logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ignoble
ಗುಣವಾಚಕ
  • ಹೀನ; ಅವರ; ಕೀಳು – ಹುಟ್ಟಿನ, ಜನ್ಮದ, ಸ್ಥಾನದ, ಮಟ್ಟದ, ಯಶಸ್ಸಿನ: ignoble mob ಕೀಳುಮಟ್ಟದ ಜನಜಂಗುಳಿ. ignoble birth ಕೀಳು ಹುಟ್ಟು; ಹೀನ ಜನ್ಮ.
  • ತುಚ್ಛ; ನೀಚ; ಹೇಯ; ನಿಕೃಷ್ಟ; ಹೀನ; ಕ್ಷುದ್ರ; ಅಲ್ಪ; ಅಧಮ; ಅಪಮಾನಕರ; ಮಾನಗೆಟ್ಟ: an ignoble law ತುಚ್ಛ ಶಾಸನ. ignoble purpose ನೀಚೋದ್ದೇಶ; ಹೀನೋದ್ದೇಶ.

  • ignobleness
    ನಾಮವಾಚಕ
  • ಹೀನ ಜನ್ಮ; ಕೀಳು ಜನ್ಮ ಪಡೆದಿರುವುದು.
  • ತುಚ್ಛತೆ; ನಿಕೃಷ್ಟತೆ; ಅಲ್ಪತನ; ಮಾನಗೆಟ್ಟತನ.

  • ignobly
    ಕ್ರಿಯಾವಿಶೇಷಣ
    ಕೀಳಾಗಿ; ಹೀನ ರೀತಿಯಲ್ಲಿ; ನಿಕೃಷ್ಟವಾಗಿ; ಮಾನಗೆಟ್ಟಂತೆ.

    ignominious
    ಗುಣವಾಚಕ
    ತಲೆ ತಗ್ಗಿಸುವಂಥ; ಅವಮಾನಕರ; ಕಳಂಕ ತರುವ; ಗೌರವಕ್ಕೆ ಕುಂದು ತರುವ: an ignominious peace treaty ಕಳಂಕ ತರುವ ಶಾಂತಿಕೌಲು.

    ignominiously
    ಕ್ರಿಯಾವಿಶೇಷಣ
    ತಲೆ ತಗ್ಗಿಸುವಂತೆ; ಅವಮಾನಕರವಾಗಿ; ಗೌರವಕ್ಕೆ ಕುಂದು ತರುವ ರೀತಿಯಲ್ಲಿ.

    ignominy
    ನಾಮವಾಚಕ
  • ಅಪಮಾನ; ಅಪಕೀರ್ತಿ; ಅಪಖ್ಯಾತಿ; ಕುಖ್ಯಾತಿ; ಕೆಟ್ಟ ಹೆಸರು; ಕಳಂಕ; ಅಗೌರವ: the ignominy of prison ಜೈಲಿನ ಅಪಕೀರ್ತಿ.
  • (ಪ್ರಾಚೀನ ಪ್ರಯೋಗ) ಹೇಯ ನಡತೆ; ಅಪಮಾನಕರ ವರ್ತನೆ: ignominy of abandoning his comrades ಅವನ ಒಡನಾಡಿಗಳನ್ನು ತೊರೆಯುವ ಹೇಯ ವರ್ತನೆ.

  • ignoramus
    ನಾಮವಾಚಕ
    ಮೂಢ; ದಡ್ಡ; ಶುಂಠ; ಹೆಡ್ಡ.

    ignorance
    ನಾಮವಾಚಕ
    ಅಜ್ಞಾನ; ತಿಳಿವಿಲ್ಲದಿರುವುದು; ಅರಿವಿಲ್ಲದಿರುವುದು; ಮೌಢ್ಯ; ಅರಿಯಮೆ (ಗ್ರಾಂಥಿಕ ಪ್ರಯೋಗ): where ignorance is bliss, it is folly to be wise ಎಲ್ಲಿ ಅಜ್ಞಾನ ಪರಮ ಸುಖವೋ ಅಲ್ಲಿ ಜ್ಞಾನಿಯಾಗಿರುವುದೇ ಹೆಡ್ಡತನ.

    ignorant
    ಗುಣವಾಚಕ
  • ತಿಳಿವಿಲ್ಲದ; ತಿಳುವಳಿಕೆ ಸಾಲದ; ಅರಿವಿಲ್ಲದ: he’s quite ignorant, he can’t even read ಅವನು ಏನೇನೂ ತಿಳಿಯದವನು, ಅವನಿಗೆ ಓದಲೂ ಬಾರದು.
  • ಗೊತ್ತಿಲ್ಲದ; ಅಜ್ಞಾನದ; ವಿಷಯಜ್ಞಾನವಿಲ್ಲದ: ignorant of his fate ಅವನಿಗೆ ಒದಗುವ ವಿಧಿ ಗೊತ್ತಿಲ್ಲದೆ. ignorant in the business of navigation ಸಮುದ್ರಯಾನದ ವಿಷಯ ಗೊತ್ತಿಲ್ಲದ.
  • (ತಿಳಿವಳಿಕೆಯಿಲ್ಲದಿರುವುದರಿಂದ) ಅಸಂಸ್ಕೃತ ವರ್ತನೆಯ; ಒರಟು ನಡವಳಿಕೆಯ; ಶಿಷ್ಟಾಚಾರವಲ್ಲದ: ignorant behaviour ಅಸಂಸ್ಕೃತ ನಡವಳಿಕೆಯ.

  • ignorantly
    ಕ್ರಿಯಾವಿಶೇಷಣ
  • ತಿಳಿವಳಿಕೆಯಿಲ್ಲದ ರೀತಿಯಲ್ಲಿ; ತಿಳಿವಳಿಕೆ ಸಾಲದೆ;ಅರಿವಿಲ್ಲದೆ.
  • ಗೊತ್ತಿಲ್ಲದೆ; ಅಜ್ಞಾನದಿಂದ; ವಿಷಯಜ್ಞಾನವಿಲ್ಲದೆ.
  • ಅಸಂಸ್ಕೃತವಾಗಿ.


  • logo