logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laevo-
ಸಮಾಸ ಪೂರ್ವಪದ
(ವೈಜ್ಞಾನಿಕ ಶಬ್ದಗಳಲ್ಲಿ) ಎಡ-, ವಾಮ-, ಎಡಗಡೆಗೆ ಯಾ ಎಡಗಡೆಯ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.

laevorotatory
ಗುಣವಾಚಕ
(ರಸಾಯನವಿಜ್ಞಾನ) ವಾಮಭ್ರಾಮಕ; ಎಡಮುರಿ; (ಧ್ರುವೀಕೃತ ಬೆಳಕಿನ ಧ್ರುವೀಕರಣ ಸಮತಲವನ್ನು ತಿರುಗಿಸಬಲ್ಲ ಸಂಯುಕ್ತಗಳ ವಿಷಯದಲ್ಲಿ) ಎಡಕ್ಕೆ ತಿರುಗಿಸುವ.

laevulose
ನಾಮವಾಚಕ
= fructose.

lag
ಅಕರ್ಮಕ ಕ್ರಿಯಾಪದ
  • ಬಹು ನಿಧಾನವಾಗಿ ಹೋಗು; ಜೊತೆಗೆ ಹೆಜ್ಜೆ ಹಾಕದಿರು; ಹಿಂದೆ ಬೀಳು.
  • (ಅಮೆರಿಕನ್‍ ಪ್ರಯೋಗ) (ಬಿಲಿಯರ್ಡ್ಸ್‍) ಯಾವ ಆಟಗಾರ ಆಟ ಆರಂಭಿಸಬೇಕೆಂಬುದನ್ನು ತೀರ್ಮಾನಿಸಲು, ಪ್ರಾರಂಭಿಕ ಹೊಡೆತಗಳನ್ನು ಹೊಡೆ.

  • lag
    ನಾಮವಾಚಕ ಪದಗುಚ್ಛ
    lag of tide ಭರತದ ವಿಳಂಬ; ವೀಚೀ ವಿಳಂಬ; ನಿತ್ಯ ಕಾಣಿಸಿಕೊಳ್ಳುವ ಭರತದ ಸರಾಸರಿ ಕಾಲಕ್ಕಿಂತ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಲ್ಲಿ ಅದು ಎಷ್ಟು ತಡವಾಗುವುದೋ ಆ ಅವಧಿ.
  • ತಡ; ವಿಳಂಬ.
  • ನಿಧಾನಗತಿ; ಮಂದಗತಿ.
  • (ಭೌತವಿಜ್ಞಾನ)
    1. ವಿಳಂಬ; ಚಲನೆಯಲ್ಲಾಗಲಿ, ಘಟನೆ ನಡೆಯುವುದರಲ್ಲಿ ಆಗಲಿ ಆಗುವ ನಿಧಾನ, ವಿಳಂಬ.
    2. ವಿಳಂಬ(ದ ಪ್ರಮಾಣ).

  • lag
    ಸಕರ್ಮಕ ಕ್ರಿಯಾಪದ
    ಉಷ್ಣರೋಧಕವನ್ನು ಹೊದಿಸು.

    lag
    ನಾಮವಾಚಕ
    (ಕುದಿಪಾತ್ರೆ ಮೊದಲಾದವಕ್ಕೆ ಹೊದಿಸಿರುವ) ಉಷ್ಣರೋಧಕ ಹೊದಿಕೆ ಯಾ ಅದರ ಒಂದು ತುಂಡು.

    lag
    ನಾಮವಾಚಕ
    (ಅಶಿಷ್ಟ) ಕೈದಿ; ಬಂದಿ; ಸೆರೆಯಾಳು: old lag ಹಳೆಯ ಕೈದಿ.

    lag
    ಸಕರ್ಮಕ ಕ್ರಿಯಾಪದ
    (ಅಶಿಷ್ಟ)
  • ಜೈಲಿಗೆ ಕಳುಹಿಸು.
  • ದಸ್ತಗಿರಿ ಮಾಡು; ಕೈದು ಮಾಡು; ಬಂಧಿಸು.

  • lagan
    ನಾಮವಾಚಕ
    ಮುಂದೆ ಮತ್ತೆ ಪಡೆಯಲು ಅನುಕೂಲವಾಗುವಂತೆ ತೇಲುಬುರುಡೆ ಮೊದಲಾದವನ್ನು ಕಟ್ಟಿರುವ, ಸಮುದ್ರದ ತಳದಲ್ಲಿ ಬಿದ್ದಿರುವ ಸರಕು ಯಾ ಮುಳುಗಿದ ಹಡಗಿನ ಭಗ್ನಾವಶೇಷಗಳು.


    logo