logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Cal.
ಸಂಕ್ಷಿಪ್ತ
California.

cal.
ಸಂಕ್ಷಿಪ್ತ
calorie(s).

Calabar bean
ನಾಮವಾಚಕ
ಆಹ್ರಿಕದ ಉಷ್ಣವಲಯದಲ್ಲಿ ಬೆಳೆಯುವ, ಹೆಸೂಸ್ಟಿಗ್ಮ ವೆನನೊಸಮ್‍ ಕುಲದ ಬಳ್ಳಿಯ, ಔಷಧೋಪಯೋಗಿಯಾದ, ಕಡುಕಂದುಬಣ್ಣದ, ವಿಷಪೂರಿತ ಬೀಜ.

calabash
ನಾಮವಾಚಕ
  • ಕ್ಯಾಲಬ್ಯಾಷ್‍; ದ್ರವ ಮೊದಲಾದವನ್ನು ಹಾಕಿಡಲು ಪಾತ್ರೆಯಂತೆ ಬಳಸುವ, ಸೋರೆ ಮೊದಲಾದ ಕಾಯಿಯ ಬುರುಡೆ.
  • ಬುರುಡೆಕಾಯಿ ಬಿಡುವ ಕ್ರೆಸೆಂಟಿಯ ಕುಲದ, ಉಷ್ಣವಲಯದ ಅಮೆರಿಕದ ಮರ.
  • ಈ ಮರದ ಹಣ್ಣು, ಕಾಯಿ.
  • ಈ ಬುರುಡೆಯಿಂದ ಮಾಡಿದ ಚುಂಗಾಣಿ.
  • ಬುರುಡೆ (ಆಕಾರದ) ಚುಂಗಾಣಿ.

  • calaber
    ನಾಮವಾಚಕ
    (ಬೂದು ಅಳಿಲಿನ) ತುಪ್ಪುಳ; ಬೂದುತುಪ್ಪಳ.

    calaboose
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಜೈಲು; ಬಂದಿಖಾನೆ; ಸೆರೆಮನೆ; ಕಾರಾಗೃಹ.

    calabrese
    ನಾಮವಾಚಕ
    ಒಂದು ಬಗೆಯ ಹೂಕೋಸು, ಕಾಲಿಹ್ಲವರು.

    calamanco
    ನಾಮವಾಚಕ
    (ಚರಿತ್ರೆ). ಒಂದು ಕಡೆ ಚೌಕುಳಿ ಯಾ ಪಟ್ಟೆ ನಮೂನೆಗಳಿರುವ, ಮೆರುಗುಕೊಟ್ಟ, ನುಣುಪು ಉಣ್ಣೆಬಟ್ಟೆ.

    calamander
    ನಾಮವಾಚಕ
    ಕರಿಮರ; ಬೀಟೆಮರ; ಪೀಠೋಪಕರಣಗಳಿಗೆ ಬಳಸುವ, ಡಯಾಪೈರಸ್‍ ಕುಲದ, ಕಪ್ಪು ಪಟ್ಟೆಗಳಿರುವ, ಕೆಂಗಂದು ಬಣ್ಣದ, ಭಾರತ ಸಿಂಹಳಗಳ ಒಂದು ಗಟ್ಟಿಮರ.

    calamary
    ನಾಮವಾಚಕ
    ಬೆಣಸ; ಬಂಡಸೆ; ಉದ್ದವೂ ಚೂಪೂ ಆದ ಒಳಚಿಪ್ಪು ಇರುವ, ಮುಖ್ಯವಾಗಿ ಲಾಲಿಗೊ ಕುಲದ, ಸ್ಕ್ವಿಡ್‍ ಮೀನು.


    logo