logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dark glasses
ನಾಮವಾಚಕ
ಕಪ್ಪು ಕನ್ನಡಕ; ಗಾಜುಗಳಿಗೆ ಕಪ್ಪು ಬಣ್ಣ ಹಾಕಿರುವ ಕನ್ನಡಕ.

dark horse
ನಾಮವಾಚಕ
ಕಪ್ಪು ಕುದುರೆ:
  • ಅಪರಿಚಿತ ಕುದುರೆ; ಅಪ್ರಸಿದ್ಧಾಶ್ವ; ಅಷ್ಟಾಗಿ ಪರಿಚಯವಿಲ್ಲದ ಯಾ ಗೊತ್ತಿಲ್ಲದ ಪಂದ್ಯದ ಕುದುರೆ.
  • ಅಪ್ರಸಿದ್ಧ ವಿಜೇತ; ಅಷ್ಟಾಗಿ ಪ್ರಸಿದ್ಧನಲ್ಲದ, ಆದರೂ ಪಂದ್ಯದಲ್ಲಿ ಗೆಲ್ಲುವ ವ್ಯಕ್ತಿ.

  • dark lantern
    ನಾಮವಾಚಕ
    ಕತ್ತಲೆಲಾಂದ್ರ; ಕಪ್ಪುಲಾಟೀನು; ಬೆಳಕನ್ನು ಮರೆಮಾಡಲು ಜರುಗಿಸಬಲ್ಲ ಬಾಗಿಲಿರುವ ಲಾಟೀನು.

    dark star
    ನಾಮವಾಚಕ
    (ಖಗೋಳ ವಿಜ್ಞಾನ) ಕೃಷ್ಣತಾರೆ; ಕರಿಚಿಕ್ಕೆ; ಕಪ್ಪುನಕ್ಷತ್ರ; ಒಂದು ನಕ್ಷತ್ರ ಯುಗಳದಲ್ಲಿ ಯಾ ತಂಡದಲ್ಲಿ ಇದ್ದು ಕಾಣಿಸದಿರುವ ನಕ್ಷತ್ರ.

    dark-adapted
    ಗುಣವಾಚಕ
    (ಕಣ್ಣಿನ ವಿಷಯದಲ್ಲಿ) ಕತ್ತಲೆಗೆ ಹೊಂದಿಸಿಕೊಂಡ; ಮಸುಕಿಗೆ, ಮಬ್ಬು ಬೆಳಕಿಗೆ – ಹೊಂದಿಕೊಂಡ.

    dark-room
    ನಾಮವಾಚಕ
    (ಸೂರ್ಯನ ಬೆಳಕು ಮೊದಲಾದವು ಬೀಳದಂತಿರುವ, ಹಿಲ್ಮು ಮೊದಲಾದವನ್ನು ಸಂಸ್ಕರಿಸಲು ಬಳಸುವ) ಕತ್ತಲೆಕೋಣೆ.

    darken
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ನುಡಿಗಟ್ಟು
    darken person’s door (ಸಾಮಾನ್ಯವಾಗಿ ನಿಷೇಧವಾಕ್ಯದಲ್ಲಿ) ಅವನ ಹೊಸ್ತಿಲು ತುಳಿ; ಒಬ್ಬನ ಮನೆಗೆ ಹೋಗು, ಭೇಟಿ ನೀಡು.
  • ಕತ್ತಲಾಗಿಸು; ನೆರಳುಗವಿಸು.
  • ಕಪ್ಪಾಗಿಸು; ಮಸುಕಾಗಿಸು.
  • (ರೂಪಕವಾಗಿ) ಮಂಕಾಗಿಸು; ಮಸುಕಾಗಿಸು; ಮಬ್ಬುಕವಿಸು; ಕಪ್ಪು ಹಿಡಿಸು; ಮಸಿ ಬಳಿ; ಮಸುಕು ಮಾಡು: darken his reputation with lies ಸುಳ್ಳುಗಳಿಂದ ಆತನ ಖ್ಯಾತಿಗೆ ಮಸಿ ಬಳಿ.
  • (ದೃಶ್ಯ, ಅರ್ಥ, ಮೊದಲಾದವನ್ನು) ಮಸುಕಾಗಿಸು; ಮಬ್ಬಾಗಿಸು; ಮಂಕುಮಾಡು; ಅಸ್ಪಷ್ಟ ಮಾಡು; ಅಸ್ಫುಟಗೊಳಿಸು.

  • darkie
    ನಾಮವಾಚಕ
    = darky.

    darkish
    ಗುಣವಾಚಕ
    ಮಸುಕಾದ; ಮಬ್ಬಾದ; ಕಪ್ಪೊತ್ತಿದ; ನಸುಗಪ್ಪಾದ: a darkish colour ನಸುಗಪ್ಪಾದ ಬಣ್ಣ.

    darkle
    ಸಕರ್ಮಕ ಕ್ರಿಯಾಪದ
  • ಅಸ್ಪಷ್ಟವಾಗಿರು; ಅಸ್ಫುಟವಾಗಿ ಕಂಡುಬರು; ಮಸುಕಾಗಿ ಕಾಣಿಸು.
  • ಕತ್ತಲಾಗು; ಮಬ್ಬಾಗು.
  • ಅಡಗಿಕೊ; ಮರೆಯಾಗು.


  • logo