logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

magnetization
ನಾಮವಾಚಕ
ಕಾಂತೀಕರಣ; ವಸ್ತುವಿಗೆ (ಸಾಮಾನ್ಯವಾಗಿ ಕಬ್ಬಿಣದ ವಸ್ತುವಿಗೆ) ಕಾಂತತ್ವ ಉಂಟು ಮಾಡುವುದು.

magnetize
ಸಕರ್ಮಕ ಕ್ರಿಯಾಪದ
  • ಕಾಂತೀಕರಿಸುವ; (ಸಾಮಾನ್ಯವಾಗಿ ಕಬ್ಬಿಣದ ವಸ್ತುವನ್ನು) ಸೂಜಿಗಲ್ಲಾಗಿಸು; ಕಾಂತವನ್ನಾಗಿ ಮಾಡು.
  • (ರೂಪಕವಾಗಿ) (ಸೂಜಿಗಲ್ಲಿನಂತೆ) ಸೆಳೆ; ಆಕರ್ಷಿಸು.
  • = mesmerize.

  • magnetizer
    ನಾಮವಾಚಕ
    ಕಾಂತೀಕಾರಕ; (ಸಾಮಾನ್ಯವಾಗಿ ಕಬ್ಬಿಣದ ವಸ್ತುವನ್ನು) ಸೂಜಿಗಲ್ಲಾಗಿಸುವ ವ್ಯಕ್ತಿ ಯಾ ವಸ್ತು.

    magneto
    ನಾಮವಾಚಕ
    ಮ್ಯಾಗ್ನೆಟೋ; ಶಾಶ್ವತ ಅಯಸ್ಕಾಂತದ ನೆರವಿನಿಂದ ಉಚ್ಚ ವೋಲ್ಟತೆಯನ್ನು ಉತ್ಪತ್ತಿ ಮಾಡುವ, (ಮುಖ್ಯವಾಗಿ ಅಂತರ್ದಹನ ಯಂತ್ರವನ್ನು ಹೊತ್ತಿಸಲು ಬಳಸುವ) ವಿದ್ಯುಜ್ಜನಕ.

    magneto-
    ಸಮಾಸ ಪೂರ್ವಪದ
    ಅಯಸ್ಕಾಂತದ ಯಾ ಕಾಂತತ್ವಕ್ಕೆ ಸಂಬಂಧಿಸಿದ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.

    magneto-electric
    ಗುಣವಾಚಕ
    ಕಾಂತವಿದ್ಯುದೀಯ; ಕಾಂತವಿದ್ಯುತ್ತಿನ; (ವಿದ್ಯುಜ್ಜನಕದ ವಿಷಯದಲ್ಲಿ) ಶಾಶ್ವತ ಅಯಸ್ಕಾಂತಗಳನ್ನು ಬಳಸುವ.

    magneto-electricity
    ನಾಮವಾಚಕ
    ಕಾಂತ ವಿದ್ಯುಚ್ಛಕ್ತಿ; ಶಾಶ್ವತ ಅಯಸ್ಕಾಂತಗಳನ್ನು ಬಳಸಿ ತಯಾರಿಸಿದ ವಿದ್ಯುಚ್ಛಕ್ತಿ.

    magnetograph
    ನಾಮವಾಚಕ
    ಕಾಂತಲೇಖಿ; ಕಾಂತಕ್ಷೇತ್ರಕ್ಕೆ ಸಂಬಂಧಿಸಿದ ಅಳತೆಗಳನ್ನು ದಾಖಲಿಸುವ ಉಪಕರಣ.

    magnetometer
    ನಾಮವಾಚಕ
    ಕಾಂತಮಾಪಕ; (ಮುಖ್ಯವಾಗಿ ಭೂಮಿಯ ಕಾಂತತೆಯ) ಕಾಂತೀಯ ಬಲಗಳನ್ನು ಅಳೆಯುವ ಉಪಕರಣ.

    magnetometry
    ನಾಮವಾಚಕ
    ಕಾಂತಮಾಪನ; ಕಾಂತಮಾಪಕದ ನೆರವಿನಿಂದ ಅಳತೆ ಮಾಡುವುದು.


    logo