ಅಸ್ಫುಟ; ಅಸ್ಪಷ್ಟ: dark saying ಅಸ್ಪಷ್ಟ ಮಾತು; ಸುಲಭವಾಗಿ ತಿಳಿಯದ ಮಾತು.
ಗುಟ್ಟಿನ; ರಹಸ್ಯದ; ಗೋಪ್ಯ; ಗೂಢ: keep thing dark ಗುಟ್ಟಾಗಿಡು.
ಅಪರಿಚಿತ; ಗೊತ್ತಿಲ್ಲದ; ತಿಳಿಯದ; ಅಜ್ಞಾತ.
ಅರಿವಿಲ್ಲದ; ತಿಳಿವಳಿಕೆಯಿಲ್ಲದ; ಅಜ್ಞಾನದಲ್ಲಿರುವ; ಚೆನ್ನಾಗಿ ತಿಳಿವಳಿಕೆ ಪಡೆಯದ: in the darkest ignorance ಅಜ್ಞಾನಾಂಧಕಾರದಲ್ಲಿರುವ; ತಿಳಿವಳಿಕೆಯೇ ಇಲ್ಲದ.
dark
ನಾಮವಾಚಕ
ನುಡಿಗಟ್ಟು
ಕತ್ತಲೆ; ಅಂಧಕಾರ; ತಮಸ್ಸು; ಬೆಳಕಿಲ್ಲದಿರುವಿಕೆ.
ಇರುಳು; ರಾತ್ರಿ; ಕತ್ತಲೆಯಾಗುವಿಕೆ; ಇರುಳುಗವಿಯುವಿಕೆ; ರಾತ್ರಿಯ ಪ್ರಾರಂಭ: at dark ಇರುಳಿನಲ್ಲಿ.after dark ಇರುಳು ಕವಿದ ಮೇಲೆ.
ಗಾಢವರ್ಣ; ಕಡುಛಾಯೆ; ದಟ್ಟ ಬಣ್ಣ: the lights and darks of a picture (ಮುಖ್ಯವಾಗಿ ಕಲೆಯಲ್ಲಿ) ಒಂದು ಚಿತ್ರದ ನೆರಳು ಬೆಳಕು ಛಾಯೆಗಳು.
ಅಜ್ಞಾನ; ಮೌಢ್ಯ; ಅರಿವಿಲ್ಲದಿರುವಿಕೆ; ತಿಳಿವಿಲ್ಲದಿರುವಿಕೆ; ಗೊತ್ತಿಲ್ಲದಿರುವಿಕೆ: I am in the dark about it ಅದರ ವಿಷಯ ನನಗೇನೂ ಗೊತ್ತಿಲ್ಲ.
Dark Age(s)
ನಾಮವಾಚಕ
(ಯೂರೋಪ್ ಚರಿತ್ರೆ) ಅಂಧಕಾರಯುಗ; ಕತ್ತಲೆ ಯುಗ; ಗ್ರೀಸ್ ಮೊದಲಾದ ದೇಶಗಳಲ್ಲಿ ಕಂಚುಯುಗದ ಅಂತ್ಯಕ್ಕೂ ಪ್ರಾಚೀನ ಕಾಲದ ಪ್ರಾರಂಭಕ್ಕೂ ನಡುವಿನ ಅವಧಿ; ಮುಖ್ಯವಾಗಿ ಕ್ರಿಸ್ತಶಕ 395 ರಲ್ಲಿ ರೋಮನ್ ಸಾಮ್ರಾಜ್ಯದ ಪತನದ ನಂತರ 10 ನೆ ಶತಮಾನದ ಅಂತ್ಯದವರೆಗಿನ ಕಾಲ.
Dark Ages
ನಾಮವಾಚಕ
ಕತ್ತಲೆಯುಗ; ಅಂಧಕಾರಯುಗ:
ಯೂರೋಪಿನಲ್ಲಿ ಮುಖ್ಯವಾಗಿ 5 ರಿಂದ 10 ನೆ ಶತಮಾನದವರೆಗಿನ ಮಧ್ಯಯುಗದ ಕಾಲ.
(ರೂಪಕವಾಗಿ) ಅಜ್ಞಾನಯುಗ; ಅವಿದ್ಯಾಯುಗ; ಜ್ಞಾನ ಯಾ ವಿದ್ಯೆ ಅಷ್ಟಾಗಿ ಇಲ್ಲದ ಅವಧಿ.
Dark Continent
ನಾಮವಾಚಕ
ಕಗ್ಗತ್ತಲೆ ಖಂಡ; ಕತ್ತಲೆ ಖಂಡ; ಅಜ್ಞಾತ ಖಂಡ; ಆಹ್ರಿಕ ಖಂಡ; ಆಹ್ರಿಕ ಖಂಡದ ಬಹುಭಾಗ ಇನ್ನೂ ಶೋಧನೆಯಾಗದೆ ಗೂಢವಾಗಿಯೇ ಇದ್ದ ಕಾಲದಲ್ಲಿ ಆ ಖಂಡಕ್ಕಿದ್ದ ಹೆಸರು.
dark current
ನಾಮವಾಚಕ
ಕತ್ತಲ ಪ್ರವಾಹ; ದ್ಯುತಿವಿದ್ಯುತ್ ಪರಿಣಾಮದ ಆಧಾರದ ಮೇಲೆ ಕೆಲಸ ಮಾಡುವ, ಬೆಳಕು ಬೀಳದಿರುವಾಗಲೂ ಹೋಟೋವಿದ್ಯುತ್ಕೋಶದಲ್ಲಿ ಹರಿಯುತ್ತಿರುವ ವಿದ್ಯುತ್ ಪ್ರವಾಹ.