logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bacterium
ನಾಮವಾಚಕ
ಬ್ಯಾಕ್ಟೀರಿಯ; ದಂಡವನ್ನು ಹೋಲುವ, ಅತ್ಯಂತ ಸೂಕ್ಷ್ಮವೂ, ಏಕಾಣುಜೀವಿಯೂ ಆದ, ರೋಗಕಾರಕ ಜೀವಿ.

Bactrian
ಗುಣವಾಚಕ
(ಆಕ್ಸಸ್‍ ನದಿ ಹಾಗೂ ಹಿಂದೂಕುಷ್‍ ಪರ್ವತಗಳ ಮಧ್ಯೆ, ಮಧ್ಯ ಏಷಿಯಾದಲ್ಲಿದ್ದ ಪ್ರಾಚೀನ ದೇಶ) ಬ್ಯಾಕ್ಟ್ರಿಯದ ಯಾ ಅದಕ್ಕೆ ಸಂಬಂಧಿಸಿದ.

Bactrian Camel
ನಾಮವಾಚಕ
ಬ್ಯಾಕ್ಟ್ರಿಯ ಒಂಟೆ; ಬೆನ್ನಿನ ಮೇಲೆ ಎರಡು ಡುಬ್ಬಗಳಿರುವ ಏಷಿಯಾದ ಒಂಟೆ.

baculiform
ಗುಣವಾಚಕ
(ಜೀವವಿಜ್ಞಾನ) ಕಡ್ಡಿಯಂಥ; ದೊಣ್ಣೆಯಂಥ; ಕೋಲಿನಂಥ; ದಂಡದಂಥ.

baculine
ಗುಣವಾಚಕ
  • ದೊಣ್ಣೆಯ; ಕೋಲಿನ; ಬೆತ್ತದ; ಚಡಿಯ.
  • ಚಡಿ ಏಟಿನ; ಬೆತ್ತದ ಬೆದರಿಕೆಯ: baculine argument ದೊಣ್ಣೆ ನ್ಯಾಯ. baculine discipline ಚಡಿಶಿಸ್ತು.

  • bad
    ಗುಣವಾಚಕ ನುಡಿಗಟ್ಟು
  • ಕೆಟ್ಟ; ಒಳ್ಳೆಯದಲ್ಲದ; ಚೆನ್ನಾಗಿಲ್ಲದ: bad air ಕೆಟ್ಟ, ಅಶುದ್ಧ – ಗಾಳಿ; ಕಲ್ಮಶ ತುಂಬಿದ ಗಾಳಿ.
  • ಅಹಿತವಾದ; ಅಸಹ್ಯವಾದ: bad breath ಅಸಹ್ಯ ವಾಸನೆಯ ಉಸಿರು. bad weather ಅಹಿತ ಹವೆ.
  • ಕೆಟ್ಟ; ಹೀನ; ಕ್ಷುದ್ರ; ಕಳಪೆ; ಕೀಳಾದ; ಕೀಳ್ತರದ; ಕೀಳುಗುಣದ; ಕೆಲಸಕ್ಕೆ ಬಾರದ.
  • ನ್ಯೂನತೆಯಿರುವ; ಕುಂದುಕೊರತೆಗಳುಳ್ಳ; ಅಪೂರ್ಣ ಯಾ ಅಸಮಗ್ರ ಯಾ ಕಡಮೆಯಾದ: bad light ಕಡಮೆ ಬೆಳಕು.
  • ತಪ್ಪಾದ; ನಿಜವಲ್ಲದ; ಸರಿಯಲ್ಲದ; ದೋಷಯುಕ್ತ: you have made a bad guess ನಿನ್ನ ಊಹೆ ತಪ್ಪು. a bad title ದೋಷಯುಕ್ತ ಹಕ್ಕು.
  • ನಡೆಯದ; ಹಿಡಿಯದ; ಸಲ್ಲದ; ಸುಳ್ಳಾದ; ಅಸಾಧು: a bad argument ಸಲ್ಲದ ವಾದ. a bad coin ಸಲ್ಲದ, ಖೋಟಾ ನಾಣ್ಯ.
  • ಹಾನಿಕರ(ವಾದ); ಬಾಧಕ; ಪೀಡೆಯುಂಟು ಮಾಡುವ; ಉಪದ್ರವ ಉಂಟುಮಾಡುವ: too much candy is bad for teeth ಹೆಚ್ಚು ಕಲ್ಲುಸಕ್ಕರೆ ಹಲ್ಲಿಗೆ ಹಾನಿಕರ.
  • ಕೆಡುಕಿನ; ಖೂಳ; ದುಷ್ಟ; ಕೆಡುಕುಂಟುಮಾಡುವ.
  • ನೀತಿಗೆಟ್ಟ; ದುರ್ನಡತೆಯ; ದುಷ್ಟ; ಪಾಪದ: a bad woman ನೀತಿಗೆಟ್ಟ ಹೆಂಗಸು. a bad life ಪಾಪದ ಬದುಕು.
  • (ಆಡುಮಾತು) ಮನನೋಯಿಸುವ; ಅಹಿತವಾದ; ಕಸಿವಿಸಿಯುಂಟು ಮಾಡುವ: feel bad about it ಅದರ ಬಗ್ಗೆ ಮನಸ್ಸಿಗೆ ನೋವಾಗುತ್ತದೆ.
  • ನೋವಾದ; ಪೆಟ್ಟುಬಿದ್ದ; ನೋವುಂಟುಮಾಡುವ; ವೇದನೆಯುಂಟುಮಾಡುವ: a bad leg ನೋವಾದ ಕಾಲು.
  • ಅಸ್ವಸ್ಥ; ಅನಾರೋಗ್ಯದ; ಆರೋಗ್ಯ ಸರಿಯಿಲ್ಲದ; ಗಾಯಗೊಂಡಿರುವ ಯಾ ನೋವಾಗಿರುವ: she is bad today ಅವಳು ಈ ದಿನ ಅಸ್ವಸ್ಥಳಾಗಿದ್ದಾಳೆ.
  • (ಆಡುಮಾತು) (ಕೆಟ್ಟ ವಿಷಯಗಳು, ಅನುಭವಗಳ ವಿಷಯದಲ್ಲಿ) ತೀರ; ಬಹಳ; ಕಡು; ದೊಡ್ಡ; ಮಹಾ: a bad headache ಕಡು ತಲೆನೋವು. a bad blunder ದೊಡ್ಡ – ತಪ್ಪು, ಪ್ರಮಾದ.
  • ತುಂಟ; ತಂಟೆಯ; ಅವಿಧೇಯ: don’t be bad at school ಶಾಲೆಯಲ್ಲಿ ತಂಟೆ ಮಾಡಬೇಡ.
  • ಕೆಟ್ಟ; ಹುಳಿತ; ಕೊಳೆತ; ಹಳಸಿದ: bad soup ಹಳಸಿದ ಸಾರು. bad apple ಕೊಳೆತ ಸೇಬು.
  • ಮುಂಗೋಪದ; ಸಿಡಿಗುಟ್ಟುವ; ಹುಬ್ಬುಗಂಟಿಕ್ಕಿದ: the manager was in a bad mood ಮ್ಯಾನೇಜರು ಕೋಪದ ಸ್ಥಿತಿಯಲ್ಲಿದ್ದ.
  • ದುಗುಡಗೂಡಿದ; ತಳಮಳಗೊಂಡ; ವ್ಯಾಕುಲಗೊಂಡ; ಚಿಂತಾಕ್ರಾಂತ: she felt bad because her dog was ill ತನ್ನ ನಾಯಿಗೆ ಕಾಯಿಲೆಯಾದುದರಿಂದ ಅವಳು ವ್ಯಾಕುಲಗೊಂಡಳು.
  • ಕೆಟ್ಟ; ಅಗೌರವದ; ಕಳಂಕಿತ: he got a bad name ಅವನಿಗೆ ಕೆಟ್ಟ ಹೆಸರು ಬಂದಿತು.
  • ಕೆಟ್ಟ; ಅಕುಶಲ; ನಿಪುಣನಲ್ಲದ: bad driver ಅಕುಶಲ ಚಾಲಕ.
  • ಕೆಟ್ಟ; ದುಃಖದ; ಅಪ್ರಿಯ: bad news ಕೆಟ್ಟ ಸುದ್ದಿ; ಅಪ್ರಿಯ ವಾರ್ತೆ.
  • ಹೊಂದದ; ಒಪ್ಪದ; ಸರಿಯಲ್ಲದ; ಅನನುಕೂಲದ.
  • ಅಭಿರುಚಿಯಿಲ್ಲದ; (ಸೂಕ್ಷ್ಮ) ಕಲಾಭಿಜ್ಞತೆಯಿಲ್ಲದ; ಅಸಂಸ್ಕೃತ: the room is decorated in bad taste ಕೋಣೆಯ ಅಲಂಕರಣದಲ್ಲಿ ಕಲಾಭಿಜ್ಞತೆಯಿಲ್ಲ.
  • ಹೊಲಸಾದ; ಅಶ್ಲೀಲ; ಅಸಭ್ಯ: bad language ಹೊಲಸು ಭಾಷೆ.
  • ಅಂದವಿಲ್ಲದ; ಕಣ್ಸೆಳೆಯದ; ಆಕರ್ಷಿಸದ: bad figure ಅಂದವಿಲ್ಲದ ಮೈಕಟ್ಟು.
  • ನಷ್ಟದ; ಲಾಭವಿಲ್ಲದ; ಪ್ರಯೋಜನವಿಲ್ಲದ; ನಿಷ್ಪ್ರಯೋಜಕ: bad land ಲಾಭವಿಲ್ಲದ, ಹುಟ್ಟುವಳಿಯಿಲ್ಲದ – ಭೂಮಿ, ಜಈನು.
  • ವ್ಯರ್ಥವಾಗಿ ಖರ್ಚುಮಾಡಿದ; ದುರ್ವಿನಿಯೋಗ, ಹಾಳು – ಮಾಡಿದ.
  • (ಅಮೆರಿಕನ್‍ ಪ್ರಯೋಗ, ಆಡುಮಾತು) ದುರದೃಷ್ಟದ; ಅನ್ಯಾಯದ: it’s too bad she is so ill ಅವಳು ಅಷ್ಟು ಕಾಯಿಲೆ ಬಿದ್ದಿರುವುದು ದುರದೃಷ್ಟಕರ.

  • bad
    ಕ್ರಿಯಾವಿಶೇಷಣ
    (ಅಮೆರಿಕನ್‍ ಪ್ರಯೋಗ, ಆಡುಮಾತು) = badly.

    bad
    ನಾಮವಾಚಕ ಪದಗುಚ್ಛ ನುಡಿಗಟ್ಟು
    from bad to worse ಕೆಟ್ಟದ್ದರಿಂದ ಇನ್ನೂ ಕೆಟ್ಟದ್ದಕ್ಕೆ. in bad (ಆಡುಮಾತು) (ಯಾರೊಂದಿಗೋ) ಅಪ್ರೀತಿಗೆ ಒಳಗಾಗಿ; ಅನಾದರಕ್ಕೆ ಸಿಕ್ಕಿ.
  • ಕೆಟ್ಟ, ಹೀನ – ಸ್ಥಿತಿ; ದುಃಸ್ಥಿತಿ; ದುರ್ದಶೆ; ದುರದೃಷ್ಟ: take the good with the bad ಒಳಿತನ್ನೂ ಕೆಡುಕನ್ನೂ ಸಮಚಿತ್ತದಿಂದ ತೆಗೆದುಕೊ.
  • ಖರ್ಚು; ವ್ಯಯ; ನಷ್ಟ: a thousand rupees to the bad ಲೆಕ್ಕದಲ್ಲಿ ಸಾವಿರ ರೂಪಾಯಿ ನಷ್ಟ, ಲುಕ್ಸಾನು.
  • ಹಾನಿ; ವಿನಾಶ: go to the bad ಹಾಳಾಗು; ನಾಶವಾಗು.

  • bad blood
    ನಾಮವಾಚಕ
    ಮನಸ್ತಾಪ; ವೈಮನಸ್ಯ; ವೈಷಮ್ಯ.

    bad books
    ನಾಮವಾಚಕ
    (ಬಹುವಚನ) ಅಪ್ರೀತಿ; ಅವಿಶ್ವಾಸ; ಅನಾದರಣೆ: he got into the president’s bad ಅವನು ಅಧ್ಯಕ್ಷರ ಅಪ್ರೀತಿಗೆ, ಅನಾದರಣೆಗೆ – ಗುರಿಯಾದ, ಒಳಗಾದ.


    logo