logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

magnifico
ನಾಮವಾಚಕ
  • ವೆನಿಸ್‍ ನಗರದ ಶ್ರೀಮಂತ, ಮಾಂಡಲಿಕ.
  • ಮಹಾಶ್ರೀಮಂತ ; ವಿಭವಾನ್ವಿತ.

  • magnifier
    ನಾಮವಾಚಕ
    ವರ್ಧಕ; ವರ್ಧಿಸುವ ಯಾ ದೊಡ್ಡದು ಮಾಡುವ ವ್ಯಕ್ತಿ ಯಾ ವಸ್ತು.

    magnify
    ಸಕರ್ಮಕ ಕ್ರಿಯಾಪದ ಪದಗುಚ್ಛ
    magnifying glass ವರ್ಧಕ ಮಸೂರ; ಭೂತಗನ್ನಡಿ; ವಸ್ತುಗಳು ದೊಡ್ಡದಾಗಿ ಕಾಣುವಂತೆ ಮಾಡುವ ಮಸೂರ.
  • ವರ್ಧಿಸು; (ಮಸೂರ ಮೊದಲಾದ ಸಾಧನಗಳ ಸಹಾಯದಿಂದ ಯಾವುದೇ ವಸ್ತು) ದೊಡ್ಡದಾಗಿ ಕಾಣುವಂತೆ ಮಾಡು.
  • ಉತ್ಪ್ರೇಕ್ಷಿಸು; ದೊಡ್ಡದು ಮಾಡು.
  • (ವಿರಳ ಪ್ರಯೋಗ) ಹೆಚ್ಚಿಸು; ವೃದ್ಧಿಮಾಡು.
  • (ಪ್ರಾಚೀನ ಪ್ರಯೋಗ) ಹೊಗಳು; ಕೊಂಡಾಡು.

  • magniloquence
    ನಾಮವಾಚಕ
  • ವಾಗ್ವಿಜೃಂಭಣಣೆ; ವಾಗಾಡಂಬರ; ವಾಕ್ಸಿರಿ; ಉದಾತ್ತ ವಾಗ್ಧೋರಣೆ.
  • ಬಡಾಯಿ (ಕೊಚ್ಚುವುದು); ಬೊಗಳೆ(ಹೊಡೆಯುವುದು).

  • magniloquent
    ಗುಣವಾಚಕ
  • ವಾಗ್ವಿಜೃಂಭಣೆಯಿಂದ ಕೂಡಿದ; ವಾಗಾಡಂಬರಪೂರ್ಣ; ಉದಾತ್ತ ವಾಗ್ಧೋರಣೆಯ; ವಾಕ್ಸಿರಿಯ.
  • ಬಡಾಯಿ ಕೊಚ್ಚುವ; ಬೊಗಳೆ ಹೊಡೆಯುವ.

  • magniloquently
    ಕ್ರಿಯಾವಿಶೇಷಣ
  • ವಾಗಾಡಂಬರದಿಂದ; ವಾಗ್ಧೋರಣೆಯಿಂದ.
  • ಬಡಾಯಿ ಕೊಚ್ಚುತ್ತಾ; ಬೊಗಳೆ ಹೊಡೆದು.

  • magnitude
    ನಾಮವಾಚಕ ಪದಗುಚ್ಛ
    of the first magnitude (ರೂಪಕವಾಗಿ) ಅತ್ಯಂತ ಪ್ರಮುಖವಾದ, ಮಹತ್ವದ.
  • ಬೃಹತ್ವ; ಬೃಹತ್ತು; ದೊಡ್ಡದಾಗಿರುವಿಕೆ: the magnitude of the building ಕಟ್ಟಡದ ಬೃಹತ್ತು.
  • ವೈಶಾಲ್ಯ; ವಿಸ್ತಾರ; ಹರವು; ಪ್ರಮಾಣ; ಗಾತ್ರ; ಅಳತೆ: a war of such magnitude ಅಷ್ಟು ದೊಡ್ಡ ಪ್ರಮಾಣದ ಯುದ್ಧ.
  • ಪ್ರಾಮುಖ್ಯ; ಪ್ರಮುಖತೆ; ಮಹತ್ವ: the magnitude of the question ಆ ಸಮಸ್ಯೆಯ ಮಹತ್ವ.
    1. (ನಕ್ಷತ್ರವೊಂದರ) ಪ್ರಕಾಶ ಮಾನತೆ; ಉಜ್ವಲತೆ ಪ್ರಮಾಣ.
    2. (ಇಂಥ ಪ್ರಕಾಶಮಾನತೆಯ ಆಧಾರದ ಮೇಲೆ) ವರ್ಗೀಕರಿಸಿದ ನಕ್ಷತ್ರಗಳ ವರ್ಗ: of the third magnitude ಮೂರನೆ ಪ್ರಕಾಶಮಾನತೆಯ ವರ್ಗದ.

  • magnolia
    ನಾಮವಾಚಕ
  • ಮ್ಯಾಗ್ನೋಲಿಯ:
    1. ಹೂವು, ಎಲೆಗಳ ಅಂದಕ್ಕಾಗಿ ಬೆಳೆಸುವ, ಸಂಪಿಗೆ ಜಾತಿಯ ಸಸ್ಯಗಳ ಒಂದು ಕುಲ.
    2. ಈ ಕುಲದ ಪೊದೆ ಯಾ ಮರ.
  • ಕೆನೆ ಎಳೆಗೆಂಪು ಬಣ್ಣ.

  • magnox
    ನಾಮವಾಚಕ
    ಮ್ಯಾಗ್ನಾಕ್ಸ್‍; ಬೈಜಿಕ ರಿಯಾಕ್ಟರುಗಳಲ್ಲಿ ಯುರೇನಿಯಮ್‍ ಇಂಧನವನ್ನು ಸುತ್ತಿಡಲು ಬಳಸುವ ಮೆಗ್ನೀಸಿಯಂ ಮಿಶ್ರಲೋಹ.

    magnum
    ನಾಮವಾಚಕ
  • ಐವತ್ತು ಔನ್ಸ್‍ ತುಂಬಿರುವ ಮದ್ಯದ ಶೀಷೆ.
  • (ಮದ್ಯದ) ಐವತ್ತು ಔನ್ಸ್‍.
  • ತುಂಬ ಶಕ್ತಿಶಾಲಿಯಾದ ಯಾ ದೊಡ್ಡದಾದ ತೋಟಾ ಯಾ ಷೆಲ್ಲು.
  • (ಅನೇಕವೇಳೆ ವಿಶೇಷಣವಾಗಿ) ಅದರ ಒಳವ್ಯಾಸ ಸೂಚಿಸುವುದಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾಗಿರುವಂತೆ ಹೊಂದಿಸಿದ ತೋಟಾ ಯಾ ಫಿರಂಗಿ.


  • logo