logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ecology
ನಾಮವಾಚಕ
  • ಪರಿಸರವಿಜ್ಞಾನ; ಜೀವಿಗಳಿಗೂ ಅವುಗಳ ಪರಿಸರಕ್ಕೂ ಇರುವ ಪರಸ್ಪರ ಸಂಬಂಧವನ್ನು ಕುರಿತ ಜೀವವಿಜ್ಞಾನ ವಿಭಾಗ.
  • ಪರಿಸರ ತ್ತಾಂತ; (ಯಾವುದೇ ಜೀವಿಗೆ ಸಂಬಂಧಿಸಿದಂತೆ) ಪರಿಸರವಿಜ್ಞಾನ ಷ್ಟಿಯಲ್ಲಿ ಮಹತ್ವ ಉಳ್ಳ ಎಲ್ಲ ವಿಚಾರ: the ecology of the pine tree ಪೈನ್‍ ಮರದ ಪರಿಸರ ತ್ತಾಂತ.
  • ಮಾನವ ಪರಿಸರವಿಜ್ಞಾನ; ಒಂದು ಮಾನವ ಸಮುದಾಯಕ್ಕೂ ಅದರ (ಪರಿಸರಕ್ಕೆ ಇರುವ ಸಂಬಂಧವನ್ನು ಕುರಿತ) ಸಮಾಜಶಾಸ್ತ್ರದ ವಿಭಾಗ.

  • Econ.
    ಸಂಕ್ಷಿಪ್ತ
    Economics.

    econometric
    ಗುಣವಾಚಕ
    ಅರ್ಥಮಾಪನದ; ಅರ್ಥಮಾಪನಕ್ಕೆ ಸಂಬಂಧಿಸಿದ.

    econometrical
    ಗುಣವಾಚಕ
    = econometric.

    econometrician
    ನಾಮವಾಚಕ
    ಅರ್ಥಮಾಪನಶಾಸ್ತ್ರಜ್ಞ.

    econometrics
    ನಾಮವಾಚಕ
    ಅರ್ಥಮಿತಿ; ಅರ್ಥಮಾಪನಶಾಸ್ತ್ರ; ಅರ್ಥಶಾಸ್ತ್ರದ ಸಮಸ್ಯೆಗಳಿಗೆ ಗಣಿತ ಮತ್ತು ಸಂಖ್ಯಾಶಾಸ್ತ್ರಗಳ ತಂತ್ರಗಳನ್ನು ಬಳಸುವ, ಅರ್ಥಶಾಸ್ತ್ರದ ಶಾಖೆ.

    economic
    ಗುಣವಾಚಕ
  • ಅರ್ಥಶಾಸ್ತ್ರದ; ಆರ್ಥಿಕ.
  • ಲಾಭಕ್ಕಾಗಿ ನಡೆಸುವ; ವ್ಯಾಪಾರ ರೀತಿಯ; ವ್ಯಾಪಾರದ ತತ್ತ್ವವನ್ನು ಅವಲಂಬಿಸಿದ.
  • (ಕೊನೆಯ ಪಕ್ಷ) ತನ್ನ ಖರ್ಚನ್ನು ತಾನು ಹುಟ್ಟಿಸಿಕೊಳ್ಳುವ.
  • (ಬಾಡಿಗೆಯ ವಿಷಯದಲ್ಲಿ) (ಕಟ್ಟಡ ಕಟ್ಟಿದವನು, ಅದರ ಮಾಲೀಕ, ಮೊದಲಾದವರಿಗೆ) ಲಾಭ ನೀಡುವ; ಆದಾಯ ಕೊಡುವ.
  • ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದ: economic enterprises ವ್ಯಾಪಾರೀ ಉದ್ಯಮಗಳು; ಕೈಗಾರಿಕಾ ಉದ್ಯಮಗಳು.

  • economic botany
    ನಾಮವಾಚಕ
    ಆರ್ಥಿಕ ಸಸ್ಯವಿಜ್ಞಾನ; ಆರ್ಥಿಕಷ್ಟಿಯಿಂದ ವ್ಯಾಸಂಗ ಮಾಡುವ ಸಸ್ಯಶಾಸ್ತ್ರ.

    economic geography
    ನಾಮವಾಚಕ
    ಆರ್ಥಿಕ ಭೂಗೋಳಶಾಸ್ತ್ರ; ಆರ್ಥಿಕಷ್ಟಿಯಿಂದ ವ್ಯಾಸಂಗ ಮಾಡುವ ಭೂಗೋಳಶಾಸ್ತ್ರ.

    economical
    ಗುಣವಾಚಕ
  • ಮಿತವ್ಯಯದ; ದುಂದುಮಾಡದ; ಹಾಳತವಾದ; ಒಪ್ಪವಾಗಿ ಬಳಸುವ.
  • ಆರ್ಥಿಕ; ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ.


  • logo