logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

economically
ಕ್ರಿಯಾವಿಶೇಷಣ
  • ಮಿತವಾಗಿ; ಹಿಡಿತದಿಂದ; ಹಾಳತವಾಗಿ.
  • ಆರ್ಥಿಕವಾಗಿ; ಆರ್ಥಿಕ ಷ್ಟಿಯಿಂದ.
  • ಅರ್ಥಶಾಸ್ತ್ರದ ದೃಷ್ಟಿಯಿಂದ.

  • economics
    ನಾಮವಾಚಕ
  • ಅರ್ಥಶಾಸ್ತ್ರ; ದೇಶದ ಸಂಪತ್ತಿನ ಉತ್ಪಾದನೆ ಮತ್ತು ವಿತರಣೆ ಇವುಗಳ ವಿಷಯವನ್ನು ಪ್ರತಿಪಾದಿಸುವ ಶಾಸ್ತ್ರ.
  • (ಒಂದು ದೇಶದ) ಸಾಂಪತ್ತಿಕ ಸ್ಥಿತಿ; ಆರ್ಥಿಕಸ್ಥಿತಿ.
  • (ಯಾವುದೇ ವಸ್ತು, ವಿಷಯಕ್ಕೆ ಸಂಬಂಧಿಸಿದಂತೆ ಅದರ) ಆರ್ಥಿಕಸ್ಥಿತಿ; ಆರ್ಥಿಕತೆ: the economics of publishing ಪ್ರಕಾಶನದ ಆರ್ಥಿಕತೆ.

  • economise
    ಕ್ರಿಯಾಪದ
    = economize.

    economiser
    ನಾಮವಾಚಕ
    = economizer.

    economist
    ನಾಮವಾಚಕ
  • ಆರ್ಥಿಕ ನಿರ್ವಾಹಕ; ಹಣಕಾಸಿನ ಆಡಳಿತಗಾರ; ಹಣಕಾಸಿನ ನಿರ್ವಹಣೆ ಮಾಡುವವನು.
  • ಮಿತವ್ಯಯಗಾರ; ಮಿತವ್ಯಯ ಮಾಡುವವನು.
  • ಅರ್ಥಶಾಸ್ತ್ರಜ್ಞ; ಅರ್ಥಶಾಸ್ತ್ರದಲ್ಲಿ ಪರಿಣತ; ಆರ್ಥಿಕಸ್ಥಿತಿಯ ವಿಷಯವಾಗಿ ಅಧ್ಯಯನ ಮಾಡುವವನು ಯಾ ಅದನ್ನು ಕುರಿತು ಬರೆಯುವವನು.

  • economization
    ನಾಮವಾಚಕ
    ಮಿತವ್ಯಯ(ಗೊಳಿಸುವಿಕೆ); ಒಪ್ಪ; ಹಿಡಿತವಾಗಿ ಖರ್ಚುಮಾಡುವುದು.

    economize
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
    ಮಿತವ್ಯಯಗೊಳಿಸು; ಖರ್ಚು ಕಡಮೆಮಾಡು; ಖರ್ಚು ತಗ್ಗಿಸು: it was necessary to economize in the running of the machine ಯಂತ್ರವನ್ನು ನಡೆಸುವುದರಲ್ಲಿ ಮಿತವ್ಯಯಗೊಳಿಸಬೇಕಾಯಿತು. economize on ಮಿತವಾಗಿ ಬಳಸು; ಮಿತವ್ಯ ಮಾಡು.
  • ಹಾಳತವಾಗಿ ಬಳಸು; ಹಿಡಿತದಿಂದ ಬಳಸು; ಮಿತವಾಗಿ ಖರ್ಚುಮಾಡು; ಒಪ್ಪವಾಗಿ ಖರ್ಚುಮಾಡು.
  • ಹೆಚ್ಚು ಉಪಯೋಗವಾಗುವಂತೆ ನಿರ್ವಹಿಸು.

  • economizer
    ನಾಮವಾಚಕ
  • ಮಿತವ್ಯಯಿ; ಹಾಳತವಾಗಿ ಬಳಸುವವನು.
  • ತಾಪ ರಕ್ಷಕ; ಕುದಿಪಾತ್ರೆ ಮೊದಲಾದ ಯಂತ್ರಗಳಲ್ಲಿ ಶಾಖ ವ್ಯರ್ಥವಾಗುವುದನ್ನು ತಡೆಯುವ ಸಾಧನ.

  • economy
    ನಾಮವಾಚಕ ಪದಗುಚ್ಛ
    political economy ರಾಜಕೀಯ ಅರ್ಥನೀತಿ; ಆಡಳಿತದ ಆರ್ಥಿಕ ಸಮಸ್ಯೆಗಳ ಅಧ್ಯಯನ ಯಾ ಶಾಸ್ತ್ರ.
  • (ದೇಶ ಯಾ ಸಮಾಜವೊಂದರ) ಆರ್ಥಿಕಸ್ಥಿತಿ; ಆರ್ಥಿಕ ಸ್ವರೂಪ; ಸಂಪನ್ಮೂಲಗಳು ಮತ್ತು ವ್ಯಾಪಾರ ವ್ಯವಹಾರಗಳು.
  • ಆರ್ಥಿಕ ಆಡಳಿತ; ಆರ್ಥಿಕ ನಿರ್ವಹಣೆ; ಒಂದು ಸಮಾಜದ ವ್ಯಾಪಾರ, ವ್ಯವಹಾರಗಳ ಮತ್ತು ಸಂಪನ್ಮೂಲಗಳ ನಿರ್ವಹಣೆ.
  • (ಪ್ರಾಚೀನ ಪ್ರಯೋಗ) ಅರ್ಥಶಾಸ್ತ್ರ.
  • ಮಿತವ್ಯಯ; ಹಾಳತ; ಒಪ್ಪ; ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸುವುದು.
  • (ಬಹುವಚನದಲ್ಲಿ) ಮಿತವ್ಯಯದ ಸಂದರ್ಭಗಳು; ಮಿತಾಚರಣೆ.
  • (ದೇವತಾಶಾಸ್ತ್ರ) (ಒಂದು ಮತತತ್ತ್ವದ) ಯುಕ್ತ ಪ್ರತಿಪಾದನೆ: economy of truth ಆವಶ್ಯಕವಾದಷ್ಟು ಸತ್ಯದ ಪ್ರತಿಪಾದನೆ.
  • (ಪ್ರಾಚೀನ ಪ್ರಯೋಗ) ವ್ಯವಸ್ಥೆ; ರಚನೆ; ಸಂವಿಧಾನ: the individual’s psychic economy ವ್ಯಕ್ತಿಯ ಮನಸ್ಸಿನ ರಚನೆ.
  • ಸುವ್ಯವಸ್ಥಿತ ಸಂಘ; ಸಂಸ್ಥೆ, ಮೊದಲಾದವು.
  • (ವಿಮಾನ ಪ್ರಯಾಣದಲ್ಲಿ) ಕನಿಷ್ಠ ತರಗತಿ; ಅತ್ಯಂತ ಕಡಿಮೆ ದರದ ತರಗತಿ.

  • economy-size
    ಗುಣವಾಚಕ
    (ಸಾಮಾನು ಮೊದಲಾದವುಗಳ ವಿಷಯದಲ್ಲಿ) ಮಿತವ್ಯಯ ಗಾತ್ರದ; ಗಿರಾಕಿಗೆ ಆರ್ಥಿಕವಾಗಿ ಲಾಭವಾಗುವಷ್ಟು ದೊಡ್ಡ ಗಾತ್ರದ.


    logo