logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

obtainer
ನಾಮವಾಚಕ
ಗ್ರಾಹಕ; ಪಡೆವವ; ಯಾವುದಾನ್ನಾದರೂ ಪಡೆಯುವವ.

obtainment
ನಾಮವಾಚಕ
ಪಡೆಯುವಿಕೆ; ಹೊಂದುವಿಕೆ; ಸಂಪಾದನೆ; ಪ್ರಾಪ್ತಿ; ದೊರಕಿಸಿಕೊಳ್ಳುವಿಕೆ; ಪಡೆದುಕೊಳ್ಳುವಿಕೆ.

obtect
ಗುಣವಾಚಕ
(ಪ್ರಾಣಿವಿಜ್ಞಾನ) [ಕೆಲವು ಕೀಟಗಳ ಪ್ಯೂಪದ (pupa) ವಿಷಯದಲ್ಲಿ] ಆವೃತ; ಅವಕುಂಠಿತ; ಕವಚಿತ; ಗಡುಸು ಹೊದಿಕೆಯ; ಕೊಂಬಿನ ಕವಚವುಳ್ಳ; ಕೈಟನ್ನಿನ(chitin) ಗಡುಸಾದ ಹೊದಿಕೆಯುಳ್ಳ.

obtention
ನಾಮವಾಚಕ
= obtainment.

obtest
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ಪ್ರಾಚೀನ ಪ್ರಯೋಗ) (ಪ್ರಾಚೀನ ಪ್ರಯೋಗ) ಪ್ರತಿಭಟಿಸು; ಖಂಡಿಸು: I obtest against all revolutions ಎಲ್ಲ ಬಗೆಯ ಕ್ರಾಂತಿಗಳ ವಿರುದ್ಧ ನಾನು ಪ್ರತಿಭಟಿಸುತ್ತೇನೆ.
  • (ಪ್ರಮಾಣಕ್ಕೆ ಕಟ್ಟುವೀಳಿಸಿ ಯಾ ಶಾಪದ ಭಯ ಹುಟ್ಟಿಸಿ ಯಾವುದನ್ನೇ) ಮಾಡಲು–ಒತ್ತಾಯ ಪಡಿಸು, ನಿರ್ಬಂಧಿಸು.
  • ದೈನ್ಯದಿಂದ ಬೇಡಿಕೊ.
  • (ದೇವರನ್ನು) ಸಾಕ್ಷಿಕೋರು; ಸಾಕ್ಷಿಗಾಗಿ ಮೊರೆಯಿಡು.

  • obtestation
    ನಾಮವಾಚಕ
    (ಪ್ರಾಚೀನ ಪ್ರಯೋಗ)
  • (ಪ್ರಮಾಣಕ್ಕೆ ಕಟ್ಟುಬೀಳಿಸಿ ಯಾ ಶಾಪದ ಭಯ ಹುಟ್ಟಿಸಿ ಯಾವುದನ್ನೇ) ಮಾಡಲು–ಒತ್ತಾಯಪಡಿಸುವುದು.
  • ದೈನ್ಯದಿಂದ ಬೇಡಿಕೊಳ್ಳುವುದು.
  • ದೇವರನ್ನು ಸಾಕ್ಷಿ ಕೋರುವುದು.
  • ಖಂಡನೆ; ಪ್ರತಿಭಟನೆ.

  • obtrude
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • ನಡುವೆ ತಲೆ ಹಾಕಿಕೊಂಡು ಬರು; ನಡುವೆ ತಲೆ, ಮೂಗು ತೂರಿಸು, ಹಾಕು.
  • (ಒಬ್ಬನ ಮೇಲೆ, ಒಬ್ಬನ ಗಮನ ಸೆಳೆಯುವಂತೆ) ಮುನ್ನುಗ್ಗಿ ಬರು; ಮೇಲ್ವಾಯ್ದ ಬರು; ಬಲವಂತದಿಂದ ನುಗ್ಗು.
  • (ತನ್ನ ಅಭಿಪ್ರಾಯ ಮೊದಲಾದವನ್ನು ಇನ್ನೊಬ್ಬನ ಮೇಲೆ) ಹೇರು; ಹೊರಿಸು.
  • ಮುಂಚಾಚು, ಕಣ್ಣಿಗೆ ಬೀಳುವಂತೆ–ಮುಂದೂಡು ಮುಂದಕ್ಕೆ ತಳ್ಳು: the snail obtruded his tentacle ಬಸವನ ಹುಳು ತನ್ನ ತಂತುವನ್ನು ಕಣ್ಣಿಗೆ ಬೀಳುವಂತೆ ಮುಂಚಾಚಿತು.

  • obtruder
    ನಾಮವಾಚಕ
  • ಮುನ್ನುಗ್ಗಿ ಬರುವವ.
  • (ನಡುವೆ) ತಲೆ ಹಾಕಿಕೊಂಡು ಬರುವವ.

  • obtruncate
    ಸಕರ್ಮಕ ಕ್ರಿಯಾಪದ
    (ಸಾಹಿತ್ಯಕ) ತುದಿಯನ್ನು ಕಡಿದು ಹಾಕು ಛೇದಿಸು.

    obtrusion
    ನಾಮವಾಚಕ
  • ನುಗ್ಗಿ ಬರುವುದು; (ಬಲಾತ್ಕಾರವಾಗಿ, ಕರೆಸಿಕೊಳ್ಳದೆ) ಇತರರ ವಿಷಯಗಳಲ್ಲಿ ತಲೆ ಹಾಕಿಕೊಂಡು ಬರುವುದು; ಮಧ್ಯಪ್ರವೇಶ.
  • (ಒಬ್ಬರ ಗಮನಕ್ಕೆ ಬೀಳುವಂತೆ, ಕಣ್ಣು ಕುಕ್ಕುವಂತೆ) ಮುಂಚಾಚಿದ ವಸ್ತು ಮೊದಲಾದವು.


  • logo