logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

talismanic
ಗುಣವಾಚಕ
ತಾಯಿತದ, ಅದಕ್ಕೆ ಸಂಬಂಧಿಸಿದ, ಮಾಂತ್ರಿಕ ಶಕ್ತಿಯಿರುವ.

talk
ನಾಮವಾಚಕ ಪದಗುಚ್ಛ
  • ಸಂಭಾಷಣೆ; ಸಲ್ಲಾಪ; ಮಾತು; ಮಾತುಕತೆ: let us have some talk ಸ್ವಲ್ಪ ಮಾತನಾಡೋಣ.
  • (ಬಹುವಚನದಲ್ಲಿ) ಚರ್ಚೆ; ಮಾತುಕತೆ ಯಾ ಸಮಾಲೋಚನೆ: talks were held ಮಾತುಕತೆ ನಡೆಸಲಾಯಿತು.
  • (ಮುಖ್ಯವಾಗಿ ಬಾನುಲಿ ಪ್ರಸಾರದಲ್ಲಿನ) ಲಘು ಭಾಷಣ ಯಾ ಸಂಭಾಷಣೆ ಶೈಲಿಯ ಉಪನ್ಯಾಸ.
  • ನಿರ್ದಿಷ್ಟ ಬಗೆಯ ಮಾತು(ಗಾರಿಕೆ): baby-talk ಮಕ್ಕಳ ಮಾತು; ಮಕ್ಕಳ ತೊದಲ್ನುಡಿ. sailors’ talk ನಾವಿಕ–ಭಾಷೆ, ಮಾತು.
    1. ಗುಲ್ಲು; ವದಂತಿ; ಗಾಳಿ–ಮಾತು, ಸುದ್ದಿ; ಗುಸುಗುಸು: there is a talk of merger ವಿಲೀನದ ಗುಸುಗುಸು ಹರಡಿದೆ.
    2. ಗಾಳಿಮಾತಿನ, ವದಂತಿಯ–ವಿಷಯ: their success was the talk of the town ಅವರ ವಿಜಯ ಊರಿನಲ್ಲೆಲ್ಲಾ ಸುದ್ದಿಯಾಗಿತ್ತು.

  • talk
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
  • ಮಾತನಾಡು; ಹೇಳು; ವ್ಯಕ್ತಪಡಿಸು; ಚರ್ಚಿಸು: you are talking nonsense ನೀನು ಅಸಂಬದ್ಧವಾಗಿ, ಅರ್ಥಹೀನವಾಗಿ ಮಾತನಾಡುತ್ತಿದ್ದೀಯೆ. talked cricket all day ದಿನವಿಡೀ ಕ್ರಿಕೆಟ್‍–ಮಾತನಾಡಿದ, ಚರ್ಚಿಸಿದ.
  • ಒಂದು ಭಾಷೆ(ಯಲ್ಲಿ) ಮಾತನಾಡು: they were talking French ಅವರು ಹ್ರೆಂಚ್‍ನಲ್ಲಿ ಮಾತನಾಡುತ್ತಿದ್ದರು.
  • (ಮಾತನಾಡುವುದರ ಮೂಲಕ) ಒಂದು ವಿಶಿಷ್ಟ ಸ್ಥಿತಿ, ಅನುಭವ, ಮೊದಲಾದವನ್ನು ಉಂಟುಮಾಡು: he talked himself hoarse ಅವನು ಗಂಟಲು ಒಡೆಯುವಷ್ಟು ಮಾತನಾಡಿದ; ಗಂಟಲು ಹೂತು ಹೋಗುವವರೆಗೆ ಮಾತನಾಡಿದ. how did you talk them into? ನೀನು ಹೇಗೆ ಮಾತನಾಡಿ ಅವರು ಅದನ್ನೊಪ್ಪುವಂತೆ ಮಾಡಿದೆ? talked them out of the difficulty ಚಾಕಚಕ್ಯತೆಯಿಂದ ಮಾತನಾಡಿ ಕಷ್ಟದ ಪರಿಸ್ಥಿತಿಯಿಂದ ಅವರನ್ನು ಪಾರುಮಾಡಿದ.

  • talk show
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ರೇಡಿಯೋ ಯಾ ದೂರದರ್ಶನದಲ್ಲಿನ) ಸಂದರ್ಶನ ಕಾರ್ಯಕ್ರಮ; ಪ್ರಸಿದ್ಧ ವ್ಯಕ್ತಿಗಳೊಡನೆ ಅನೌಪಚಾರಿಕ ಸಂಭಾಷಣೆ ನಡೆಸುವ ಸಂದರ್ಶನ.

    talkathon
    ನಾಮವಾಚಕ
    (ಆಡುಮಾತು) ಮಾತಿನ ಪುರಾಣ; ದೀರ್ಘವಾಗಿ ಬಎಳೆಯುವ ಸಾರ್ವಜನಿಕ ಚರ್ಚೆ, ಮಾತುಕತೆ.

    talkative
    ಗುಣವಾಚಕ
    ಮಾತಾಳಿ; ಹರಟೆಮಲ್ಲ; ವಾಚಾಳಿ; ಮಾತುಪ್ರಿಯ; ಅತಿಯಾಗಿ–ಮಾತನಾಡುವ, ಹರಟುವ, ಗಳಹುವ.

    talkatively
    ಕ್ರಿಯಾವಿಶೇಷಣ
    ಮಾತಾಳಿಯಾಗಿ; ಸುಮ್ಮನೆ ಹರಟುತ್ತಾ.

    talkativeness
    ನಾಮವಾಚಕ
    ಮಾತಾಳಿತನ; ವಾಚಾಳಿತನ; ಹರಟುವ ಸ್ವಭಾವ.

    talkback
    ನಾಮವಾಚಕ
  • (ಕೆಲವೊಮ್ಮೆ ವಿಶೇಷಣವಾಗಿ ಪ್ರಯೋಗ) ದ್ವಿಸಂಪರ್ಕ ವ್ಯವಸ್ಥೆ; ಧ್ವನಿವರ್ಧಕದಿಂದ ಎರಡೂ ಕಡೆ ಸಂಪರ್ಕ ಸಾಧಿಸುವ ಉಭಯಸಂಪರ್ಕ ವ್ಯವಸ್ಥೆ.
  • (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) = phone-in.

  • talkee-talkee
    ನಾಮವಾಚಕ
  • ಬಡಬಡಿಕೆ; ಬರಿ ವಟವಟ ಮಾತು; ವಟವಟ ಮಾತಿನ ಸುರಿಮಳೆ.
  • (ವೆಸ್ಟ್‍ ಇಂಡೀಸ್‍ ನೀಗ್ರೋಗಳ) ಹರಕುಮುರುಕು ಇಂಗ್ಲಿಷ್‍ ಮಾತು.


  • logo