logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lagomorph
ನಾಮವಾಚಕ
(ಪ್ರಾಣಿವಿಜ್ಞಾನ) (ಮೊಲವೂ ಸೇರಿದಂತೆ) ಲ್ಯಾಗಮಾರ್ಹ್‍ ಗಣದ ಯಾವುದೇ ಸಸ್ತನಿ.

lagoon
ನಾಮವಾಚಕ
  • ಲಗೂನು; ತಗ್ಗಾದ ಮರಳು ದಂಡೆ, ಹವಳದ ದಿಬ್ಬ, ಮೊದಲಾದವುಗಳ ಮೂಲಕ ಸಮುದ್ರದಿಂದ ಬೇರ್ಪಡಿಸಿದ ಉಪ್ಪು ನೀರಿನ ಹರವು.
  • ಆವೃತ ಜಲಭಾಗ; ಸಮುದ್ರದಲ್ಲಿ ಹವಳದ ದಿಬ್ಬ ಸುತ್ತುವರಿದಿರುವ ಜಲಭಾಗ; ಹವಳ ದ್ವೀಪದ ನಡುವೆ ಅಲ್ಲಲ್ಲಿ ಇರುವ ಜಲಭಾಗ.
  • (ಅಮೆರಿಕನ್‍ ಪ್ರಯೋಗ, ಆಸ್ಟ್ರೇಲಿಯ, ನ್ಯೂಸಿಲೆಂಡ್‍) ದೊಡ್ಡ ಸರೋವರದ ಯಾ ನದಿಯ ಸಮೀಪವಿರುವ, ಚಿಕ್ಕದಾದ ಸಿಹಿನೀರು ಸರೋವರ.
  • ಕೃತಕ ಕೊಳ; ಊರಿನ ರೊಚ್ಚು, ಕಾರ್ಖಾನೆ ರೊಚ್ಚು, ಮೊದಲಾದವುಗಳನ್ನು ಆಕ್ಸಿಡೀಕರಣದಿಂದ ಸಂಸ್ಕರಿಸಿದ, ಹೆಚ್ಚು ಆಳವಿಲ್ಲದ ಕೃತಕ ಕೊಳ.

  • lah
    ನಾಮವಾಚಕ
    (ಸಂಗೀತ) ಧ; ಧೈವತ; ಸ್ವರಾಷ್ಟಕದ ಆರನೆಯ ಸ್ವರ.

    lahar
    ನಾಮವಾಚಕ
    ಜ್ವಾಲಾಮುಖಿಯ (ಭಗ್ನಾವಶೇಷಗಳುಳ್ಳ) ಮಣ್ಣಿನ – ಪ್ರವಾಹ, ಹರಿವು.

    laic
    ಗುಣವಾಚಕ
    ಪಾದ್ರಿಯಲ್ಲದ; ಲೌಕಿಕ; ಐಹಿಕ.

    laic
    ನಾಮವಾಚಕ
    ಪಾದ್ರಿಯಲ್ಲದವನು; ಲೌಕಿಕ; ಐಹಿಕ; ಸಾಮಾನ್ಯ ವ್ಯಕ್ತಿ.

    laical
    ಗುಣವಾಚಕ
    = 1laic.

    laically
    ಕ್ರಿಯಾವಿಶೇಷಣ
    ಲೌಕಿಕವಾಗಿ; ಐಹಿಕ ರೀತಿಯಲ್ಲಿ; ಪಾದ್ರಿಯಲ್ಲದವನ ರೀತಿಯಲ್ಲಿ.

    laicise
    ಸಕರ್ಮಕ ಕ್ರಿಯಾಪದ
    = laicize.

    laicity
    ನಾಮವಾಚಕ
    ಶ್ರೀಸಾಮಾನ್ಯರ, ಪಾದ್ರಿಯಲ್ಲದವರ ತತ್ತ್ವಗಳು ಯಾ ಪ್ರಭಾವ.


    logo