್ಡ್‍ ಬುಡಕಟ್ಟಿಗೆ ಸೇರಿದವನು.
  • ಮಾಡ್ಯಾರ್‍ ಯಾ ಮ್ಯಾಗ್ಯಾರ್‍ ಭಾಷೆ.
  • ಉಡುಪಿನ ಪ್ರಧಾನ ಭಾಗದೊಂದಿಗೆ ಸೇರಿರುವಂತೆ ಹೊಲಿದ ತೋಳುಳ್ಳ ಕುಪ್ಪಸ.

  • Magyar
    ಗುಣವಾಚಕ
  • (ಈಗ ಹಂಗರಿಯಲ್ಲಿ ಹೆಚ್ಚಾಗಿರುವ) ಮಾಂಗೊಲಾಯ್ಡ್‍ ಬುಡಕಟ್ಟಿಗೆ ಸೇರಿದ, ಮ್ಯಾಗ್ಯಾರ್‍ನ.
  • ಮಾಡ್ಯಾರ್‍ ಯಾ ಮ್ಯಾಗ್ಯಾರ್‍ ಭಾಷೆಯ.

  • mah-jong
    ನಾಮವಾಚಕ
    ಮಾಜಾಂಗ್‍; ಚೀನೀ ಪಗಡೆ; ಹೆಂಚುಗಳೆಂದು ಕರೆದಿರುವ 144 ಕಾಯಿಗಳನ್ನು ಬಳಸಿ ನಾಲ್ಕು ಜನರು ಆಡುವ ಒಂದು ಚೀನೀ ಆಟ.

    mah-jongg
    ನಾಮವಾಚಕ
    = mah-jong.


    logo