logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unanimous
ಗುಣವಾಚಕ
  • ಎಲ್ಲರೂ ಒಂದೇ ಮನಸ್ಸುಳ್ಳ; ಏಕಾಭಿಪ್ರಾಯದ: the committee was unanimous ಸಭೆ ಏಕಾಭಿಪ್ರಾಯ ಹೊಂದಿತ್ತು.
  • (ಅಭಿಪ್ರಾಯ, ಮತ, ಮೊದಲಾದವುಗಳ ವಿಷಯದಲ್ಲಿ) ಸರ್ವಾನುಮತದ; ಒಮ್ಮತದ: he was elected by a unanimous vote ಅವನನ್ನು ಸರ್ವಾನುಮತದಿಂದ ಆರಿಸಲಾಯಿತು.

  • unanimously
    ಕ್ರಿಯಾವಿಶೇಷಣ
  • ಸರ್ವಾನುಮತದಿಂದ; ಒಮ್ಮತವಾಗಿ.
  • ಏಕಾಭಿಪ್ರಾಯದಿಂದ.

  • unanimousness
    ನಾಮವಾಚಕ
  • ಸರ್ವಾನುಮತವಿರುವಿಕೆ; ಒಮ್ಮತಸ್ಥಿತಿ.
  • ಏಕಾಭಿಪ್ರಾಯವಿರುವಿಕೆ.

  • unannounced
    ಗುಣವಾಚಕ
  • ಪ್ರಕಟಿಸದ; ಘೋಷಿಸದ; ಪ್ರಸಿದ್ಧಗೊಳಿಸದ.
  • (ಒಬ್ಬನ ಆಗಮನ ಮೊದಲಾದವನ್ನು) ಶ್ರುತಪಡಿಸದ; ತಿಳಿಸದ: he walked into the room unannounced ಅವನು ತಿಳಿಸದೆ ಯಾ ಹೇಳದೆ ಕೇಳದೆ ರೂಮಿನೊಳಕ್ಕೆ ನಡೆದ.

  • unanswerable
    ಗುಣವಾಚಕ
  • ಉತ್ತರ, ಸಮಾಧಾನ – ಕೊಡಲಾಗದ: an unanswerable question ಉತ್ತರವಿಲ್ಲದ, ಉತ್ತರ ಕೊಡಲಾಗದ – ಪ್ರಶ್ನೆ.
  • ಪ್ರತಿ ಹೇಳಲಾಗದ; ಅಪ್ರತ್ಯಾಖ್ಯೇಯ; ಖಂಡಿಸಲು ಸಾಧ್ಯವಿಲ್ಲದ: has an unanswerable case ಖಂಡಿಸಲಾಗದ ಪರಿಸ್ಥಿತಿ, ಪ್ರಸಂಗ.

  • unanswerably
    ಕ್ರಿಯಾವಿಶೇಷಣ
  • ಉತ್ತರ ಕೊಡಲಾಗದ ರೀತಿಯಲ್ಲಿ.
  • ಪ್ರತಿ ಹೇಳಲಾಗ ದಂತೆ; ಅಪ್ರತ್ಯಾಖ್ಯೇಯವಾಗಿ.

  • unanswered
    ಗುಣವಾಚಕ
  • ಉತ್ತರ, ಜವಾಬಉ – ಕೊಟ್ಟಿಲ್ಲದ: unanswered letters ಜವಾಬಉ ಕೊಡದೆ ಹೋದ ಕಾಗದಗಳು.
  • ಅಪ್ರತಿದತ್ತ; ಹಿಂತಿರುಗಿಸದ; ಪ್ರತಿಯಾಗಿ ತೋರಿಸದ: unanswered love ಪ್ರತಿಕ್ರಿಯೆಯಿಲ್ಲದ ಪ್ರೇಮ.

  • unanticipated
    ಗುಣವಾಚಕ
    ನಿರೀಕ್ಷಿಸದ; ಅನಿರೀಕ್ಷಿತ.

    unapostolic
    ಗುಣವಾಚಕ
  • (ಕ್ರೈಸ್ತಧರ್ಮ) ಧರ್ಮಪ್ರವರ್ತಕ ಪದ್ಧತಿಗೆ ವಿರುದ್ಧವಾದ.
  • (ಕ್ರೈಸ್ತಧರ್ಮ) ಧರ್ಮಪ್ರಾಮಾಣ್ಯವಿಲ್ಲದ; ಸಂಪ್ರದಾಯ ಬಾಹಿರವಾದ; ಕ್ರೈಸ್ತಧರ್ಮ ಪ್ರವರ್ತನಾಚಾರ್ಯರ ಅಂಗೀಕಾರವಿಲ್ಲದ.

  • unapparent
    ಗುಣವಾಚಕ
  • ಕಣ್ಣಿಗೆ ಕಾಣುವಂತಿರದ; ಪ್ರತ್ಯಕ್ಷವಲ್ಲದ; ಅಗೋಚರ.
  • ಅಸ್ಪಷ್ಟ; ಸ್ಪಷ್ಟವಿಲ್ಲದ.


  • logo