logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

magnetomotive
ಗುಣವಾಚಕ
(ಬಲಕ್ಕೆ ಸಂಬಂಧಿಸಿದಂತೆ) ಕಾಂತಬಲ ಮೊತ್ತದ; ವಿದ್ಯುನ್ಮಂಡಲದ ಕಾಂತೀಯ ಬಲಗಳ ಮೊತ್ತದ.

magneton
ನಾಮವಾಚಕ
ಮ್ಯಾಗ್ನಿಟಾನ್‍; ಬೈಜಿಕ ಭೌತವಿಜ್ಞಾನದಲ್ಲಿ ಬಳಸುವ ಕಾಂತೀಯ ಮಹತ್ವದ ಮಾನ.

magnetosphere
ನಾಮವಾಚಕ
ಕಾಂತಗೋಳ; ಕಾಂತವಲಯ; ಗ್ರಹ, ತಾರೆ, ಇನ್ನಿತರ ಖಗೋಳ ಕಾಯಗಳ ಸುತ್ತ ಅವುಗಳ ಕಾಂತಕ್ಷೇತ್ರದ ಪರಿಣಾಮ ಕಂಡುಬರುವ ಪ್ರದೇಶ.

magnetron
ನಾಮವಾಚಕ
ಮ್ಯಾಗ್ನಿಟ್ರಾನ್‍; ಉಚ್ಚ ಆವರ್ತನೆಯ ಆಂದೋಲನಗಳನ್ನು ಉತ್ಪತ್ತಿ ಮಾಡುವುದಕ್ಕೆ ಯಾ ವರ್ಧಿಸುವುದಕ್ಕೆ ಬಳಸುವ ಉಷ್ಣ ಅಯಾನಿಕ ನಳಿಕೆ.

magnifiable
ಗುಣವಾಚಕ
  • ವರ್ಧನೀಯ; ವರ್ಧಿಸಹುದಾದ; (ಮಸೂರ ಮೊದಲಾದವುಗಳ ಸಹಾಯದಿಂದ ಯಾವುದೇ ವಸ್ತುವನ್ನು) ದೊಡ್ಡದಾಗಿ ಕಾಣುವಂತೆ ಮಾಡಬಹುದಾದ.
  • ಉತ್ಪ್ರೇಕ್ಷಿಸಹುದಾದ; ದೊಡ್ಡದು ಮಾಡಬಹುದಾದ.

  • magnificat
    ನಾಮವಾಚಕ
  • (ಬೈಬ್‍ಲ್‍) (Magnificat) ವರ್ಜಿನ್‍ಮೇರಿ(ಕನ್ಯೆ)ಯನ್ನು ಕುರಿತ ಸ್ತೋತ್ರಗೀತ (ಲೂಕನ ಸುವಾರ್ತೆ 1:46-55).
  • ಸ್ತೋತ್ರ; ಸ್ತುತಿಮಾಡುವ ಗೀತೆ.

  • magnification
    ನಾಮವಾಚಕ
  • ವರ್ಧನ:
    1. ದೊಡ್ಡದು ಮಾಡುವುದು; ದೊಡ್ಡದಾಗಿ ಕಾಣುವಂತೆ ಮಾಡುವುದು, ಹಾಗೆ ಮಾಡುವ ಪ್ರಕ್ರಿಯೆ ಯಾ ಹಾಗೆ ಮಾಡಿದ ಸ್ಥಿತಿ.
    2. ದೊಡ್ಡದಾಗಿ ಕಾಣುವಂತೆ ಮಾಡಿದ್ದರ ಪರಿಣಾಮವಾಗಿ ವಸ್ತು ಕಾಣಿಸುವ ಗಾತ್ರಕ್ಕೂ ಅದರ ನಿಜಗಾತ್ರಕ್ಕೂ ಇರುವ ಪ್ರಮಾಣ.
  • ಮಸೂರದ ಮೂಲಕ ತೋರಿದ ವಸ್ತುವೊಂದರ ವರ್ಧಿತರೂಪ, ದೊಡ್ಡದಾಗಿ ಕಾಣಿಸುವ ಗಾತ್ರ.
  • ಶ್ಲಾಘನೆ; ಪ್ರಶಂಸೆ.
  • ಉತ್ಪ್ರೇಕ್ಷೆ; ವೈಭವೀಕರಣ.

  • magnificence
    ನಾಮವಾಚಕ
    ಭವ್ಯತೆ; ಉಜ್ವಲತೆ; ಶೋಭಾಯಮಾನತೆ; ವೈಭವಪೂರ್ಣತೆ; ಘನತೆ; ಉದಾತ್ತತೆ.

    magnificent
    ಗುಣವಾಚಕ
  • ಭವ್ಯವಾದ; ಉಜ್ವಲವಾದ; ಶೋಭಾಯಮಾನವಾದ; ಮಹಾ ವೈಭವದಿಂದ ಕೂಡಿದ; ಮಹತ್ತಾದ; ಘನವಾದ; ಅತ್ಯಂತ ಗಂಭೀರವಾದ.
  • ಭರ್ಜರಿಯಾದ; ಅದ್ದೂರಿಯಾದ; ವಿಜೃಂಭಣೆಯಿಂದ ಕೂಡಿದ; ಅದ್ದೂರಿಯಾಗಿ ರಚಿಸಿದ ಯಾ ಅಂಕರಿಸಿದ.
  • ಅತ್ಯುದಾರವಾದ; ಅತ್ಯಂತ ಔದಾರ್ಯದಿಂದ ಕೂಡಿದ; ಕೊಡುಗೈತನದ; ಮುಕ್ತಹಸ್ತದಿಂದ ನೀಡಿದ: a magnificent inheritance ಅತ್ಯಂತ ಉದಾರವಾದ ಉತ್ತರಾಧಿಕಾರ, ಪಿತ್ರಾರ್ಜಿತ.
  • (ಆಡುಮಾತು) ಸೊಗಸಾದ; ಅತ್ಯುತ್ಕೃಷ್ಟವಾದ.

  • magnificently
    ಕ್ರಿಯಾವಿಶೇಷಣ
  • ಭವ್ಯವಾಗಿ; ಉಜ್ವಲವಾಗಿ; ಶೋಭಾಯಮಾನವಾಗಿ; ಮಹಾವೈಭವದಿಂದ ಕೂಡಿ; ಘನಗಂಭೀರವಾಗಿ.
  • ಅದ್ದೂರಿಯಾಗಿ; ಭರ್ಜರಿಯಾಗಿ; ವಿಜೃಂಭಣೆಯಿಂದ.
  • ಅತ್ಯಂತ ಉದಾರವಾಗಿ.
  • ಸೊಗಸಾದ ರೀತಿಯಲ್ಲಿ; ಅತ್ಯುತ್ಕೃಷ್ಟವಾಗಿ.


  • logo