(ಸಾಮಾನ್ಯವಾಗಿ ಸುಗಂಧ ಬೆರಸಿದ) ಪ್ರಸಾಧನವಾಗಿ ಹಚ್ಚಲು ಬಳಸುವ ಟಾಲ್ಕ ಪುಡಿ, ಚೂರ್ಣ.
talcy
ಗುಣವಾಚಕ
= talcky.
tale
ನಾಮವಾಚಕ
ಪದಗುಚ್ಛ
ಕಥೆ; ಕತೆ:
(ನಿಜವಾದ, ನಿಜವೆಂದು ಹೇಳಲಾದ ಯಾ ಮುಖ್ಯವಾಗಿ ಕಲ್ಪಿತವಾದ ಮತ್ತು ಕಲ್ಪನಾಶಕ್ತಿಯಿಂದ ನಿರೂಪಿತವಾದ) ಸಂಗತಿ, ಘಟನೆ, ಮೊದಲಾದವುಗಳ ಕಥನ.
ಸುಳ್ಳು ಕಥೆ; ವದಂತಿ; ಕಟ್ಟು, ಕಲ್ಪಿತ, ದಂತ–ಕಥೆ; ಅನೇಕ ವೇಳೆ ದುರುದ್ದೇಶದಿಂದ ಯಾ ನಂಬಿ ಗುಟ್ಟಾಗಿ ಹೇಳಿದ್ದನ್ನು ನಂಬಿಕೆ ಮುರಿದು ಹೇಳಿದ, ನಿಜವೆನ್ನಲಾದ ಸಂಗತಿಯ ವರದಿ: all sorts of tales will get about ಎಲ್ಲ ಬಗೆಯ ಸುಳ್ಳು ಕತೆಗಳೂ ಹರಡುತ್ತವೆ.
(ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ಒಟ್ಟು ಲೆಕ್ಕ, ಸಂಖ್ಯೆ; ಮೊತ್ತ: the tale is complete ಅದರ ಲೆಕ್ಕ ಮುಗಿಯಿತು; ಅದನ್ನು ಎಣಿಸಿದ್ದಾಯಿತು.
talebearer
ನಾಮವಾಚಕ
ಚಾಡಿಕೋರ; ಪಿಸುಣ.
talebearing
ನಾಮವಾಚಕ
ಚಾಡಿ; ಚಾಡಿ ಹೇಳುವುದು.
talebearing
ಗುಣವಾಚಕ
ಚಾಡಿ ಹೇಳುವ.
talent
ನಾಮವಾಚಕ
ಪ್ರತಿಭೆ; ವಿಶೇಷ ಶಕ್ತಿ, ಸಾಮರ್ಥ್ಯ: a talent for music ಸಂಗೀತದಲ್ಲಿ ಪ್ರತಿಭೆ. he has real talent ಅವನಿಗೆ ನಿಜವಾದ ಸಾಮರ್ಥ್ಯವಿದೆ.
ಅತಿಶಯ ಬಉದ್ಧಿಶಕ್ತಿ; ಮೇಧಾಶಕ್ತಿ; ಪ್ರಜ್ಞಾಶಕ್ತಿ.
ಬಉದ್ಧಿಶಾಲಿ(ಗಳು); ಮೇಧಾವಿ(ಗಳು); ಪ್ರತಿಭಾನ್ವಿತ(ರು): all the talent of the country ದೇಶದ ಸಮಸ್ತ ಪ್ರತಿಭಾವಂತ ಜನ. he is a real talent ಅವನು ನಿಜವಾದ ಮೇಧಾವಿ. plenty of local talent ಯಥೇಚ್ಫವಾದ ದೇಶೀಯ ಪ್ರತಿಭೆ (ಪ್ರತಿಭಾವಂತರು).
(ಪ್ರಾಚೀನ ಅಸ್ಸಿರಿಯನರು, ಗ್ರೀಕರು, ರೋಮನರು, ಮೊದಲಾದವರಲ್ಲಿ ಬಳಕೆಯಲ್ಲಿದ್ದ) ಒಂದು ತೂಕ ಮತ್ತು ನಾಣ್ಯಮಾನ.
(ಆಡುಮಾತು) ಲೈಂಗಿಕತೃಪ್ತಿಯ ಭರವಸೆಯ ದೃಷ್ಟಿಯಿಂದ ಪರಿಗಣಿಸಿದ ಭಿನ್ನಲಿಂಗದ ವ್ಯಕ್ತಿಗಳು; ಲೈಂಗಿಕ ತೃಪ್ತಿದಾಯಕ ಸ್ತ್ರೀಯರು ಯಾ ಪುರುಷರು.
talent-scout
ನಾಮವಾಚಕ
ಪ್ರತಿಭಾ –ಶೋಧಕ, ಅನ್ವೇಷಕ; ಮುಖ್ಯವಾಗಿ ಕ್ರೀಡೆ ಮತ್ತು ಮನರಂಜನಾ ಉದ್ಯೋಗಗಳಿಗೆ ವಿಶೇಷ ಪ್ರತಿಭೆಯುಳ್ಳವರನ್ನು ಹುಡುಕುವವನು.