logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ignoratio elenchi
ನಾಮವಾಚಕ
(ತರ್ಕಶಾಸ್ತ್ರ) ಅನುಕ್ತೋಪಾಲಂಭ; ಅಸಂಬದ್ಧವಾದ; ಎದುರಾಳಿಯ ವಾದವನ್ನು ಖಂಡಿಸುವಂತೆ ತೋರುವ, ಆದರೆ ನಿಜವಾಗಿ ಅವನು ಮಂಡಿಸದಿರುವ ಯಾವುದೋ ವಿಷಯವನ್ನು ಅಪ್ರಮಾಣವೆಂದು ತೋರಿಸುವ, ವಾದ.

ignore
ಸಕರ್ಮಕ ಕ್ರಿಯಾಪದ
  • ಕಡೆಗಣಿಸು; ನಿರ್ಲಕ್ಷಿಸು; ಅಲಕ್ಷ್ಯ ಮಾಡು; ಲಕ್ಷ್ಯ ಮಾಡದಿರು; ಪರಿಗಣಿಸದಿರು; ಗಣನೆಗೆ ತಂದುಕೊಳ್ಳದಿರು; ಲೆಕ್ಕಕ್ಕೆ ತೆಗೆದುಕೊಳ್ಳದಿರು: ignore rude remarks ಒರಟು ಟೀಕೆಯನ್ನು ಕಡೆಗಣಿಸು.
  • (ನ್ಯಾಯದರ್ಶಿ ಮಹಾಮಂಡಲಿಯ ವಿಷಯದಲ್ಲಿ) (ದೋಷಾರೋಪಣೆಯ ದಾವೆಯನ್ನು) ಪುರಸ್ಕರಿಸದಿರು; ಒಪ್ಪದಿರು; ತಳ್ಳಿಹಾಕು.
  • ಉದ್ದೇಶಪೂರ್ವಕವಾಗಿ ಯಾ ಬುದ್ಧಿಪೂರ್ವಕವಾಗಿ – ಕಡೆಗಣಿಸು, ಉಪೇಕ್ಷಿಸು.

  • ignotum per ignotius
    ನಾಮವಾಚಕ
    ಅಜ್ಞಾತತರದಿಂದ ಅಜ್ಞಾತದ ವಿವರಣೆ; ಅಜ್ಞಾತವಾದುದನ್ನು ಅದಕ್ಕಿಂತ ಹೆಚ್ಚು ಅಜ್ಞಾತವಾದುದರ ಮೂಲಕ ವಿವರಿಸುವುದು; ವಿವರಿಸಲ್ಪಡಬೇಕಾಗಿರುವ ವಿಷಯಕ್ಕಿಂತ ಹೆಚ್ಚು ಅಸ್ಪಷ್ಟವಾದ ವಿವರಣೆ.

    iguana
    ನಾಮವಾಚಕ
    ಇಗ್ವಾನ; (ವೆಸ್ಟ್‍ ಇಂಡೀಸ್‍ ಮತ್ತು ದಕ್ಷಿಣ ಅಮೆರಿಕದ) ಸಸ್ಯವಾಸಿ ಉಡ; ಮರದ ಮೇಲೆ ವಾಸಿಸುವ, ಇಗ್ವಾನಿಡೇ ವಂಶಕ್ಕೆ ಸೇರಿದ, ದೊಡ್ಡ ಹಲ್ಲಿಜಾತಿಯ ಪ್ರಾಣಿ.

    iguanodon
    ನಾಮವಾಚಕ
    ಇಗ್ವಾನಡಾನ್‍; ಈಗ ಪಳೆಯುಳಿಕೆಯಾಗಿ ದೊರೆಯುವ, ಭಾರಿ ಸಸ್ಯಾಹಾರಿ ಉಡ.

    IHS
    ಸಂಕ್ಷಿಪ್ತ
    ಯೇಸುಕ್ರಿಸ್ತ (ಗ್ರೀಕ್‍ ದೊಡ್ಡ ಏ $(sumArum)$ ಅಕ್ಷರ, Hನಂತೆ ಇರುವುದರಿಂದ).

    ikebana
    ನಾಮವಾಚಕ
    ಇಕಿಬಾನಾ; ಜಪಾನಿನಲ್ಲಿ ಕ್ರಮಬದ್ಧವಾಗಿ ಮಾಡುವ ಒಂದು ರೀತಿಯ ಹೂಜೋಡಣೆ, ಪುಷ್ಪವಿನ್ಯಾಸ, ಪುಷ್ಪಾಲಂಕಾರ.

    ikon
    ನಾಮವಾಚಕ
    icon ಪದದ ರೂಪಾಂತರ.

    IL
    ಸಂಕ್ಷಿಪ್ತ
  • (ಅಮೆರಿಕನ್‍ ಪ್ರಯೋಗ) Illinois.
  • (ಬ್ರಿಟಿಷ್‍ ಪ್ರಯೋಗ) Institute of Linguists.

  • il-
    ಪೂರ್ವಪ್ರತ್ಯಯ
    l ಆದಿಯಲ್ಲಿರುವ ಪದಗಳಿಗೆ ಹಚ್ಚುವಾಗ in- ಎಂಬುದು ತಾಳುವ ರೂಪ.


    logo