logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dapple-grey
ನಾಮವಾಚಕ
ಕಪ್ಪು ಚುಕ್ಕಿಗಳುಳ್ಳ ಬೂದುಬಣ್ಣದ ಕುದುರೆ.

dapple-grey
ಗುಣವಾಚಕ
(ಮುಖ್ಯವಾಗಿ ಕುದುರೆಗಳ ವಿಷಯದಲ್ಲಿ) ಕಪ್ಪು ಚುಕ್ಕೆಗಳುಳ್ಳ ಬೂದುಬಣ್ಣದ.

darbies
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) (ಬಹುವಚನ) (ಅಶಿಷ್ಟ) ಬೇಡಿ; ಕೈಕೋಳ.

Darby and Joan
ನಾಮವಾಚಕ ಪದಗುಚ್ಛ
ಅನ್ಯೋನ್ಯ ವೃದ್ಧ ದಂಪತಿಗಳು; ಪರಸ್ಪರಾನುರಾಗದಿಂದ ಕೂಡಿದ ಮುದಿ ದಂಪತಿಗಳು. Darby and Joan Club ವೃದ್ಧ ದಂಪತಿಗಳ ಕ್ಲಬ್ಬು; ವೃದ್ಧರ ಕ್ಲಬ್ಬು; ವಯಸ್ಸಾದವರ ವಿಹಾರಸಂಘ.

dare
ನಾಮವಾಚಕ
  • ಸಾಹಸ (ಕಾರ್ಯ); ಧೀರವರ್ತನೆ.
  • ಪ್ರತಿಭಟನೆ; ಸವಾಲು; ಧೈರ್ಯವಾಗಿ ಎದುರಿಸುವಿಕೆ.

  • dare
    ಸಕರ್ಮಕ ಕ್ರಿಯಾಪದ ನುಡಿಗಟ್ಟು
    I dare say ಸಾಧ್ಯ; ಸಂಭವ; ಇರಬಹುದು; ಆಗಿರಬಹುದು; ನನಗೆ ಸಂಭವವೆನಿಸುತ್ತದೆ; ಇಲ್ಲ ಎನ್ನುವುದಿಲ್ಲ.
  • ಧೈರ್ಯ ಮಾಡು; ಧೈರ್ಯ ತೋರು; ಧಾರ್ಷ ಹೊಂದಿರು: he did not dare to come ಅವನು ಬರಲು ಧೈರ್ಯ ಮಾಡಲಿಲ್ಲ. how dare you ನಿನಗೆಷ್ಟು ಧೈರ್ಯ? I dare swear ನಾನು ಧೈರ್ಯವಾಗಿ ಪ್ರಮಾಣ ಮಾಡಬಲ್ಲೆ; ನಿಜವೆಂದು ಧೈರ್ಯವಾಗಿ ಹೇಳುತ್ತೇನೆ.
  • ಯತ್ನಿಸು; ಕೈಹಾಕು; ಪ್ರಯತ್ನಮಾಡು; ಧೈರ್ಯ ತೋರು.
  • ಸಾಹಸ ಮಾಡು; ಅಪಾಯಕ್ಕೆ ಒಡ್ಡಿಕೊ: I dare a leap ಆದದ್ದಾಗಲಿ ಹಾರಿಬಿಡುತ್ತೇನೆ.
  • (ಯಾರನ್ನೇ) ಧಿಕ್ಕರಿಸು; ಪ್ರತಿಭಟಿಸು; ಎದುರಿಸು; ವಿರೋಧಿಸು.
  • (ಯಾವುದನ್ನೇ ಮಾಡಲು ಯಾ ಹೋರಾಡಲು) ಆಹ್ವಾನಿಸು; ಸವಾಲು ಹಾಕು.

  • daredevil
    ನಾಮವಾಚಕ
    ಹುಚ್ಚುಸಾಹಸಿ; ದುಸ್ಸಾಹಸಿ; ನಿರ್ಭೀತ ಸಾಹಸಿ; ಅಪಾಯವನ್ನು ಲಕ್ಷ್ಯ ಮಾಡದವನು.

    daredevil
    ಗುಣವಾಚಕ
    ಹುಚ್ಚುಸಾಹಸಿಯಾದ; ಅಪಾಯವನ್ನು ಲಕ್ಷ್ಯಮಾಡದ: a daredevil driver ಅಪಾಯವನ್ನು ಲಕ್ಷ್ಯ ಮಾಡದ ಚಾಲಕ.

    darg
    ನಾಮವಾಚಕ
    (ಸ್ಕಾಟ್ಲಂಡ್‍, ಉತ್ತರ ಇಂಗ್ಲಂಡ್‍ ಮತ್ತು ಆಸ್ಟ್ರೇಲಿಯ)
  • ದಿನಗೆಲಸ; ಒಂದು ದಿನದ ಕೆಲಸ.
  • ಕೆಲಸದ ಒಂದು ನಿರ್ದಿಷ್ಟ ಪ್ರಮಾಣ.

  • daring
    ನಾಮವಾಚಕ
  • ಸಾಹಸ; ಧೈರ್ಯ.
  • ಧಾರ್ಷ; ಸಾಹಸಕಾರ್ಯಕ್ಕೆ ತೊಡಗುವಂಥ ಎದೆಗಾರಿಕೆ.
  • ನಿರ್ಭೀತಿ.


  • logo