logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

eclipse
ನಾಮವಾಚಕ ಪದಗುಚ್ಛ
in eclipse (ಪಕ್ಷಿಗಳ ವಿಷಯದಲ್ಲಿ) ಕಳೆಗುಂದಿ; ನಿಸ್ತೇಜವಾಗಿ; ಹೆಣ್ಣನ್ನು ಆಕರ್ಷಿಸುವ ಅಂದವಾದ ಗರಿಗಳನ್ನು ಕಳೆದುಕೊಂಡು.
  • (ಖಗೋಳ ವಿಜ್ಞಾನ) ಗ್ರಹಣ; ಸಾಮಾನ್ಯವಾಗಿ ಪ್ರಕಾಶವುಳ್ಳ ಯಾವುದೇ ಖಗೋಳಕಾಯವು ಭೂಮಿಯ ನೆರಳಿನಲ್ಲಿ ಬರುವುದರಿಂದಾಗಲಿ ಇನ್ನೊಂದು ಖಗೋಳಕಾಯದ ಹಿಂಬದಿಗೆ ಹೋಗುವುದರಿಂದಾಗಲಿ ನಮಗೆ ಕಾಣದಂತಾಗುವುದು, ಯಾ ಹಾಗೆ ಕಾಣದಂತಾದ ಕಾಲಾವಧಿ.
  • (ರೂಪಕವಾಗಿ) ಗ್ರಹಣ; ಯಾವುದರದೇ ತಾತ್ಕಾಲಿಕ ಅದರ್ಶನ, ಅಭಾವ, ಅವನತಿ: in the seventeenth century, science emerged from a long eclipse ವಿಜ್ಞಾನವು ಬಹುಕಾಲ ಹಿಡಿದಿದ್ದ ಗ್ರಹಣದಿಂದ ಹದಿನೇಳನೆಯ ಶತಮಾನದಲ್ಲಿ ಬಿಡುಗಡೆಗೊಂಡಿತು.
  • ಕಾಂತಿಗುಂದು; ಪ್ರಕಾಶಾಭಾವ; ಪ್ರಕಾಶಶೂನ್ಯತೆ; ಬೆಳಕಿಲ್ಲದಿರುವಿಕೆ; ಕಾಂತಿಹೀನತೆ.
  • ಕಳೆಗುಂದು; ತೇಜೋಹಾನಿ; ನಿಸ್ತೇಜ; ಮ್ಲಾನತೆ.
  • ಬೆಳಕು, ಪ್ರಕಾಶ, ದೀಪ — ಮರೆ; (ಸಮುದ್ರದಲ್ಲಿಯ) ದೀಪಹದ ಬೆಳಕನ್ನು ಒಂದು ಕ್ಲುಪ್ತ ಕಾಲಕ್ರಮದಲ್ಲಿ ಪದೇಪದೇ ಮರೆಮಾಡುತ್ತ ಹೋಗುವುದು.

  • eclipse
    ಸಕರ್ಮಕ ಕ್ರಿಯಾಪದ
  • (ಆಕಾಶಕಾಯದ ವಿಷಯದಲ್ಲಿ) ಗ್ರಹಣ ಹಿಡಿಸು; ಗ್ರಹಣ ಉಂಟಾಗುವಂತೆ ಮಾಡು: the moon eclipses the sun ಚಂದ್ರ ಸೂರ್ಯನಿಗೆ ಗ್ರಹಣ ಹಿಡಿಸುತ್ತದೆ.
  • (ಮುಖ್ಯವಾಗಿ ದೀಪಹದ ಬೆಳಕನ್ನು) ಮರೆಮಾಡು; ಅಡ್ಡಿಮಾಡು; ತಡೆಮಾಡು.
  • (ರೂಪಕವಾಗಿ) (ಹೋಲಿಸುವುದರಿಂದ ಇತರ ವ್ಯಕ್ತಿ, ವಸ್ತು ಯಾ ವಿಷಯವನ್ನು) ಕಳೆಗುಂದಿಸು; ಮಂಕಾಗಿಸು; ಮಸುಳಿಸು; ನಿಸ್ತೇಜಗೊಳಿಸು; ಕಾಂತಿಹೀನಮಾಡು; ಮಸುಕುಗೊಳಿಸು.
  • (ರೂಪಕವಾಗಿ) ಕಾಂತಿಯಿಂದ ಮೀರಿಸು; ಹೆಚ್ಚು ಪ್ರಕಾಶಮಾನವಾಗಿರು; ಹೆಚ್ಚು ಉಜ್ಜ್ವಲವಾಗಿರು.
  • (ರೂಪಕವಾಗಿ) ಮೀರಿಸು; ಅತಿಶಯಿಸು: this discovery eclipsed all the rest ಈ ಸಂಶೋಧನೆ ಉಳಿದೆಲ್ಲವನ್ನೂ ಮೀರಿಸಿತು.

  • ecliptic
    ಗುಣವಾಚಕ
  • ಗ್ರಹಣದ; ಗ್ರಹಣಕ್ಕೆ ಸಂಬಂಧಿಸಿದ.
  • ಕ್ರಾಂತಿತ್ತದ ಯಾ ಅದಕ್ಕೆ ಸಂಬಂಧಿಸಿದ.

  • ecliptic
    ನಾಮವಾಚಕ
    (ಖಗೋಳ ವಿಜ್ಞಾನ) ಕ್ರಾಂತಿಚಕ್ರ; ಕ್ರಾಂತಿತ್ತ; ಭೂಮಿಯಿಂದ ನೋಡುವಾಗ ಒಂದು ವರ್ಷದಲ್ಲಿ ಸೂರ್ಯನು ನಕ್ಷತ್ರಸಮೂಹದ ಮುಖಾಂತರ ಚಲಿಸುವಂತೆ ಕಾಣುವ ಕಕ್ಷೆ; ಭೂಮಿಯ ಕಕ್ಷೆಯ ಸಮತಲವನ್ನು ವಿಸ್ತರಿಸಿದಾಗ ಅದು ಖಗೋಳವನ್ನು ತಲುಪಿ ರಚಿಸುವ ಮಹಾತ್ತ.

    eclogue
    ನಾಮವಾಚಕ
    ಲಘುಕಾವ್ಯ; ಕಿರುಕವನ; ಗ್ರಾಮೀಣಕಾವ್ಯ; ಮುಖ್ಯವಾಗಿ ಗ್ರಾಮಜೀವನವನ್ನು ಕುರಿತ, ಸಂವಾದರೂಪದಲ್ಲಿರುವ ಗೊಲ್ಲಗೀತೆ.

    eclosion
    ನಾಮವಾಚಕ
    ಬಹಿರ್ಗಮನ; ಹೊರಬರುವಿಕೆ; ಕೋಶಾವಸ್ಥೆಯಿಂದ ಕೀಟ ಯಾ ತತ್ತಿಯಿಂದ ಲಾರ್ವ ಹೊರಬರುವುದು.

    eco-
    ಸಮಾಸ ಪೂರ್ವಪದ
    ಪರಿಸರ-, ಪರಿಸರವಿಜ್ಞಾನ ಎಂಬ ಅರ್ಥಗಳಲ್ಲಿ ಬಳಸುವ ಪೂಪ.

    ecoclimate
    ನಾಮವಾಚಕ
    ಪರಿಸರ ವಾಯುಗುಣ; ಪರಿಸರದ ಅಂಗವಾಗಿ ಪರಿಣಮಿಸಿದ ವಾಯುಗುಣ.

    ecological
    ಗುಣವಾಚಕ
    ಪರಿಸರ ವಿಜ್ಞಾನದ ಯಾ ಅದಕ್ಕೆ ಸಂಬಂಧಿಸಿದ.

    ecologist
    ನಾಮವಾಚಕ
    ಪರಿಸರಶಾಸ್ತ್ರಜ್ಞ; ಪರಿಸರಶಾಸ್ತ್ರವನ್ನು ಅಧ್ಯಯನ ಮಾಡಿದವನು; ಪರಿಸರವಿಜ್ಞಾನದಲ್ಲಿ ತಜ್ಞ.


    logo