logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bad break
ನಾಮವಾಚಕ
(ಆಡುಮಾತು)
  • ದುರದೃಷ್ಟ.
  • ಅಹಿತಕರ ಟೀಕೆ.
  • ತಪ್ಪೆಣಿಕೆಯ ಕೆಲಸ.

  • bad debt
    ನಾಮವಾಚಕ
    ಕೆಟ್ಟ ಸಾಲ; ಹೋಕು ಸಾಲ; ಕೈ ಬಿಟ್ಟ ಸಾಲ; ವಾಪಸಾಗದ ಯಾ ಹಿಂದಕ್ಕೆ ಬಾರದ ಸಾಲ.

    bad egg
    ನಾಮವಾಚಕ
    (ಅಶಿಷ್ಟ) ಪೋಲಿ; ಪೋಕರಿ; ದುಷ್ಟ; ಅಪ್ರಯೋಜಕ ಯಾ ಅಪ್ರಾಮಾಣಿಕ ಯಾ ನಂಬಿಕೆಗೆ ಅನರ್ಹನಾದ – ವ್ಯಕ್ತಿ.

    bad faith
    ನಾಮವಾಚಕ
    ಅಪ್ರಾಮಾಣಿಕತನ; ವಂಚಕತನ; ಅಪ್ರಾಮಾಣಿಕ ಯಾ ಮೋಸ ಮಾಡುವ ಪ್ರವೃತ್ತಿ.

    bad food
    ನಾಮವಾಚಕ
    ನಿಸ್ಸಾರವಾದ, ಸತ್ತ್ವವಿಲ್ಲದ, ದೇಹಪೋಷಕವಲ್ಲದ – ಆಹಾರ; ಕೆಟ್ಟ ಆಹಾರ.

    bad form
    ನಾಮವಾಚಕ
  • ಕೆಟ್ಟ ನಡವಳಿಕೆ; ಕುವರ್ತನೆ; ಅಸಭ್ಯ, ಅವಿನಯ, ಮರ್ಯಾದೆರಹಿತ – ವರ್ತನೆ; ಪ್ರಚಲಿತ ಸಾಮಾಜಿಕ ಪದ್ಧತಿ, ಸಂಪ್ರದಾಯಗಳಿಗೆ ವ್ಯತಿರಿಕ್ತವಾದ, ವಿರುದ್ಧವಾದ ನಡವಳಿಕೆ.
  • (ಕುದುರೆ, ಆಟಗಾರ, ಸ್ಪರ್ಧಿ, ಮೊದಲಾದವರ) ದುಃಸ್ಥಿತಿ; ತಕ್ಕ ಉತ್ಸಾಹ ಮೊದಲಾದವುಗಳಿಲ್ಲದಿರುವುದು.

  • bad hat
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ, ಅಶಿಷ್ಟ) = bad egg.

    bad job
    ನಾಮವಾಚಕ
  • (ಯಾವುದೇ ವ್ಯವಹಾರದ, ವಿಷಯದ) ಅಹಿತಕರ, ಅನನುಕೂಲ, ಅತೃಪ್ತಿಕರ – ಸ್ಥಿತಿ: make the best of a bad job ಅನನುಕೂಲ ಪರಿಸ್ಥಿತಿಯನ್ನು ಆದಷ್ಟು ಚೆನ್ನಾಗಿ ಬಳಸಿಕೊ.
  • ವ್ಯರ್ಥಶ್ರಮ; ನಿಷ್ಪ್ರಯೋಜಕ ಕೆಲಸ.

  • bad lands
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಬಂಜರು ಭೂಮಿ; ಸವೆತದಿಂದಾದ – ಪಾಳು ಭೂಮಿ, ಬೀಳು ನೆಲ.

    bad law
    ನಾಮವಾಚಕ
    ಸಲ್ಲದ ನ್ಯಾಯ; ಊರ್ಜಿತವಾಗದ, ಅಸಮರ್ಥನೀಯ – ನ್ಯಾಯ.


    logo