logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calash
ನಾಮವಾಚಕ
  • ಮುಸುಕುಗಾಡಿ; ಗವುಸುಬಂಡಿ; ಸಣ್ಣ ಚಕ್ರವುಳ್ಳ, ಹಗುರವಾದ ಗವುಸುಗಾಡಿ.
  • ಗಾಡಿಗವುಸು; ಗಾಡಿಮುಸುಕು.
  • (ಹೆಂಗಸರ್‍ ಉಬ್ಬಿದ) ರೇಷ್ಮೆ ತಲೆಗವುಸು. Figure: calash 3
  • (ಕೆನಡ) ಎರಡು ಚಕ್ರದ ಕುದುರೆಗಾಡಿ.

  • calc-
    ಸಮಾಸ ಪೂರ್ವಪದ
    ಸುಣ್ಣ ಎಂಬರ್ಥದಲ್ಲಿ ಬಳಸುವ ಪೂರ್ವಪ್ರತ್ಯಯ: calc-sinter, calcspar.

    calc-sinter
    ನಾಮವಾಚಕ
    ಹೆಪ್ಪುಸುಣ್ಣಗಲ್ಲು; ಸುಣ್ಣಚಿಲುಮೆಗಳಿಂದಾದ, ಸ್ಫಟಿಕರೂಪದ ಸುಣ್ಣದ ನಿಕ್ಷೇಪ.

    calc-tuff
    ನಾಮವಾಚಕ
    ಸರಂಧ್ರ ಸುಣ್ಣಕಲ್ಲು; ತೂತುತೂತಾಗಿರುವ ಸುಣ್ಣದ ನಿಕ್ಷೇಪ.

    calcaneum
    ನಾಮವಾಚಕ
    (ಅಂಗರಚನಾಶಾಸ್ತ್ರ) ಕ್ಯಾಲ್ಕೇನಿಯಂ; (ಮುಖ್ಯವಾಗಿ ಮನುಷ್ಯನ) ಹಿಮ್ಮಡಿಮೂಳೆ.

    calcareous
    ಗುಣವಾಚಕ
    (ಖನಿಜಶಾಸ್ತ್ರ) ಸುಣ್ಣಯುಕ್ತ; ಸುಣ್ಣಗೂಡಿದ; ಕ್ಯಾಲ್ಸಿಯಂ ಕಾರ್ಬೊನೇಟ್‍ನ ಯಾ ಕ್ಯಾಲ್ಸಿಯಂ ಕಾರ್ಬೊನೇಟ್‍ ಉಳ್ಳ.

    calcarious
    ಗುಣವಾಚಕ
    =calcareous.

    calceolaria
    ನಾಮವಾಚಕ
    ಕ್ಯಾಲ್ಸಿಯಲೇರಿಯ; ಚಪ್ಪಲಿ ಹೂವುಗಿಡ; ಪಾಪಾಸು ಹೂಗಿಡ; ಚಪ್ಪಲಿಯ ಯಾ ಪಾಪಾಸಿನ ಆಕಾರದ ಹೂಗಳನ್ನು ಬಿಡುವ, ದಕ್ಷಿಣ ಅಮೆರಿಕದ ಗಿಡಗಳ ಒಂದು ಕುಲ ಯಾ ಆ ಕುಲದ ಒಂದು ಗಿಡ.

    calceolate
    ಗುಣವಾಚಕ
    (ಸಸ್ಯವಿಜ್ಞಾನ) (ಆರ್ಕಿಡ್‍ ಮೊದಲಾದ ಹೂಗಳ ವಿಷಯದಲ್ಲಿ) ಪಾಪಾಸಿನಾಕಾರದ; ಚಪ್ಪಲಿಯಾಕಾರದ.

    calces
    ನಾಮವಾಚಕ
    calxನ ಬಹುವಚನ.


    logo