logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

obstinacy
ನಾಮವಾಚಕ
ಹಠಸ್ವಭಾವ; ಹಠಮಾರಿತನ; ಮೊಂಡುತನ; ಪಟ್ಟು ಬಿಡದಿರುವ ಸ್ವಭಾವ; ಯಾರ ಮಾತನ್ನೂ ಕೇಳದ, ತನ್ನ ಇಚ್ಚೆಯಂತೆಯೇ ನಡೆಯುವ ಮನೋವೃತ್ತಿ.

obstinate
ಗುಣವಾಚಕ
  • ಹಠದ; ಹಠಮಾರಿತನದ; ಮೊಂಡುತನದ; ಬಗ್ಗದ; ಸಗ್ಗದ; ಜಗ್ಗದ; ಪಟ್ಟು ಬಿಡದ.
  • ದುರಾಗ್ರಹದ; ತನ್ನ ಇಚ್ಚೆಯಂತೆಯೇ ನಡೆಯುವ.
  • ಜಗ್ಗದ; ಸಗ್ಗದ; ಚಿಕಿತ್ಸೆ ಮೊದಲಾದವುಗಳಿಗೆ ಸುಲಭವಾಗಿ ಅಣಗದ, ಬಗ್ಗದ.

  • obstinately
    ಕ್ರಿಯಾವಿಶೇಷಣ
  • ಹಠ ಸ್ವಭಾವದಿಂದ; ಹಠಮಾರಿಯಾಗಿ; ಮೊಂಡುತನದಿಂದ.
  • ಸ್ವಚ್ಛಂದ ಪ್ರವೃತ್ತಿಯಿಂದ; ದುರಾಗ್ರಹದಿಂದ; ಯಾರ ಮಾತನ್ನೂ ಕೇಳದೆ; ತನ್ನ ಇಚ್ಛೆಯಂತೆಯೇ ನಡೆಯುತ್ತ.

  • obstreperous
    ಗುಣವಾಚಕ
  • ಗದ್ದಲ, ಗಲಾಟೆ–ಮಾಡುವ; (ಗಟ್ಟಿಯಾಗಿ) ಕೂಗಾಡುವ; ಗುಲ್ಲೆಬ್ಬಿಸುವ.
  • ದೊಂಬಿ ಮಾಡುವ; ಗೊಂದಲವೆಬ್ಬಿಸುವ; ಹತೋಟಿಗೊಳಪಡದೆ, ಶಿಸ್ತಿಗೊಳಪಡದೆ–ರಂಪ ಮಾಡುವ.

  • obstreperously
    ಕ್ರಿಯಾವಿಶೇಷಣ
  • ಗದ್ದಲ ಮಾಡುತ್ತ; ಗುಲ್ಲೆಬ್ಬಿಸುತ್ತ; (ಗಟ್ಟಿಯಾಗಿ) ಕೂಗಾಡುತ್ತ.
  • ದೊಂಬಿ ಮಾಡುತ್ತ; ಗದ್ದಲವೆಬ್ಬಿಸುತ್ತ; ಹತೋಟಿಗೊಳಪಡದೆ, ಶಿಸ್ತಿಗೊಳಪಡದೆ–ರಂಪ ಮಾಡುತ್ತ.

  • obstreperousness
    ನಾಮವಾಚಕ
  • ಗದ್ದಲ ಮಾಡುವ, (ಗಟ್ಟಿಯಾಗಿ) ಕೂಗಾಡುವ–ಸ್ವಭಾವ, ನಡೆವಳಿಕೆ; ಗುಲ್ಲೆಬ್ಬಿಸುವ ಮನೋವೃತ್ತಿ ಯಾ ವರ್ತನೆ.
  • ಅಶಾಸ್ಯತೆ; ದೊಂಬಿ ಮಾಡುವ ಸ್ವಭಾವ; ಗೊಂದಲವೆಬ್ಬಿಸುವ, ರಂಪ ಮಾಡುವ ಪ್ರವೃತ್ತಿ.

  • obstruct
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಮುಖ್ಯವಾಗಿ ಪಾರ್ಲಿಮೆಂಟಿನಲ್ಲಿ ಬರಿಯ ಮಾತಿನಿಂದ ಕಾಲಹರಣ ಮಾಡಿ) ಅಡ್ಡಿಮಾಡುವ ವಿಧಾನವನ್ನು ಅನುಸರಿಸು; ನಿರೋಧ ನೀತಿಯನ್ನು ಅನುಸರಿಸು.
  • ತಡೆ; ತಡೆಯೊಡ್ಡು; ಅಡ್ಡಗಟ್ಟು; ದುರ್ಗಮಗೊಳಿಸು; ಅಡಚಣೆಗಳನ್ನು ತಂದೊಡ್ಡು; ಹಾದುಹೋಗಲು ಕಷ್ಟವಾಗುವಂತೆ ಮಾಡು.
  • (ಪ್ರಗತಿಗೆ) ಅಡ್ಡಿ ಮಾಡು; ಅಡ್ಡಿಪಡಿಸು; ತಡೆಯೊಡ್ಡು; (ಪ್ರಗತಿಯನ್ನು) ನಿಲ್ಲಿಸು; ತಡೆಗಟ್ಟು; ನಿರೋಧಿಸು.

  • obstruction
    ನಾಮವಾಚಕ
  • ತಡೆಯುವಿಕೆ; ತಡೆಯೊಡ್ಡುವಿಕೆ; ಅಡ್ಡಗಟ್ಟುವಿಕೆ; ಪ್ರತಿರೋಧ; ಅಡಚಣೆಗಳನ್ನು ಒಡ್ಡುವಿಕೆ.
  • ದುರ್ಗಮಗೊಳಿಸುವಿಕೆ; ಹಾದುಹೋಗಲು ಕಷ್ಟವಾಗುವಂತೆ ಮಾಡುವುದು.
  • ಅಡ್ಡಿ; ತಡೆ; ಅಡಚಣೆ; ತಡೆಗಟ್ಟು; ಎಡರು; ಅಡ್ಡಗಟ್ಟು; ಪ್ರತಿಬಂಧ; ನಿರೋಧ; ಪ್ರತಿರೋಧ; ವಿಘ್ನ.
  • ಪ್ರಗತಿ ನಿರೋಧ; (ಮುಖ್ಯವಾಗಿ ಪಾರ್ಲಿಮೆಂಟಿನ ವ್ಯವಹಾರಗಳ ವಿಷಯದಲ್ಲಿ) (ಬರಿಯ ಮಾತು ಮೊದಲಾದವುಗಳಿಂದ ಉದ್ದೇಶಪೂರ್ವಕವಾಗಿ ಕಾಲಹರಣ ಮಾಡಿ) ಪ್ರಗತಿಯನ್ನು–ನಿಲ್ಲಿಸುವುದು, ತಡೆಗಟ್ಟುವುದು, ಅಡ್ಡಿಪಡಿಸುವುದು; ಅಡ್ಡಿಮಾಡುವ ವಿಧಾನವನ್ನನುಸರಿಸುವುದು; ವಿಳಂಬ ನೀತಿಯನ್ನು ಯಾ ನಿರೋಧ ನೀತಿಯನ್ನು ಅನುಸರಿಸುವುದು.
  • (ಕ್ರೀಡೆ) (ಕೆಲವು ಪಂದ್ಯಗಳಲ್ಲಿ ಕಾನೂನು ಬಾಹಿರ ವರ್ತನೆಯಾಗಿ ಇನ್ನೊಬ್ಬ ಆಟಗಾರನಿಗೆ) ತಡೆಯುಂಟುಮಾಡುವುದು; ಆಡಚಣೆ ಮಾಡುವುದು.
  • (ವೈದ್ಯಶಾಸ್ತ್ರ) (ಮುಖ್ಯವಾಗಿ ಕರುಳಿನಲ್ಲಿ) ನಾಳ–ನಿರೋಧ, ಅಡಚಣೆ; ಶರೀರದ ನಾಳ ಮಾರ್ಗದಲ್ಲಿ ಉಂಟಾಗುವ ಅಡಚಣೆ.

  • obstruction-guard
    ನಾಮವಾಚಕ
    ಅಡ್ಡಿನಿವಾರಕ; ಅಡ್ಡಿಕಾಪು; ಕಂಬಿಗಳ ಯಾ ಹಳಿಗಳ ಮೇಲಿರಬಹುದಾದ ಅಡಚಣೆಗಳನ್ನು ದೂಡಿ ಹಾಕಲು ರೈಲಿನ ಎಂಜಿನಿನ ಮುಂಭಾಗಕ್ಕೆ ಹಾಕಿರುವ ಸಲಾಕಿ.

    obstructionism
    ನಾಮವಾಚಕ
    ಪ್ರತಿರೋಧ, ಅಡ್ಡಿ–ನೀತಿ; ವಿಳಂಬ, ನಿರೋಧ–ನೀತಿ.


    logo