logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Abraham's bosom
ನಾಮವಾಚಕ
(ಧರ್ಮಿಷ್ಠರಿಗೆ ಫಲವಾಗಿ ದೊರೆಯುವುದೆಂದು ಭಾವಿಸಿದ) ಸ್ವರ್ಗ; ದೇವಲೋಕ.

Abraham-man
ನಾಮವಾಚಕ ಪದಗುಚ್ಛ
(ಬಹುವಚನ Abraham-men).(ಚರಿತ್ರೆ) 16ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ, ಹುಚ್ಚನಂತೆ ನಟಿಸುತ್ತ ಅಲೆಯುತ್ತಿದ್ದ ಭಿಕ್ಷುಕ, ತಿರುಕ.to sham Abraham ರೋಗದ ಸೋಗುಹಾಕು; ಹುಚ್ಚನಂತೆ ನಟಿಸು.

Abram-man
ನಾಮವಾಚಕ
= Abraham-man.

abranchial
ಗುಣವಾಚಕ
(ಪ್ರಾಣಿವಿಜ್ಞಾನ) ಕಿವಿರಿಲ್ಲದ; ಟೊಳ್ಳೆಯಿಲ್ಲದ.

abranchiate
ಗುಣವಾಚಕ
= abranchial.

abrase
ಸಕರ್ಮಕ ಕ್ರಿಯಾಪದ
= abrade.

abrasion
ನಾಮವಾಚಕ
  • (ಚರ್ಮ, ಬಂಡೆ, ಮೊದಲಾದವುಗಳ) ಸವೆತ; ತೇದುಹೋಗುವಿಕೆ; ಉಜ್ಜಿಹೋಗುವಿಕೆ.
  • ಉಜ್ಜುಗಾಯ; ತರಚುಗಾಯ: a bedsore is a mere abrasion ಹಾಸಿಗೆ ಹುಣ್ಣು ಬರಿ ಉಜ್ಜುಗಾಯ.

  • abrasive
    ನಾಮವಾಚಕ
    ಅಪಘರ್ಷಕ; ಉಜ್ಜಿ ಸವೆಸಬಲ್ಲ, ಅರೆದುಹಾಕಬಲ್ಲ ಸಾಣೆಕಲ್ಲು, ರುಬ್ಬುಗುಂಡು, ಮೊದಲಾದ ವಸ್ತು.

    abrasive
    ಗುಣವಾಚಕ
  • ಅಪಘರ್ಷಕ; (ಚರ್ಮ ಮೊದಲಾದವನ್ನು) ತರಚುವ; ಉಜ್ಜಿಹಾಕುವ.
  • (ರೂಪಕವಾಗಿ) ವ್ಯಕ್ತಿಯ ಮನಸ್ಸನ್ನು ನೋಯಿಸುವಂಥ.

  • abreact
    ಸಕರ್ಮಕ ಕ್ರಿಯಾಪದ
    (ಮನಶ್ಶಾಸ್ತ್ರ) ಭಾವ ವಿರೇಚನ ಮಾಡು; ಸುಪ್ತ ಯಾ ಅದುಮಿಟ್ಟ ಭಾವ ಯಾ ಭಾವನೆಯನ್ನು ಪ್ರಕಟಗೊಳಿಸುವ ಮೂಲಕ ಮಾನಸಿಕ ದುಗುಡವನ್ನು ಪರಿಹರಿಸು.


    logo