logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

igloo
ನಾಮವಾಚಕ
ಎಸ್ಕಿಮೊ ಜೋಪಡಿ; ಮಂಜು ಗುಡಿಸಲು; ಮುಖ್ಯವಾಗಿ ಹಿಮದಿಂದ ಕಟ್ಟಿದ, ಎಸ್ಕಿಮೋ ಜನರ, ಗುಮ್ಮಟಾಕಾರದ ಗುಡಿಸಿಲು.

igneous
ಗುಣವಾಚಕ
  • ಬೆಂಕಿಯ; ಅಗ್ನಿಯ; ಬೆಂಕಿಯಿಂದ ಕೂಡಿದ; ಅಗ್ನಿಸ್ವಭಾವದ; ಬೆಂಕಿಯುಳ್ಳ; ಬೆಂಕಿಯಂಥ.
  • (ಭೂವಿಜ್ಞಾನ) ಅಗ್ನಿಜನ್ಯ; ಭೂಗರ್ಭದ ಅಗ್ನಿಯಿಂದ ಯಾ ಜ್ವಾಲಾಮುಖಿಯಿಂದ ಆದ.

  • igneous rock
    ನಾಮವಾಚಕ
    ಅಗ್ನಿಶಿಲೆ; ಭೂಗರ್ಭದ ತಾಪದಿಂದ ಉಂಟಾದ ಶಿಲೆ.

    ignis fatuus
    ನಾಮವಾಚಕ
  • ಕೊಳ್ಳಿದೆವ್ವ; ಕೊಳ್ಳಿಪಿಶಾಚಿ; ಜವುಗು ನೆಲದಲ್ಲಿ ಕೊಳೆಯುತ್ತಿರುವ ಜೈವಿಕ ಪದಾರ್ಥದಿಂದ ಹೊರಟ ಅನಿಲ ತಾನಾಗಿ ಹೊತ್ತಿಕೊಳ್ಳುವುದರಿಂದ ಒಮ್ಮೊಮ್ಮೆ ಕಾಣಿಸಿಕೊಳ್ಳುವ ಉರಿ, ಜ್ವಾಲೆ.
  • ಭ್ರಾಂತಿ; (ಲಾಭದ) ಭ್ರಮೆ; ಹುಸಿ ಆಸೆ: the ignis fatuus of a world without wars ಯುದ್ಧಗಳಿಲ್ಲದ ಪ್ರಪಂಚದ ಹುಸಿ ಆಸೆ.

  • ignitable
    ಗುಣವಾಚಕ
  • ತೀವ್ರವಾಗಿ ಬಿಸಿಮಾಡಬಲ್ಲ; ಹೆಚ್ಚು ಕಾವೇರಿಸಬಲ್ಲ.
  • (ರಸಾಯನವಿಜ್ಞಾನ) ದಹ್ಯ; ದಾಹ್ಯ; ದಹಿಸಲಾಗುವ.
  • ಬೆಂಕಿ ಹಚ್ಚಬಲ್ಲ; ಉರಿ ಹತ್ತಿಸಬಲ್ಲ.

  • ignite
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಬೆಂಕಿಯ ವಿಷಯದಲ್ಲಿ) ಹೊತ್ತು; ಹೊತ್ತಿಕೊ: slowly the fire ignited ನಿಧಾನವಾಗಿ ಬೆಂಕಿ ಹೊತ್ತಿಕೊಂಡಿತು.
  • ಬಹಳ ಕಾಯಿಸು; ಹೆಚ್ಚು ಕಾವೇರಿಸು; ತೀವ್ರವಾಗಿ ಬಿಸಿಮಾಡು.
  • (ರಸಾಯನವಿಜ್ಞಾನ) ದಹಿಸು; ರಾಸಾಯನಿಕ ಬದಲಾವಣೆಯಾಗುವಷ್ಟು ತಾಪಕ್ಕೆ ಕಾಯಿಸು.
  • ಕಿಚ್ಚಿಡು; ಕಿಚ್ಚೊಟ್ಟು; ಬೆಂಕಿಹಚ್ಚು; ಉರಿ ಹೊತ್ತಿಸು (ರೂಪಕವಾಗಿ ಸಹ).

  • igniter
    ನಾಮವಾಚಕ
  • ಜ್ವಾಲಕ; ಬೆಂಕಿ ಹೊತ್ತಿಸುವ ವ್ಯಕ್ತಿ ಯಾ ವಸ್ತು.
  • ದಾಹಕ; ಎಂಜಿನಿನಲ್ಲಿ ಇಂಧನ ಮಿಶ್ರಣವನ್ನು ದಹಿಸಲು ಬಳಸುವ ಸಾಧನ.
  • ವಿದ್ಯುಚ್ಚಾಪವನ್ನುಂಟು ಮಾಡಲು ಬಳಸುವ ಸಾಧನ.

  • ignition
    ನಾಮವಾಚಕ
  • ತಾಪನ; ತೀವ್ರವಾಗಿ ಬಿಸಿಮಾಡುವಿಕೆ, ಕಾವೇರಿಸುವಿಕೆ.
  • ಜ್ವಲನ; ಬೆಂಕಿ ಹಚ್ಚುವಿಕೆ; ಉರಿ ಹೊತ್ತಿಸುವಿಕೆ.
  • (ರಸಾಯನವಿಜ್ಞಾನ) ದಹನ; ಅಂತರ್ದಹನ ಯಂತ್ರದಲ್ಲಿ ಇಂಧನ ಮತ್ತು ವಾಯುಗಳ ಮಿಶ್ರಣವು ದಹಿಸುವುದು ಯಾ ಅದಕ್ಕೆ ಬೇಕಾಗುವ ಯಾಂತ್ರಿಕ ವ್ಯವಸ್ಥೆ.

  • ignition key
    ನಾಮವಾಚಕ
    ದಹನ ಕೀಲಿಕೈ; ಮೋಟಾರು ವಾಹನವನ್ನು ಸ್ಟಾರ್ಟ್‍ ಮಾಡಲು, ಚಾಲನೆ ಮಾಡಲು ಬಳಸುವ ಕೀಲಿಕೈ.

    ignitron
    ನಾಮವಾಚಕ
    (ವಿದ್ಯುದ್ವಿಜ್ಞಾನ) ಇಗ್ನಿಟ್ರಾನ್‍; ಅಧಿಕ ಪ್ರಮಾಣದ ವಿದ್ಯುತ್ಪ್ರವಾಹಗಳನ್ನು ವಹಿಸಬಲ್ಲ ಪಾದರಸ – ಚಾಪದಿಷ್ಟಿಕಾರಕ (rectifier).


    logo