logo
भारतवाणी
bharatavani  
logo
Knowledge through Indian Languages
Bharatavani

Kumbarike Vrutti Padakosha (English-English-Kannada)
A B C D E F G H I J K L M N O P Q R S T U V W X Y Z

Pug Mill
A machine for mixing up plastic clay into a more homogenous mass.
ಮಣ್ಣನ್ನು ಹದವಾಗಿ ಕಲಸುವ ಯಂತ್ರ.

Putty
A cement of whiting and linseed oil.
ಕೆನೆಗಾರೆ, ನಯಗಾರೆ, ಸುಣ್ಣಕ್ಕೆ ಮರಳು ಹಾಕದೆ, ನೀರು ಹಾಕಿ ತಯಾರಿಸಿದಗಾರೆ, ಸಂದುಗಳನ್ನು ಮುಚ್ಚಲು ಉಪಯೋಗಿಸುವರು.

Pyrometer
An instrument for measuring high temperature.
ಹೆಚ್ಚಿನ ತಾಪಮಾನವನ್ನು ಅಳೆಯುವ ಉಷ್ಣಮಾಪಕ ಮಡಕೆಗಳನ್ನು ಸುಧಾರಿತ ಆವಿಗೆಯಲ್ಲಿಟ್ಟು ಸುಡುವಾಗ, ಅದರ ತಾಪಮಾನವನ್ನು ಪೈರೋಮೀಟರ್ ನಿಂದ ತಿಳಿಯುವರು.

Quartz
Filnt or silica.
ಸಿಲಿಕಾ ಹರಳು, ಮರಳು, ಹೊಯಿಗೆ, ಉಸುಕು.

Queens Ware
A hard cream coloured earthware introduced by Josiah Wedgwood in the late 18th century.
ಹದಿನೆಂಟನೆ ಶತಮಾನದಲ್ಲಿ ಕುಂಭ ತಜ್ಞ ಜೋಷೈ ವೆಡ್ಗವುಡ್ ಮಾಡಿದ ಕೆನೆಬಣ್ಣದ ಮಣ್ಣಿನ ಪಾತ್ರೆ.

Raku
Low fired earthen ware made of grogged open clay covered with low melting glaze and oxides, the pot is taken from the kiln (using long handel tongs) and reduced or treated with variou substances to change the colours of the glaze and oxides.
ಜಪಾನಿನ ಚಹಾಕೂಟಕ್ಕಾಗಿ ಹುಟ್ಟಿಬಂದ ಸಾಮಾನ್ಯ ಉಷ್ಮತೆಯಲ್ಲಿ ಸುಟ್ಟ ಕುಂಭ ವಸ್ತುವೆ ರಾಕು ಪಾಟರಿ ಜಪಾನಿನ ಸೆನ್ನೋರೈಕು ಎಂಬವನೆ, ರಾಕು ಪಾಟರಿಯ ನಿರ್ಮಾಣಕ್ಕೆ ಕಾರಣನಾದವನು ರಾಕು ಪಾಟರಿಯನ್ನು ಎಲ್ಲಾ ಕಡೆ ಸುಲಭವಾಗಿ ದೊರೆಯುವ ಮಣ್ಣಿನಿಂದಲೇ ಮಾಡುವರು. ರಾಕು ಮಡಕೆಯ ಸುಡತಿ ಬಹಳ ವಿಶಿಷ್ಟವಾದದ್ದು ಚಹ ಕೂಟಕ್ಕೆ ಬೇಕಾದ ಲೋಟ ಕಪ್ಪು ಮಗ್ಗು ಮುಂತಾದ ವಸ್ತುಗಳನ್ನು ಆವಿಗೆಯಿಂದ ತಗೆದು ಚಹ ಕೂಟದ ಅಡಿಗೆಯನ್ನು ತಯಾರಿಸಲು ಉಪಯೋಗಿಸುವರು ಸುಡುವ ಕ್ರಮ ಅರ್ಧಗಂಟೆಯಲ್ಲಿ ನಡೆದು ಹೋಗುತ್ತದೆ.

Raw clay
clay which has not been fired, green clay.
ಸುಡದೆ ಇರುವ ಕುಂಭ ವಸ್ತು.

Raw glaze
A glaze made with unfritted materials. Also a term used for glazes applied to glass ware.
ಒಂದು ಬಾರೆ ಸುಟ್ಟ ಇಲ್ಲವೆ ಸುಡದೆ ಇರುವ ಒಣಗಿದ ಗಡಿಗೆಗಳಿಗೆ ಗಾಜು ಮೈ ಭರಿಸುವುದು.

Raw Material
Not processed or manufactured.
ಕಚ್ಚಾ ಪದಾರ್ಥ, ಮಡಕೆ ತಯಾರಿಕೆಗೆ ಮಣ್ಣು ಕಚ್ಚಾ ಪದಾರ್ಥ.

Red ware
red colour pot.
ಕೆಂಪು ಮಡಕೆ, ಗ್ರಾಮೀಣ ಪ್ರದೇಶದ ಕುಂಬಾರರು ಕೆಂಪು ಮಡಿಕೆ ಮಾಡ ಬೇಕಾದಲ್ಲಿ ಆವಿಗೆಯ ಹಿಂದೆ ಇಟ್ಟಿರುವ ಕಿಂಡಿಗಳನ್ನು ಮುಚ್ಚದೆ ಹಾಗೆಯೇ ತೆರೆದಿಡುವುದರ ಮೂಲಕ ಕೆಂಪು ಮಡಿಕೆಗಳನ್ನು ಸಿದ್ಧಗೊಳಿಸುವುದು.


logo