logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

abreaction
ನಾಮವಾಚಕ
(ಮನಶ್ಶಾಸ್ತ್ರ) ಭಾವವಿರೇಚನ; ಭಾವಶಮನ; ಭಾವಶೋಧನ; ಭಾವ ಯಾ ಭಾವನೆಯನ್ನು ಮುಖ್ಯವಾಗಿ ಚಿಕಿತ್ಸಕನೆದುರಿನಲ್ಲಿ ಪ್ರಕಟವಾಗಿ ಹೇಳಿಸುವುದರ ಮೂಲಕ ಮಾನಸಿಕ ದುಗುಡವನ್ನು ಪರಿಹರಿಸುವುದು.

abreactive
ಗುಣವಾಚಕ
  • ಭಾವವಿರೇಚಕ: ಸುಪ್ತಭಾವಗಳನ್ನು ಪ್ರಕಟಪಡಿಸಿ ಮಾನಸಿಕ ದುಗುಡ ಪರಿಹರಿಸುವ.
  • ಭಾವವಿರೇಚನೆಗೆ ಸಂಬಂಧಿಸಿದ.

  • abreast
    ಕ್ರಿಯಾವಿಶೇಷಣ
  • ಎದೆಸಮನಾಗಿ; ಪಕ್ಕಪಕ್ಕದಲ್ಲಿ; ಸರಿಯೆದೆಯಾಗಿ; ಜೊತೆಜೊತೆಯಲ್ಲಿ; ಒಂದೇ ಕಡೆಗೆ ಮುಖ ತಿರುಗಿಸಿಕೊಂಡು: walked two abrest ಇಬ್ಬರಿಬ್ಬರು ಜೊತೆಜೊತೆಯಾಗಿ ನಡೆದರು.
  • (ಅಭಿವೃದ್ಧಿಯಲ್ಲಿ, ಜ್ಞಾನಾಭಿವೃದ್ಧಿಯಲ್ಲಿ) ಹಿಂದುಳಿಯದೆ; ಹಿಂದೆ ಬೀಳದೆ; ಸರಿಸಮನಾಗಿ: abreast of the times ಕಾಲಕ್ಕೆ ಹಿಂದೆ ಬೀಳದೆ; ಕಾಲಗತಿಗೆ ಸಮನಾಗಿ.

  • abridg(e)ment
    ನಾಮವಾಚಕ
  • (ಪುಸ್ತಕ ಮೊದಲಾದವುಗಳ) ಸಂಗ್ರಹ; ಸಂಕ್ಷೇಪಗೊಳಿಸುವುದು.
  • (ಹಕ್ಕು ಮೊದಲಾದವುಗಳ) ಖೋತ; ಕಡಮೆಗೊಳಿಸುವುದು.
  • (ವಿಷಯ ಮೊದಲಾದವುಗಳ) ಸಾರಾಂಶ; ಗೋಷ್ವಾರೆ; ಸಂಕ್ಷೇಪ.
  • (ಕಾಲ, ದುಡಿಮೆ, ಮೊದಲಾದವುಗಳನ್ನು) ಮೊಟಕುಗೊಳಿಸುವಿಕೆ; ಕಡಮೆ ಮಾಡುವುದು.

  • abridge
    ಸಕರ್ಮಕ ಕ್ರಿಯಾಪದ
  • (ಪುಸ್ತಕ ಮೊದಲಾದವನ್ನು) ಸಂಕ್ಷೇಪಗೊಳಿಸು; ಸಂಗ್ರಹಿಸು.
  • (ಸ್ವಾತಂತ್ರ್ಯ ಮೊದಲಾದವನ್ನು) ಕುಗ್ಗಿಸು; ಸಂಕುಚಿಸು; ಕಡಮೆ ಮಾಡು.
  • (ಭೇಟಿ ಮೊದಲಾದವನ್ನು) ಮೊಟಕಿಸು; ಹ್ರಸ್ವಗೊಳಿಸು.
  • (ಪ್ರಾಚೀನ ಪ್ರಯೋಗ) (ವ್ಯಕ್ತಿಗೆ ಅನ್ವಯಿಸಿ) ತಪ್ಪಿಸು; ಕಸಿದುಕೊ: abridge a person of his rights ವ್ಯಕ್ತಿಯ ಹಕ್ಕುಗಳನ್ನು ಕಸಿದುಕೊ.

  • abroach
    ಕ್ರಿಯಾವಿಶೇಷಣ
  • (ಸಾರಾಯಿ ಮೊದಲಾದವು ಹರಿಯುವಂತೆ ಮಾಡಲು ಮರದ ಪೀಪಾಯಿಯನ್ನು) ತೂತುಕೊರೆದು; ರಂಧ್ರ ಮಾಡಿ.
  • ಚಾಲ್ತಿಯಲ್ಲಿ; ಚಲಾವಣೆಯಲ್ಲಿ; ಪ್ರಚಲಿತವಾಗಿ.

  • abroach
    ಆಖ್ಯಾತಕ ಗುಣವಾಚಕ
  • (ಮರದ ಪೀಪಾಯಿಯ ವಿಷಯದಲ್ಲಿ ಸಾರಾಯಿ ಮೊದಲಾದವು ಹರಿಯುವಂತೆ) ತೂತು ಕೊರೆದ; ರಂಧ್ರ ಮಾಡಿದ.
  • ಚಾಲ್ತಿಯಲ್ಲಿರುವ; ಚಲಾವಣೆಯಲ್ಲಿರುವ; ಪ್ರಚಲಿತ.

  • abroad
    ಕ್ರಿಯಾವಿಶೇಷಣ
  • ವಿದೇಶದಲ್ಲಿ; ಹೊರದೇಶದಲ್ಲಿ; ವಿದೇಶಕ್ಕೆ; ಹೊರದೇಶಕ್ಕೆ: go abroad ವಿದೇಶಕ್ಕೆ ಹೋಗು.
  • (ಸರಿಯಾದುದನ್ನು ಬಿಟ್ಟು) ದಾರಿತಪ್ಪಿ; ಗುರಿತಪ್ಪಿ: all abroad ಎಲ್ಲರೂ ದಾರಿತಪ್ಪಿದವರೇ.
  • (ಪ್ರಾಚೀನ ಪ್ರಯೋಗ) ಮನೆಯಾಚೆ; ಮನೆಯಿಂದ ಹೊರಗೆ: you were abroad early this morning ನೀವು ಇವತ್ತು ಬೆಳಿಗ್ಗೆ ಮುಂಚೆಯೇ ಮನೆಯಿಂದ ಹೊರಗೆ ಹೋಗಿದ್ದಿರಿ.
  • ಎಲ್ಲ ಕಡೆಗೂ; ವಿಸ್ತಾರವಾಗಿ; ವ್ಯಾಪಕವಾಗಿ; ವಿಶಾಲವಾಗಿ: scattered abroad ಎಲ್ಲ ಕಡೆಯಲ್ಲೂ ಹಂಚಿಹೋಗಿ.
  • ಹಬ್ಬುತ್ತಾ; ಹರಡುತ್ತಾ; ವ್ಯಾಪಿಸುತ್ತಾ; ಪ್ರಚಲಿತವಾಗಿ: there is a rumour abroad ಒಂದು ವದಂತಿ ಹರಡುತ್ತದೆ.

  • abroad
    ನಾಮವಾಚಕ
    ವಿದೇಶ(ಗಳು); ಹೊರದೇಶ(ಗಳು): from abroad ವಿದೇಶದಿಂದ; ಇನ್ನೊಂದು ದೇಶದಿಂದ.

    abrogate
    ಸಕರ್ಮಕ ಕ್ರಿಯಾಪದ
  • (ಕಾನೂನು, ಪದ್ಧತಿ, ಮೊದಲಾದವುಗಳನ್ನು) ರದ್ದುಗೊಳಿಸು; ವಜಾಮಾಡು.
  • ತಳ್ಳಿಹಾಕು; ಕೊನೆಗೊಳಿಸು; ನಿರಾಕರಿಸು; ನಾಶಮಾಡು: abrogate the values that are fixed ಸ್ಥಾಪಿತವಾದ ಮೌಲ್ಯಗಳನ್ನು ನಿರಾಕರಿಸು.


  • logo