logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

talented
ಗುಣವಾಚಕ
ಸಾಮರ್ಥ್ಯವಂತ; ಪ್ರತಿಭಾವಂತ; ಅತಿಶಯ ಮೇಧಾಶಕ್ತಿಯುಳ್ಳ.

talentless
ಗುಣವಾಚಕ
ಸಾಮರ್ಥ್ಯಇಲ್ಲದ; ಪ್ರತಿಭಾರಹಿತ; ಮೇಧಾಶಕ್ತಿ ಇಲ್ಲದ.

tales
ನಾಮವಾಚಕ ಪದಗುಚ್ಛ
pray a tales ಪೂರಕ ನ್ಯಾಯದರ್ಶಿಗಳು ಬೇಕೆಂದು ಕೇಳು, ಪ್ರಾರ್ಥಿಸು.
  • ನ್ಯಾಯದರ್ಶಿ ಪೂರಕ ಆಜ್ಞೆ; ನ್ಯಾಯಾಲಯದಲ್ಲಿ ಅಗತ್ಯವಾದ ನ್ಯಾಯದರ್ಶಿಗಳ ಸಂಖ್ಯೆ ಕಡಮೆಯಾದಾಗ, ಭರ್ತಿಮಾಡಲು, ಬೇರೆಯವರನ್ನು ಕರೆಸಲು ಹೊರಡಿಸುವ ಆಜ್ಞೆ.
  • ಹಾಗೆ ಆಜ್ಞಪ್ತರಾದವರ ಪಟ್ಟಿ; ಪೂರಕ ನ್ಯಾಯದರ್ಶಿಗಳು.

  • talesman
    ನಾಮವಾಚಕ
    (ನ್ಯಾಯಶಾಸ್ತ್ರ) ಪೂರಕ ನ್ಯಾಯದರ್ಶಿ.

    taleteller
    ನಾಮವಾಚಕ
  • ಚಾಡಿಹೇಳುವವನು; ಚಾಡಿಕೋರ.
  • ಕಥೆ ಹೇಳುವವನು; ಕಥೆಗಾರ; ಕಥಕ.

  • tali
    ನಾಮವಾಚಕ
    talus ಪದದ ಬಹುವಚನ.

    talion
    ನಾಮವಾಚಕ
    = lex talionis.

    talipes
    ನಾಮವಾಚಕ
    (ವೈದ್ಯಶಾಸ್ತ್ರ) ವಕ್ರಪಾದಿ; (ಹುಟ್ಟುವಾಗಲೇ) ಸೊಟ್ಟಡಿಯುಳ್ಳ ಪ್ರಾಣಿ ಯಾ ಮನುಷ್ಯ.

    talipot
    ನಾಮವಾಚಕ
    (ದಕ್ಷಿಣ ಇಂಡಿಯಾದ) ತಾಳೆಮರ; ಓಲೆಮರ.

    talisman
    ನಾಮವಾಚಕ
  • (ಧರಿಸಿದವನಿಗೆ ಕೇಡು ಪರಿಹಾರವಾಗುತ್ತದೆ ಮತ್ತು ಒಳ್ಳೆಯದಾಗುತ್ತದೆಂದು ನಂಬಿದ) ಯಂತ್ರ; ತಾಯಿತಿ; ರಕ್ಷೆ.
  • ಅದ್ಭುತ ಸಾಧಕ ವಸ್ತು; (ಅದ್ಭುತ ಶಕ್ತಿ ಇರುವುದೆನ್ನಲಾದ) ಯಂತ್ರದ ಆಕೃತಿ ಯಾ ಅಕ್ಷರ ಕೊರೆದಿರುವ ಕಲ್ಲು, ಲೋಹ, ಉಂಗುರ, ಮೊದಲಾದವು.


  • logo